ನಿರುದ್ಯೋಗಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದು. ಯಾರೆಲ್ಲ ನಿರುದ್ಯೋಗಿಗಳು ಇರುತ್ತಾರೆ ಅಂತಹವರು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳ ಬಹುದಾಗಿದೆ ನಮ್ಮ ದೇಶದಲ್ಲಿ ತುಂಬಾ ನಿರುದ್ಯೋಗ ಸಮಸ್ಯೆ ಇದ್ದು ಈ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದವರು ನಿರುದ್ಯೋಗಿ ಯುವಕರಿಗೆ ಬಿಸಿನೆಸ್ ಪ್ರಾರಂಭ ಮಾಡಲು 10 ಲಕ್ಷದಿಂದ 25 ಲಕ್ಷದವರೆಗೆ ಬಂಡಬಾಳ ಹಾಕಿ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಲು ಸಹಾಯ ಮಾಡುತ್ತಿದ್ದಾರೆ ಹಾಗೂ ಈ ಸಾಲ ಸೌಲಭ್ಯದಲ್ಲಿ ನಿಮಗೆ ಸಬ್ಸಿಡಿ ಕೂಡ ಸಿಗುತ್ತದೆ.
ನಿರುದ್ಯೋಗಿ ಯುವಕರಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಆರಂಭಿಸುತ್ತಾರೆ ಎಂದರೆ ಅವರಿಗೆ 15% ರಷ್ಟು ಸಹಾಯಧನ ನೀಡಲಾಗುತ್ತದೆ ಅವರು ನಗರ ಪ್ರದೇಶದಲ್ಲಿ ಉದ್ಯಮ ಆರಂಭಿಸಿದರೆ 25% ರಷ್ಟು ಸಹಾಯಧನ ನೀಡಲಾಗುತ್ತದೆ ಹಾಗೂ ಉದ್ಯಮ ಆರಂಭಿಸಲು ಬೇಕಾಗುವ 10% ರಷ್ಟು ತಮ್ಮ ಸ್ವಂತ ಹೂಡಿಕೆ ಮಾಡಬೇಕು. ಅಂದರೆ 10 ಲಕ್ಷ ರೂಪಾಯಿ ಬಿಸಿನೆಸ್ ಮಾಡಲು ಒಂದು ಲಕ್ಷ ರೂಪಾಯಿ ನೀವು ಹಾಕಬೇಕು ಉಳಿದ ಒಂಬತ್ತು ಲಕ್ಷವನ್ನು ಗೌರ್ನಮೆಂಟ್ ಕಡೆಯಿಂದ ಸಾಲ ಕೊಡಲಾಗುತ್ತದೆ.
9 ಲಕ್ಷದಲ್ಲಿ ನಿಮಗೆ 15% ಅಥವಾ 25% ಸಾಲ ಮನ್ನಾ ವಾಗುತ್ತದೆ. SC, ST ಹಾಗೂ ಮಾಜಿ ಸೈನಿಕರ ಯೋಜನೆ ಅಡಿ ಉದ್ಯಮ ಆರಂಭಿಸಿದರೆ ಅಂತಹವರಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಆರಂಭಿಸಲು ಶೇಕಡ 35ರ% ಷ್ಟು ಸಹಾಯಧನ ಮತ್ತು ನಗರ ಪ್ರದೇಶದಲ್ಲಿ ಉದ್ಯಮ ಆರಂಭಿಸಲು ಶೇಕಡ 25% ರಷ್ಟು ಸಹಾಯಧನ ನೀಡಲಾಗುತ್ತದೆ ಇವರು ಒಟ್ಟು ವೆಚ್ಚದ ಶೇಕಡ ಐದರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡಿದರೆ ಸಾಕು.
ಈ ಒಂದು ಯೋಜನೆ ಉದ್ದೇಶ ಏನೆಂದರೆ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮವು ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಬೃಹತ್ ಉದ್ಯೋಗ ಸೃಷ್ಟಿ ಯೋಜನೆಗಳಲ್ಲಿ ಒಂದಾಗಿದ್ದು ಈ ಯೋಜನೆ ಅಡಿ ಕೇಂದ್ರ ಸರ್ಕಾರವು ಯುವ ಜನರಿಗೆ ಉದ್ಯಮ ಪ್ರಾರಂಭಿಸಲು ಸಾಲ ನೀಡುವ ಮೂಲಕ ನಿರುದ್ಯೋಗ ದರ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಯುವಕರು ಸ್ವಯಂ ಉದ್ಯೋಗ ಪ್ರಾರಂಭಿಸಲು ಸಾಲದ ಮೇಲೆ ಸಬ್ಸಿಡಿ ನೀಡುವ ಮೂಲಕ ಪ್ರೋತ್ಸಾಹಿಸುವುದು ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆ ಪಡೆದುಕೊಳ್ಳಲು ಅರ್ಹತೆಗಳನ್ನು ನೋಡುವುದಾದರೆ ಭಾರತೀಯ ಪ್ರಜೆಯಾಗಿರಬೇಕು, ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು, ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಉದ್ಯಮ ವಿಸ್ತರಿಸಲು ನೆರವು ನೀಡಲಾಗುತ್ತದೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ ತರಬೇತಿ ಪಡೆಯುವ ಯುವಕರಿಗೆ ಆದ್ಯತೆ ನೀಡಲಾಗುವುದು.ಬೇರೆ ಯಾವುದೇ ಯೋಜನೆಯಿಂದ ಸಹಾಯಧನ ತೆಗೆದುಕೊಳ್ಳುತ್ತಿದ್ದರೆ ನಂತರ ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇದಕ್ಕೆ ಯಾವೆಲ್ಲ ದಾಖಲಾತಿಗಳು ಬೇಕು ಎಂದರೆ ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಾತಿ ಪ್ರಮಾಣಪತ್ರ, ನಿವಾಸ ಪುರಾವೆ ಮಾರ್ಕ್ ಶೀಟ್ ಇದೆಲ್ಲ ದಾಖಲಾತಿಗಳನ್ನು ಹೊಂದಿರಬೇಕು. ಅಗತ್ಯ ದಾಖಲಾತಿಗಳನ್ನು ಹೊಂದಿದ ನಂತರ ನೀವು kviconline.gov.in ಈ ವೆಬ್ಸೈಟ್ಗೆ ವಿಸಿಟ್ ಮಾಡಿ ನೀವು ಅಪ್ಲಿಕೇಶನ್ ಫಿಲ್ ಮಾಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆದು ನೀವು ಸ್ವಂತ ಉದ್ಯೋಗವನ್ನು ನಡೆಸಬಹುದು.