ಕಳೆದ ಮೇ ತಿಂಗಳಿನಿಂದ ಕಚ್ಚಾ ತೈಲದ ಬೆಲೆ ಇಳಿಕೆ ಆಗಿದ್ದರೂ ಕೂಡ ಗೃಹಬಳಕೆಯ LPG ದರವನ್ನು ಇಳಿಕೆ ಮಾಡಿಲ್ಲ ಎಂದು ಎಲ್ಲರೂ ಕೇಂದ್ರ ಸರ್ಕಾರವನ್ನು (Central government) ಪ್ರಶ್ನಿಸುತ್ತಿದ್ದರು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಗೃಹಬಳಕೆ ಎಲ್ಲಾ ಪದಾರ್ಥಗಳ ಬೆಲೆ ಕೂಡ ಗಗನಕ್ಕೇರಿದೆ. ಇದರ ಜೊತೆಗೆ LPG ಗೃಹಬಳಕೆಯ ಸಿಲಿಂಡರ್ (Gas Cylinder) ಬೆಲೆ ಕೂಡ ವಿಪರೀತವಾಗಿ ಏರಿಕೆ ಆಗಿರುವುದು ಬಡವರು ಹಾಗೂ ಸಾಮಾನ್ಯ ವರ್ಗದವರಿಗೆ ವಿಪರೀತ ಹೊರೆಯಾಗಿತ್ತು.
ಪ್ರಸ್ತುತವಾಗಿ ನಮ್ಮ ದೇಶದಲ್ಲಿ ಬಹುತೇಕ ಭಾರತದ ಎಲ್ಲಾ ರಾಜ್ಯದಲ್ಲೂ ಕೂಡ ಅಡುಗೆ ಸಿಲಿಂಡರ್ ಬೆಲೆ 1000 ಗಡಿದಾಟಿದೆ. ಈ ಬೆಲೆಯನ್ನು ಕಡಿಮೆ ಮಾಡುವಂತೆ ಅಥವಾ ಸ್ಥಗಿತಗೊಂಡಿದ್ದ ಸಬ್ಸಿಡಿ (Subsidy) ಹಣವನ್ನು ಮತ್ತೆ ಪುನರ್ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಪದೇಪದೇ ಕೇಳಿಕೊಳ್ಳಲಾಗುತ್ತಿತ್ತು.
ವಾಣಿಜ್ಯ ತೆರಿಗೆ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 62,600/-
ಅಂತಿಮವಾಗಿ ಕೇಂದ್ರ ಸರ್ಕಾರದ ವತಿಯಿಂದ ಈ ಕುರಿತು ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Minister Anuragh Takoor) ಅವರು ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿ (PM Narendra Modi) ಅವರು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ LPG ಸಿಲಿಂಡರ್ ಖರೀದಿಸುವ ಗ್ರಾಹಕರ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡುತ್ತಿದ್ದರು.
ಹಲವು ತಿಂಗಳುಗಳವರೆಗೆ ದೇಶದ ಅನೇಕ ಫಲಾನುಭವಿಗಳ ಖಾತೆಗೆ LPG ಹಣವು ವರ್ಗಾವಣೆ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ಕೊರೋನಾ ಅವಧಿಯಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಾಗೆಯೇ ಕೇಂದ್ರ ಸರ್ಕಾರದ ವತಿಯಿಂದ ಉಜ್ವಲ ಯೋಜನೆಯಡಿ (Ujwal Scheme) ಉಚಿತವಾಗಿ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಕೂಡ ಹಂಚಿಕೆ ಮಾಡುವ ದೇಶದ 75 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ LPG ಕಲೆಕ್ಷನ್ ನೀಡಿ ಹೊಗೆಮುಕ್ತ ವಾತಾವರಣದಲ್ಲಿ ಗೃಹಿಣಿಯರಿಗೆ ಅಡುಗೆ ಮಾಡುವ ಅನುಕೂಲತೆ ಕಲ್ಪಿಸಿಕೊಡಲಾಗಿದೆ.
ಉಜ್ವಲ್ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳು ಕೂಡ ದುಬಾರಿಯಾಗಿರುವ LPG ಬೆಲೆಯನ್ನು ತೆರಲಾರದೆ ಸಮಸ್ಯೆ ಪಡುತ್ತಿದ್ದಾರೆ. ಅಂತಿಮವಾಗಿ ಸರ್ಕಾರ ಜನಸಾಮಾನ್ಯರ ಅಹವಾಲು ಅರಿತು LPG ಸಿಲಿಂಡರ್ ಬೆಲೆ ಇಳಿಸುವ ಕುರಿತು ಸಿಹಿ ಸುದ್ದಿಯನ್ನು ನೀಡಿದೆ. ಆಗಸ್ಟ್ ತಿಂಗಳಿನಲ್ಲಿ ದೇಶದ ಹಲವು ಭಾಗಗಳಲ್ಲಿ LPG ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ 1,105.50 ರೂ. ದೆಹಲಿಯಲ್ಲಿ 1053ರೂ. ಮುಂಬೈನಲ್ಲಿ 1052.50 ರೂ. ಚೆನ್ನೈನಲ್ಲಿ 1079 ರೂ. ಇದೆ. ಮುಂದಿನ ತಿಂಗಳಿಂದ ಇದರಲ್ಲಿ 14.2 KG ಸಿಲಿಂಡರ್ ಬೆಲೆ ರೂ.200 ಇಳಿಕೆ ಮತ್ತು ಉಜ್ವಲ ಯೋಜನೆಯ ಸಿಲಿಂಡರ್ ಬಳಿಯನ್ನು 400 ಕಡಿತಗೊಳಿಸುವುದಾಗಿ ಸರ್ಕಾರ ತಿಳಿಸಿದೆ.
ಇದರಿಂದ ವಾರ್ಷಿಕವಾಗಿ ಸರ್ಕಾರಕ್ಕೆ 10,000 ಕೋಟಿ ಆರ್ಥಿಕ ಹೊರೆಯಾಗಬಹುದು ಈ ವರ್ಷದಲ್ಲಿ 7,680 ಕೋಟಿ ವೆಚ್ಚ ಆಗುತ್ತದೆ ಎಂದು ಅಂದಾಜಿಸಲಾಗಿದ್ದು ಆದರೂ ಕೂಡ ಸರ್ಕಾರ ಈ ಯೋಜನೆಯನ್ನು ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊರೆ ಕಡಿಮೆ ಮಾಡುವ ಸಲುವಾಗಿ ಜಾರಿಗೆ ತರಲಿದೆ ಎನ್ನುವ ಖಚಿತ ಮಾಹಿತಿ ಹೊರ ಬಿದ್ದಿದೆ.
ಈ ಕುರಿತು ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ಈ ಬಾರಿ ಸಬ್ಸಿಡಿ ರೂಪದಲ್ಲಿ ನೇರವಾಗಿ ಬಳಕೆದಾರನ ಬ್ಯಾಂಕ್ ಖಾತೆಗೆ ಹಣ ಹಾಕುವುದರ ಬದಲಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಕಂಪನಿಗಳಿಗೆ ಸಬ್ಸಿಡಿ ಹಣ ನಿಡಲು ಸರ್ಕಾರ ನಿರ್ಧಾರ ಮಾಡಿದೆ. ಕೇಂದ್ರದ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಈ ರೀತಿಯ ಒಂದು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ದೊರಕಿದೆ.