ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದು ಕಾಂಗ್ರೆಸ್ ಪಕ್ಷವು ಅಧಿಕಾರದ ಗದ್ದುಗೆ ಏರಿತ ದಿನದಿಂದಲೂ ಕೂಡ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ಪಕ್ಷ ಟ್ರಂಪ್ ಕಾರ್ಡ್ ಆಗಿ ಬಳಸಿದ್ದ ಗ್ಯಾರಂಟಿ ಕಾರ್ಡ್ಗಳ ಘೋಷಣೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿತ್ತು.
ಅಂತಿಮವಾಗಿ ಮಾನ್ಯ ಮುಖ್ಯಮಂತ್ರಿಗಳು ಇಂದು ತಮ್ಮ ಸಚಿವ ಸಂಪುಟದ ಜೊತೆ ಮತ್ತೊಂದು ಸುತ್ತಿನ ಕ್ಯಾಬಿನೆಟ್ ಮೀಟಿಂಗ್ ನಡೆಸಿ ಮಾಧ್ಯಮಗಳ ಎದುರು ಎಲ್ಲಾ ಗ್ಯಾರಂಟಿ ಕಾರ್ಡ್ ಗಳ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಯಾವ ಗ್ಯಾರಂಟಿ ಕಾರ್ಡ್ ಯಾವಾಗ ಜಾರಿಗೆ ಬರುತ್ತದೆ, ಅದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಯಾರೆಲ್ಲಾ ಫಲಾನುಭವಿಗಳಾಗಬಹುದು ಮತ್ತು ಪೂರಕ ದಾಖಲೆಗಳಾಗಿ ಏನೆಲ್ಲಾ ಒದಗಿಸಬೇಕು ಎನ್ನುವ ಅಂಶಗಳನ್ನು ಕೂಡ ತಿಳಿಸಿದ್ದಾರೆ.
● ಗೃಹ ಜ್ಯೋತಿ ಯೋಜನೆ ಅಡಿ ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಘೋಷಿಸಿದ್ದ ಈ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿತ್ತು. ಈಗ ಆ ಮಾತಿಗೆ ಬದ್ಧವಾಗಿದ್ದು ಕಳೆದ ಒಂದು ವರ್ಷದಿಂದ ಕುಟುಂಬಗಳ ಉಪಯೋಗಿಸಿರುವ ವಿದ್ಯುತ್ ಪ್ರಮಾಣವನ್ನು ಅಳತೆಗೋಲಾಗಿ ತೆಗೆದುಕೊಳ್ಳುತ್ತದೆ.
ಅವರು ಬಳಸಿರುವ ಸರಾಸರಿ ವಿದ್ಯುತ್ ಮೇಲೆ 10 ಯೂನಿಟ್ ಗಳಷ್ಟು ಎಕ್ಸ್ಟ್ರಾ ಕೊಡುತ್ತಿದ್ದೇವೆ. ಉಚಿತ ಎಂದು ಯಾರು ಹೆಚ್ಚು ವಿದ್ಯುತ್ ಪೋಲು ಮಾಡಬಾರದು ಎನ್ನುವುದು ಇದರ ಉದ್ದೇಶ ಜುಲೈ 1ನೇ ತಾರೀಖಿನಿಂದ ಇದು ಅನ್ವಯ ಆಗಲಿದೆ. ಜುಲೈ ತಿಂಗಳವರೆಗೂ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಅನ್ನು ಸರ್ಕಾರ ವಹಿಸಿಕೊಳ್ಳುವುದಿಲ್ಲ ಎಂದು ಅನೌನ್ಸ್ ಮಾಡಿದ್ದಾರೆ.
● ಎರಡನೇ ಗ್ಯಾರೆಂಟಿ ಕಾರ್ಡ್ ಆಗಿ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಗೆ ಸಹಾಯಧನವಾಗಿ 2,000ರೂ. ನೀಡುವ ಯೋಜನೆಗೆ ಆಗಸ್ಟ್ 15 ರಂದು ಲಾಂಚಿಂಗ್ ಡೇಟ್ ಫಿಕ್ಸ್ ಮಾಡಿರುವ ವಿಚಾರವನ್ನು ಮುಖ್ಯಮಂತ್ರಿಗಳು ಹಂಚಿಕೊಂಡಿದ್ದಾರೆ. ಇದಕ್ಕೆ ಯಜಮಾನಿ ಬ್ಯಾಂಕ್ ಖಾತೆ ಹೊಂದಿರಬೇಕು, ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇನ್ಯಾವುದೇ ನಿಬಂಧನೆ ಇಲ್ಲ.
APL, BPL ಕಾರ್ಡ್ ಭೇದವಿಲ್ಲದೆ ಎಲ್ಲಾ ಮಹಿಳೆಯರಿಗೂ ನೀಡಲಾಗುತ್ತದೆ. 18 ವರ್ಷ ತುಂಬಿದವರು ಫಲಾನುಭವಿಗಳಾಗಬಹುದು ಇದಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 15ರಿಂದ ಜುಲೈ 15 ರವರೆಗೆ ಅವಕಾಶ ನೀಡಲಾಗುತ್ತದೆ. ನಂತರ ಅದರ ಪ್ರೊಸೆಸಿಂಗ್ ಕಾರ್ಯ ನಡೆದು ಆಗಸ್ಟ್ ತಿಂಗಳ 15ರಂದು ಸಹಾಯಧನ DBT ಮೂಲಕ ಕುಟುಂಬದ ಒಡತಿ ಖಾತೆಗೆ ಜಮೆ ಆಗುತ್ತದೆ. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಯಾರಿಗೆ ಸಹಾಯಧನ ಹೋಗಬೇಕು ಎಂದು ಅವರೇ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.
● BPL & AAY ಕಾರ್ಡ್ ಹೊಂದಿರುವವರಿಗೆ ಸಿಗುವ ಅನ್ನಭಾಗ್ಯ ಯೋಜನೆ ಪಡಿತರವನ್ನು ಪತಿ ಸದಸ್ಯರಿಗೆ 10Kg ನೀಡುವುದಾಗಿ ಘೋಷಿಸಿದ್ದ ಸರ್ಕಾರ fci ಅಥವಾ nccf ಯಾವುದರಿಂದ ಆದರೂ ಪಡೆದು ನೆರವೇರಿಸುತ್ತೇವೆ. ಆದರೆ ಈ ತಿಂಗಳಿನಲ್ಲಿ ದಾಸ್ತಾನು ಕೊರತೆ ಇರುವುದರಿಂದ ಜುಲೈ ತಿಂಗಳಿಂದ ಇದು ಗ್ಯಾರಂಟಿಯಾಗಿ ಸಿಗಲಿದೆ ಎಂದಿದ್ದಾರೆ.
● ಶಕ್ತಿ ಯೋಜನೆ ಅಡಿ ಎಲ್ಲಾ ಮಹಿಳೆಯರಿಗೆ ಕೂಡ ಕರ್ನಾಟಕದ ಒಳಗೆ ಉಚಿತ ಪ್ರಯಾಣವನ್ನು ಘೋಷಿಸಿದ ಸರ್ಕಾರವು ಜೂನ್ ತಿಂಗಳ 11ನೇ ತಾರೀಖಿನಿಂದ ಈ ಯೋಜನೆಗೆ ಚಾಲನೆ ನೀಡಿದೆ. ಸಮಾಜದಲ್ಲಿ 50% ಮಹಿಳೆಯರು ಇರುವ ಕಾರಣ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ. ಆದರೆ KSRTC ಬಸ್ ಅಲ್ಲಿ 50% ಮಹಿಳೆಯರಿಗೆ ರಿಸರ್ವ್ ಎಂದಿದ್ದಾರೆ.
● ಯುವನಿಧಿ ಯೋಜನೆ ಅಡಿ ಪದವಿ ಹೊಂದಿದವರಿಗೆ 3000 ಹಾಗೂ ಡಿಪ್ಲೋಮಾ ಪದವಿ ಪಡೆದವರಿಗೆ 1500 ನೀಡುವುದಾಗಿ ಹೇಳಿದ ಸರ್ಕಾರವು 2022-23 ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿ ಮತ್ತು ತೃತೀಯ ಲಿಂಗಿಗಳಿಗೂ ಕೂಡ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಎರಡು ವರ್ಷಗಳವರೆಗೆ ಈ ಸಹಾಯಧನ ನೀಡಲಾಗುತ್ತದೆ. ಮಧ್ಯೆ ಉದ್ಯೋಗ ದೊರಕಿದ್ದಲ್ಲಿ ಫಲಾನುಭವಿಗಳು ಘೋಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.