ಅಂಗವಿಕಲತೆ (Disability) ಹೊಂದಿದ್ದರು ಕೂಡ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುವ ವಿಶೇಷ ಚೇತನರ ಆತ್ಮಸ್ಥೈರ್ಯವನ್ನು ಮೆಚ್ಚಲೇಬೇಕು. ಇವರನ್ನು ಪ್ರಶಂಸಿಸುವುದು ಮಾತ್ರವಲ್ಲದೆ ಸಮಾಜದಲ್ಲಿ ಇವರಿಗೂ ಕೂಡ ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕು.
ಈಗಾಗಲೇ ನಮ್ಮ ಸುತ್ತಮುತ್ತ ನಾವು ಅಂಗವಿಕಲತೆ ಹೊಂದಿದ್ದರೂ ಕೂಡ ವಿದ್ಯಾಭ್ಯಾಸ ಮಾಡುತ್ತಿರುವ, ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಯಾವುದೇ ಸಾಮಾನ್ಯ ವ್ಯಕ್ತಿಗಿಂತ ಕಡಿಮೆ ಇಲ್ಲದಂತೆ ಜೀವನ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುವಂತಹ ಸಾಕಷ್ಟು ಜನರನ್ನು ನೋಡಿದ್ದೇವೆ.
ಇನ್ಮುಂದೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಪಡೆಯಲು e-KYC ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದಿಯೋ ಇಲ್ಲವೋ ಎನ್ನುವುದನ್ನು ಈ ರೀತಿ ಚೆಕ್ ಮಾಡಿ.!
ಇಂತವರು ಎಲ್ಲರಿಗೂ ಸ್ಫೂರ್ತಿ ಆದರೆ ಅವರ ಬದುಕು ನಿಜವಾಗಿಯೂ ಅಷ್ಟು ಸರಳವಾಗಿಲ್ಲ. ಇವರ ರಕ್ಷಣೆಗಾಗಿ ಮತ್ತು ಇವರ ಕುಂದು ಕೊರತೆಗಳ ನಿವಾರಣೆಗಾಗಿ ವಿಕಲಚೇತರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ (dwdsc) ಕೂಡ ಇದೆ. ಈಗ ಇಲಾಖೆ ವತಿಯಿಂದ ವಿಶೇಷ ಚೇತನರಿಗಾಗಿಯೇ ಹಲವು ಯೋಜನೆಗಳು ಜಾರಿ ಮಾಡಿ ಅವರಿಗೆ ಬದುಕಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡಲಾಗುತ್ತದೆ.
ವಿಶೇಷ ಚೇತನರು ಅರ್ಜಿ ಸಲ್ಲಿಸಿ ಈ ಸೌಕರ್ಯಗಳ ಪ್ರಯೋಜನ ಪಡೆಯಬಹುದು ಅಂಗ ವೈಫಲ್ಯತೆ ಹೊಂದಿರುವವರಿಗೆ ಸರ್ಕಾರದಿಂದ ಅಂಗವಿಕಲ ವೇತನ (Pebsion) ಸಿಗುತ್ತದೆ ಮತ್ತು ಸರ್ಕಾರ ರೂಪಿಸುವ ಅನೇಕ ಕಲ್ಯಾಣ ಯೋಜನೆಗಳಲ್ಲಿ ಇವರಿಗೆ ಮೀಸಲಾತಿ ಕೂಡ ಇರುತ್ತದೆ. ವಿದ್ಯಾಭ್ಯಾಸ, ವೈದ್ಯಕೀಯ ಶುಲ್ಕ ಸೇರಿದಂತೆ ಸರ್ಕಾರಿ ಹುದ್ದೆಗಳನ್ನು ಹೊಂದುವಾಗಲು ಕೂಡ ಇವರಿಗೆ ಮೀಸಲಾತಿ ನೀಡಲಾಗುತ್ತಿದೆ.
ಸ್ವಂತ ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.! ನಿಮ್ಮ ಕನಸಿನ ಮನೆ ನನಸಾಗಿಸಿಕೊಳ್ಳಿ.!
ಇವುಗಳ ಜೊತೆಗೆ ಕರ್ನಾಟಕ ಸರ್ಕಾರ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಕೂಡ ವಿಕಲ ಚೇತರಿಗಾಗಿ ಕೆಲ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದು ಇವರನ್ನು ಆರ್ಥಿಕವಾಗಿ ಸದೃಢನನ್ನಾಗಿಸುವ ಮತ್ತು ಇವರಿಗೆ ಜೀವನೋಪಾಯಕ್ಕಾಗಿ ಅನುಕೂಲತೆ ಮಾಡಿಕೊಡುವ ಕಾರ್ಯ ಮಾಡುತ್ತಿದೆ.
ಅಂತೆಯೇ ಈ ವರ್ಷದ ಸಾಲಿನಲ್ಲಿ ಕೂಡ ವಿಕಲಚೇತರಿಗಾಗಿ ಕೆಲವೊಂದು ಯೋಜನೆಗಳನ್ನು ರೂಪಿಸಿ ಇವುಗಳ ಅವಶ್ಯಕತೆ ಇರುವವರಿಂದ ಅರ್ಜಿ ಆಹ್ವಾನ ಮಾಡಿದೆ. ಸೂಕ್ತ ದಾಖಲೆ ಜೊತೆ ಅರ್ಜಿ ಸಲ್ಲಿಸುವ ವಿಕಲಚೇತನರು ಈಗ ಸರ್ಕಾರದಿಂದ ಈ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು. ಯಾವೆಲ್ಲ ಯೋಜನೆಗಳು ಲಭ್ಯವಿದೆ? ಏನೆಲ್ಲ ದಾಖಲೆಗಳನ್ನು ನೀಡಬೇಕು? ಅರ್ಜಿ ಸಲ್ಲಿಸುವುದು ಎಲ್ಲಿ ಮತ್ತು ಹೇಗೆ ಇದರ ಕುರಿತಾದ ವಿವರಣೆ ಇಲ್ಲಿದೆ ನೋಡಿ.
ವಿಶೇಷ ಚೇತನರಿಗಾಗಿ ಜಾರಿ ಆಗಿರುವ ಯೋಜನೆಗಳು:-
* SSLC ನಂತರವು ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸುವಂತಹ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್
* ದೈಹಿಕವಾಗಿ ಅಂಗವಿಕಲತೆ ಹೊಂದಿರುವಂತಹ ವ್ಯಕ್ತಿಗಳಿಗೆ ಸರ್ಕಾರದಿಂದ ಉಚಿತವಾಗಿ ಮೋಟಾರ್ ದ್ವಿಚಕ್ರ ವಾಹನ ವಿತರಣೆ
* ದೃಷ್ಟಿ ದೋಷ ಹೊಂದಿರುವಂತಹ ವ್ಯಕ್ತಿಗಳಿಗೆ ಬ್ರೈಲ್ ಕಿಟ್
* ಶ್ರವಣದೋಷ ಉಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ
* ವಿಶೇಷ ಚೇತನರಿಗೆ ಅವಶ್ಯಕತೆ ಇರುವ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ
ಬೇಕಾಗುವ ದಾಖಲೆಗಳೇನು:-
* ಆಧಾರ್ ಕಾರ್ಡ್
* ಪಡಿತರ ಚೀಟಿ
* ಜಾತಿ ಪ್ರಮಾಣ ಪತ್ರ
* UIDIಕಾರ್ಡ್
ಎಲ್ಲಿ ಅರ್ಜಿ ಸಲ್ಲಿಸಬೇಕು:-
* ಈ ಯೋಜನೆಗಳ ಪ್ರಯೋಜನ ಪಡೆಯಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ
* ಈ ಮೇಲೆ ತಿಳಿಸಿದ ದಾಖಲೆಗಳ ಪ್ರತಿಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.
* ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕರ್ನಾಟಕ ಸರ್ಕಾರ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸರ್ವಲೀಕರಣ ಇಲಾಖೆ ಅಧಿಕೃತ ವೆಬ್ಸೈಟ್ https://dwdsc.karnataka.gov.in ಭೇಟಿಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.