ಹೆಚ್ಚುತ್ತಿರುವ ವಾಯು ಮಾಲಿನ್ಯದ ನಿಯಂತ್ರಣಕ್ಕಾಗಿ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಸರ್ಕಾರವು (Government) ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ದೇಶದಲ್ಲಿ 2070 ರ ವೇಳೆಗೆ ಸಂಪೂರ್ಣ ಶೂನ್ಯ ಹೊರ ಸೂಸುವಿಕೆಯ ವಾಹನಗಳು ಇರಬೇಕೆಂದು ಕೇಂದ್ರ ಸರ್ಕಾರದ ಗುರಿಯಾಗಿದೆ.
ಅದಕ್ಕಾಗಿ ಸಾಕಷ್ಟು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರದ ಧ್ಯೇಯಗಳಿಗೆ ರಾಜ್ಯ ಸರ್ಕಾರಗಳು ಕೂಡ ಸ್ಪಂದಿಸುತ್ತಿದ್ದು ವಾಹನಗಳ ಅನಿಲ ಹೊರಸುವಿಕೆ ಕಾರಣದಿಂದಾಗಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ತಮ್ಮ ರಾಜ್ಯ ಮತ್ತು ಸರ್ಕಾರಗಳ ಮಟ್ಟಿಗೆ ವಿಶೇಷ ಕಾನೂನುಗಳನ್ನು ತರುತ್ತಿವೆ.
ಅದರಲ್ಲಿ ಪ್ರಸ್ತುತವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಮೋಹನ್ ಯಾದವ್ ರವರು (Madya Pradesh PM Mohan Yadav) ಘೋಷಿಸಿರುವ ಒಂದು ವಿಶೇಷ ಕೊಡುಗೆ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಮನೆಗೆ ಲಿಫ್ಟ್ ಹಾಕಿಸಲು ಎಷ್ಟು ಖರ್ಚು ಆಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ವಾಯುಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕಲ್ ವಾಹನಗಳ ಬಳಕೆಯು ಕೂಡ ಉತ್ತಮ ಪರಿಹಾರ ಎನ್ನುವುದನ್ನು ಪರಿಗಣಿಸಿ
ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತೆರಿಗೆ ರಿಯಾಯಿತಿ ಸೇರಿದಂತೆ ಹಲವು ಕೊಡುಗೆಯನ್ನು ಇತರ ರಾಜ್ಯ ಸರ್ಕಾರಗಳಂತೆ ಮಧ್ಯಪ್ರದೇಶ ಸರ್ಕಾರವು ಇನ್ನು ಮುಂದೆ ನೀಡಲಿದೆ.
ಈ ಕುರಿತು ಕಳೆದ ಭಾನುವಾರ ನಡೆದ ಗ್ವಾಲಿಯರ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಖರೀದಿಸುವ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ರೂ.40,000 ಆರ್ಥಿಕ ನೆರವು (Financial Assistance) ನೀಡುವುದಾಗಿ
ಘೋಷಣೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಅವರ ಮಹತ್ವದ ಬಗ್ಗೆ ಮಾತನಾಡುತ್ತಾ ಹಲವಾರು ಕಲ್ಯಾಣ ಯೋಜನೆಗಳನ್ನು ಕಾರ್ಮಿಕರಕ್ಕಾಗಿ ಜಾರಿಗೆ ತಂದಿರುವುದರ ಬಗ್ಗೆ ವಿವರಿಸಿದ ಸಂದರ್ಭದಲ್ಲಿ ಈ ಕೊಡುಗೆ ಬಗ್ಗೆ ಕೂಡ ತಿಳಿಸಿದರು. ದೆಹಲಿಯಲ್ಲಿ (Delhi) ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ.
ಈ ಸುದ್ದಿ ಓದಿ:- ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!
ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಅಲ್ಲಿನ ಸರ್ಕಾರವು ಈಗಾಗಲೇ ದೊಡ್ಡಮಟ್ಟದ ಸಬ್ಸಿಡಿಯನ್ನು ನೀಡುತ್ತಿದೆ. ನಮ್ಮ ರಾಜ್ಯದಲ್ಲೂ ಕೂಡ ಕರ್ನಾಟಕ ಸರ್ಕಾರ (Karnataka Government) ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಕೊಂಡುಕೊಳ್ಳುವಂತೆ ಜನರನ್ನು ಉತ್ತೇಜಿಸಲು ಕಳೆದ ಜನವರಿ ತಿಂಗಳಲ್ಲಿ ತೆರಿಗೆ ರಿಯಾಯಿತಿಯನ್ನು ಘೋಷಣೆ ಮಾಡಿತ್ತು.
ಹಳೆಯ ವಾಹನಗಳನ್ನು ಗುಜರಿಗೆ (Scrap) ಹಾಕಿ, ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ರೂ.1,000 ದಿಂದ ರೂ.40,000 ತೆರಿಗೆ ವಿನಾಯಿತಿಯನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಕರ್ನಾಟಕ ರಾಜ್ಯದಲ್ಲಿ ನೂತನ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಕಳೆದ ವರ್ಷದ ಏಪ್ರಿಲ್ನಿಂದ ನವೆಂಬರ್ವರೆಗೆ ರಾಜ್ಯದಲ್ಲಿ ಒಟ್ಟು 1 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ ಎಂದು ವರದಿಯಾಗಿದೆ. ಫೆಬ್ರವರಿ 16ರಂದು ಮಂಡಿಣೆಯಾದ 2024-25 ನೇ ಸಾಲಿನ ರಾಜ್ಯ ಬಜೆಟ್ನಲ್ಲಿಯು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಿಎಂ ಸಿದ್ದರಾಮಯ್ಯ ಅವರು ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ್ದರು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಜಮೆ ಹೀಗೆ ಚೆಕ್ ಮಾಡಿ.!
ರಾಜ್ಯದಲ್ಲಿ 2,500 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ ರೂ.35 ಕೋಟಿ ವೆಚ್ಚದಲ್ಲಿ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು.
ಈಗ ಎಲ್ಲೆಡೆ ಕೂಡ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿಗೆ ವ್ಯಾಪಕ ಬೆಂಬಲಗಳನ್ನು ಅಲ್ಲಿನ ಸರ್ಕಾರಗಳು ಕೂಡ ನೀಡುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಕಾರ್ಮಿಕರಿಗೆ ರೂ.40,000 ಆರ್ಥಿಕ ನೆರವು ನೀಡುವುದಾಗಿ ಘೋಷಿಸಿರುವುದು ನಿಜಕ್ಕೂ ಒಂದು ಉತ್ತಮ ಚಿಂತನೆಯಾಗಿದೆ.
ಇದರಿಂದ ಬಡವರು ಅತ್ಯಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಸಹಾಯವಾಗಿ ವಾಯು ಮಾಲಿನ್ಯ ಕೂಡ ಕಡಿಮೆ ಆಗುತ್ತದೆ. ಎಲ್ಲ ರಾಜ್ಯಗಳಲ್ಲೂ ಕೂಡ ಇಂತಹ ಯೋಜನೆಗಳು ಜಾರಿಗೆ ಬರಲಿ ಎಂದು ನಾವು ಬಯಸೋಣ.