ರಾಜ್ಯ ಸರ್ಕಾರವು ಗ್ಯಾರಂಟಿ ಕಾರ್ಡ್ ಯೋಜನೆಯಲ್ಲಿ ಘೋಷಿಸಿದಂತೆ ಜುಲೈ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಕೇಂದ್ರದ 5Kg ಅಕ್ಕಿ ಜೊತೆ ರಾಜ್ಯದಿಂದ 5Kg ಹೆಚ್ಚುವರಿ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಸದಸ್ಯರಿಗೂ ನೀಡಬೇಕಾಗಿತ್ತು. ಆದರೆ ಅಕ್ಕಿ ಖರೀದಿಗೆ ಸರ್ಕಾರ ಎಷ್ಟೇ ಶತ ಪ್ರಯತ್ನ ಪಟ್ಟರು ಕೂಡ ಜುಲೈ ತಿಂಗಳಿನಲ್ಲಿ ನಾಗರಿಕರಿಗೆ ಅಕ್ಕಿ ವಿತರಣೆ ಮಾಡಲು ದಾಸ್ತಾನು ಲಭ್ಯವಾಗಿಲ್ಲ.
ಈ ಬಗ್ಗೆ ಸಚಿವ ಸಂಪುಟ ಸಭೆ ಜೊತೆ ಚರ್ಚಿಸಿದ ಮಾನ್ಯ ಮುಖ್ಯಮಂತ್ರಿಗಳು Kg ಅಕ್ಕಿಗೆ 34 ರೂಪಾಯಿಯಂತೆ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಪ್ರತಿ ಸದಸ್ಯನಿಗೆ 170ರೂಗಳನ್ನು ನೀಡಲು ನಿರ್ಧಾರ ಮಾಡಿದ್ದಾರೆ. BPL ಕಾರ್ಡ್ ನಲ್ಲಿ ಮೊದಲ ಪುಟದಲ್ಲಿ ಇರುವವರನ್ನು ಕುಟುಂಬದ ಯಜಮಾನರು ಎಂದು ಪರಿಗಣಿಸಿ ಅವರ ಬ್ಯಾಂಕ್ ಖಾತೆಗೆ DBT ಮೂಲಕ ಕುಟುಂಬದ ಎಲ್ಲಾ ಸದಸ್ಯರ ಹಣವನ್ನು ವರ್ಗಾವಣೆ ಮಾಡಲಾಗುವುದು.
ಇದಕ್ಕಾಗಿ ಯಾವುದೇ ಅರ್ಜಿಯನ್ನು ಆಹ್ವಾನ ಮಾಡುತ್ತಿಲ್ಲ. ರೇಷನ್ ಕಾರ್ಡ್ ನಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ, ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗಿರುತ್ತದೆಯೋ ಆ ಖಾತೆಗೆ ಹಣ ಹಾಕಲು ಸರ್ಕಾರಕ್ಕೆ ಅನುಕೂಲವಾಗುವುದರಿಂದ ಈ ಸರಳ ಕ್ರಮವನ್ನು ಅನುಸರಿಸಲು ತೀರ್ಮಾನಿಸಲಾಗಿದೆ. ಆದರೆ ಕುಟುಂಬದ ಯಜಮಾನನಿಗೆ ಬ್ಯಾಂಕ್ ಖಾತೆ ಇಲ್ಲದೆ ಹೋದರೆ ಕುಟುಂಬದ ಇತರ ಯಾವುದೇ ಸದಸ್ಯರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿದ್ದರೆ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು.
ಆದ್ದರಿಂದ BPL ಕಾರ್ಡ್ ಹೊಂದಿರುವ ಎಲ್ಲರೂ ಕೂಡ ತಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ ಲಿಂಕ್ ಆಗಿದೆ ಹಾಗೂ ಆ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಈ ಅನ್ನಭಾಗ್ಯ ಯೋಜನೆಯ ಹಣ ಕೈತಪ್ಪಿ ಹೋಗಬಹುದು. ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 1.78 ಕೋಟಿ BPL ರೇಷನ್ ಕಾರ್ಡ್ ಇವೆ ಆದರೆ 6 ಲಕ್ಷ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಕೆಲವುಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೂ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗಿಲ್ಲ.
ಹಾಗಾಗಿ ಅವರಿಗೆ DBT ಮೂಲಕ ಹಣ ವರ್ಗಾವಣೆ ಆಗುವುದಿಲ್ಲ ಈ ಕೂಡಲೇ ಇದನ್ನು ಸರಿಪಡಿಸಿಕೊಂಡರೆ ಉತ್ತಮ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ನೀವು ನಿಮ್ಮ ಆಧಾರ್ ಸಂಖ್ಯೆ ರೇಷನ್ ಕಾರ್ಡ್ ಲಿಂಕ್ ಆಗಿದೆ ಮತ್ತು ನಿಮ್ಮ KYC ಅಪ್ಡೇಟ್ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು.
ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಕೊನೆಯ ನಾಲ್ಕು ಸಂಖ್ಯೆಗಳು ಕಾಣುತ್ತವೆ ಹಾಗೂ ಕೆವೈಸಿ ಅಪ್ಡೇಟ್ ಆಗಿದ್ದರೆ ಅದರ ಮುಂದೆ YES ಎಂದು ಬಂದಿರುತ್ತದೆ. ಕುಟುಂಬದ ಯಾವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಅಥವಾ KYC ಅಪ್ಡೇಟ್ ಆಗಿಲ್ಲ ಆ ಮಾಹಿತಿ ಕೂಡ ಅದರಲ್ಲಿಯೇ ಸಿಗುತ್ತದೆ. ಈ ಕೂಡಲೇ ನೀವು ಚೆಕ್ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಶೇರ್ ಮಾಡಿ.