ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (Pradhana Mantri Ujwal Yojane) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತವಾಗಿ ಗ್ಯಾಸ್ ಕನೆಕ್ಷನ್ ಸಿಗುತ್ತಿದೆ ( free Gas Connection). ಒಂದು ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್, ರೆಗ್ಯುಲೇಟರ್ ಮತ್ತು ಒಂದು ಲೈಟರ್ ಜೊತೆಗೆ ಪ್ರತಿ ತಿಂಗಳ ಗ್ಯಾಸ್ ಬುಕಿಂಗ್ ಮೇಲೆ ಸಬ್ಸಿಡಿ (Subsidy) ಕೂಡ ಇರುತ್ತದೆ.
ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಕನೆಕ್ಷನ್ ಪಡೆದಿದ್ದ ಕುಟುಂಬಗಳು ಇದುವರೆಗೂ ಸರ್ಕಾರದಿಂದ ರೂ.200 ಸಬ್ಸಿಡಿ ಹಣ ಪಡೆಯುತ್ತಿದ್ದರು. ಅದರೊಂದಿಗೆ ಈಗ ಕೇಂದ್ರ ಸರ್ಕಾರವು ಒಟ್ಟಾರೆಯಾಗಿ ಎಲ್ಲ ಗ್ಯಾಸ್ ಬಳಕೆದಾರರಿಗೂ ಕೂಡ ರೂ.200 ಗಳ ಸಬ್ಸಿಡಿ ಘೋಷಿಸಿರುವುದರಿಂದ ಒಟ್ಟಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ಇನ್ನು ಮುಂದೆ ರೂ.400 ಸಬ್ಸಿಡಿ ಪಡೆಯಬಹುದು.
ಪ್ರಸ್ತುತವಾಗಿ 900 ಬೆಲೆಯುಳ್ಳ ಗ್ಯಾಸ್ ಸಿಲಿಂಡರ್ ಗಳನ್ನು ರೂ.500 ಪಡೆದುಕೊಳ್ಳಬಹುದು. ಆದರೆ ಈ ಸೌಲಭ್ಯ ಪಡೆಯಬೇಕು ಎಂದುಕೊಂಡರೆ ತಪ್ಪದೇ ನೀವು ಈ ಒಂದು ಕೆಲಸವನ್ನು ಮಾಡಬೇಕು. ಅದೇನಂದರೆ ನೀವು ಯಾವ ಏಜೆನ್ಸಿಯಿಂದ ಈಗ ಗ್ಯಾಸ್ ಸಿಲಿಂಡರ್ ಡೆಲಿವರಿ ಪಡೆಯುತ್ತಿದ್ದೀರ ಅಲ್ಲಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆ ಕೊಟ್ಟು ಇ-ಕೆವೈಸಿ (e-KYC) ಮಾಡಿಸಬೇಕು.
ಯಾರು ಇ-ಕೆವೈಸಿ ಮಾಡಿಸಿರುತ್ತಾರೆ ಅಂತಹ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಮಾತ್ರ ರೂ.400 ಸಬ್ಸಿಡಿ ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗೆ dbt ವರ್ಗಾವಣೆ ಆಗುತ್ತದೆ. ಈ ಮೂಲಕ ಅವರು ರೂ.500 ಗೆ ಗ್ಯಾಸ್ ಪಡೆದ ರೀತಿ ಆಗುತ್ತದೆ. ಆದ್ದರಿಂದ ತಪ್ಪದೇ ಈ ಒಂದು ಕಾರ್ಯವನ್ನು ಇಂದೇ ಪೂರ್ತಿಗೊಳಿಸಿ. ಇದೇ ಜನವರಿ ತಿಂಗಳಿಂದ ಇದು ಅನ್ವಯವಾಗಲಿದೆ, ಇಲ್ಲವಾದರೆ ನೀವು ಸರ್ಕಾರದ ಈ ಸೌಲಭ್ಯದಿಂದ ವಂಚಿತರಾಗಬಹುದು.
ನೀವೇನಾದರೂ ಇದುವರೆಗೂ ಕೂಡ ನಿಮ್ಮ ಕುಟುಂಬಕ್ಕೆ ಯಾವುದೇ ರೀತಿಯ ಕನೆಕ್ಷನ್ ಪಡೆದಿಲ್ಲ ಎಂದರೆ ನೀವು ಬಡತನ ರೇಖೆಗಿಂತ ಕೆಳಗಿರುವ BPL / AAY ಕಾರ್ಡ್ ದಾರರಾಗಿದ್ದರೆ ನಿಮ್ಮ ಕುಟುಂಬದ ಮುಖ್ಯಸ್ಥರ ಮಹಿಳೆಯು ಅರ್ಜಿ ಸಲ್ಲಿಸುವ ಮೂಲಕ ಉಚಿತ ಗ್ಯಾಸ್ ಕನೆಕ್ಷನ್ ಪಡೆಯಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭವಾಗಿದೆ, ಅರ್ಜಿ ಸಲ್ಲಿಸಲು ಈ ವಿಧಾನಗಳನ್ನು ಪಾಲಿಸಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* 18 ವರ್ಷ ತುಂಬಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು.
* ಈಗಾಗಲೇ ಕುಟುಂಬ ಯಾವುದೇ LPG ಸಂಪರ್ಕ ಇರಬಾರದು.
* SC/ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ ಯೋಜನೆ (AAY), ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟುಗಳು, ಅರಣ್ಯವಾಸಿಗಳು, ವಾಸಿಸುವ ಜನರು ದ್ವೀಪಗಳು ಮತ್ತು ನದಿ ದ್ವೀಪಗಳು, SECC ಕುಟುಂಬಗಳು (AHL TIN) ಮುಂತಾದ ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯು ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಗುರುತಿನ ಪುರಾವೆ
* ವಿಳಾಸದ ಪುರಾವೆ
* ಆಧಾರ್ ಕಾರ್ಡ್
* ಪಡಿತರ ಚೀಟಿ (BPL / AAY)
* ಬ್ಯಾಂಕ್ ಪಾಸ್ ಬುಕ್ ವಿವರ
* ಮೊಬೈಲ್ ಸಂಖ್ಯೆ
* KYC
ಅರ್ಜಿ ಸಲ್ಲಿಸುವ ವಿಧಾನ:-
* ಗೂಗಲ್ ನಲ್ಲಿ LPG GAS free ಎಂದು ಸರ್ಚ್ ಮಾಡಿ
* PMUY – Home ಎಂದು ಇರುತ್ತದೆ ಇದು ಅಧಿಕೃತ ವೆಬ್ಸೈಟ್ ಲಿಂಕ್ ಆಗಿರುತ್ತದೆ, ಕ್ಲಿಕ್ ಮಾಡಿ
* ಮುಖಪುಟದಲ್ಲಿ Click here to apply for New Ujjwala 2.0 connection ಮೇಲೆ ಕ್ಲಿಕ್ ಮಾಡಿ
* ತಕ್ಷಣ ನಿಮಗೆ ಭಾರತದಲ್ಲಿ ಸಂಪರ್ಕ ನೀಡುವ ಕಂಪನಿಗಳಾದ Bharath, Indian, HP ಕಂಪನಿಗಳ ಆಪ್ಷನ್ ಕಾಣುತ್ತದೆ ನಿಮಗೆ ಯಾವ ಕಂಪನಿ ಕನೆಕ್ಷನ್ ಬೇಕು ಅದನ್ನು ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಿ.
* ಆಗ ನೀವು ಯಾವ ಕಂಪನಿ ಸೆಲೆಕ್ಟ್ ಮಾಡಿದ್ದಿರಾ ಅದರ ವೆಬ್ಸೈಟ್ ಓಪನ್ ಆಗುತ್ತದೆ.
* Type of Connection ಆಪ್ಷನ್ ನಲ್ಲಿ Regular LPG connection or Ujwala 2.0 New connection ಎನ್ನುವ ಆಯ್ಕೆಗಳು ಕಾಣುತ್ತದೆ ಅದರಲ್ಲಿ ಎರಡನೇ ಆಯ್ಕೆಯಾದ Ujjwala 2.0 New Connection ಎನ್ನುವುದನ್ನು ಸೆಲೆಕ್ಟ್ ಮಾಡಿ.
* ನೀಡಿರುವ terms and Conditions ಓದಿಕೊಂಡು Declaration check nox ನಲ್ಲಿ right mark click ಮಾಡಿ,
* ನಂತರ ನಿಮ್ಮ State and District ಸೆಲೆಕ್ಟ್ ಮಾಡಿ showlist ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಆಗ ನಿಮ್ಮ ಜಿಲ್ಲೆಯಲ್ಲಿ ಇರುವ ನೀವು ಆರಿಸಿದ ಎಲ್ಲಾ ಕಂಪನಿಯ ಏಜೆನ್ಸಿಗಳ ಲಿಸ್ಟ್ ಬರುತ್ತದೆ, ಅದರಲ್ಲಿ ನಿಮ್ಮ ಮನೆಗೆ ಸಮೀಪವಾಗಿರುವುದನ್ನು select ಮಾಡಿ, Continue ಮೇಲೆ click ಮಾಡಿ..
* ಯಾರ ಹೆಸರಿನಲ್ಲಿ ಅಪ್ಲಿಕೇಶನ್ ಹಾಕುತ್ತಿದ್ದೀರಾ ಅವರ ಮೊಬೈಲ್ ಸಂಖ್ಯೆ ಹಾಕಿ, ಅಲ್ಲಿ ನೀಡಲಾಗಿರುವ ಕ್ಯಾಪ್ಚಾ ಕೋಡ್ ಕೂಡ ನಮೂದಿಸಿ Generate OTP ಮೇಲೆ ಕ್ಲಿಕ್ ಮಾಡಿ ಬಂದಿರುವ OTP Submit ಮಾಡಿ, Verify ಮಾಡಿ.
* Ujwala (2.0) KYC ಎನ್ನುವ ಪೇಜ್ ಓಪನ್ ಆಗುತ್ತದೆ ಅದರ ಕೆಳಗೆ ಇರುವ New KYC ಎನ್ನುವುದನ್ನು ಸೆಲೆಕ್ಟ್ ಮಾಡಿ Proceed ಕ್ಲಿಕ್ ಮಾಡಿ.
* ಮುಂದಿನ ಹಂತಗಳಲ್ಲಿ ಡಾಕ್ಯುಮೆಂಟ್ ಗಳನ್ನು ಕೇಳಲಾಗುತ್ತದೆ ನಿಮ್ಮ ಅಂತ್ಯೋದಯದ ಅಥವಾ BPL ರೇಷನ್ ಕಾರ್ಡ್ ಹಾಗೂ ಕೇಳಲಾಗುವ ಇನ್ನಿತರ ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.