ಪಾನ್ ಕಾರ್ಡ್ ಎಷ್ಟು ಅಗತ್ಯ ದಾಖಲೆ ಎಂದು ಎಲ್ಲರಿಗೂ ಅರಿವಿದೆ. ಪ್ಯಾನ್ ಕಾರ್ಡ್ ಇಲ್ಲ ಎಂದರೆ ಅಥವಾ ಪಾನ್ ಕಾರ್ಡ್ ಇದ್ದರೂ ಅದು ನಿಷ್ಕ್ರಿಯಗೊಂಡರೆ ನಾವು ಖಾಸಗಿ ಸಂಸ್ಥೆಯಲ್ಲಿ ಆಗಲೇ ಸರ್ಕಾರಿ ಹಣಕಾಸಿನ ಸಂಸ್ಥೆಯಲ್ಲಿ ಆಗಲಿ ಆರ್ಥಿಕ ಚಟುವಟಿಕೆ ನಡೆಸಲು ಸಾಧ್ಯವೇ ಇಲ್ಲ ನಮ್ಮ ಎಲ್ಲಾ ಹಣಕಾಸಿನ ವ್ಯವಹಾರಕ್ಕೂ ತೊಡಕು ಉಂಟಾಗುತ್ತದೆ.
ಒಂದು ಅಕೌಂಟ್ ಓಪನ್ ಮಾಡುವ ವಿಷಯದಿಂದ ಹಿಡಿದು ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಪಡೆಯುವುದು ಆದಾಯ ತೆರಿಗೆ ಸಲ್ಲಿಸುವುದು ಸೇರಿದಂತೆ ಇನ್ನು ಅನೇಕ ಬ್ಯಾಂಕಿಂಗ್ ವ್ಯವಹಾರಗಳಿಗೆ ಪಾನ್ ಕಾರ್ಡ್ ಬೇಕೇ ಬೇಕು. ಇಷ್ಟು ಪ್ರಮುಖ ದಾಖಲೆ ಆದ ಕಾರಣ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿತ್ತು.
ಆರಂಭದ ದಿನಗಳಲ್ಲಿ ಉಚಿತವಾಗಿ ಮೂರು ವರ್ಷಗಳವರೆಗೆ ಕಾಲಾವಕಾಶ ನೀಡಿತ್ತು. ಆದರೆ ಹೆಚ್ಚಿನ ಜನರು ಇದನ್ನು ಅದು ಉಪಯೋಗಪಡಿಸಿಕೊಳ್ಳಲಿಲ್ಲ. ನಂತರದ ಮಾರ್ಚ್ 2023ರ ಒಳಗೆ 1000 ರೂ. ದಂಡದ ಜೊತೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಇಲ್ಲವಾದಲ್ಲಿ ಪಾನ್ ಕಾರ್ಡ್ ನಿಷ್ಪಿಯಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಕಡೆ ದಿನಗಳಲ್ಲಿ ಸರ್ವರ್ ಸಮಸ್ಯೆ ಮತ್ತು ಮಾಹಿತಿ ಕೊರತೆ ಇದೆ ಎಂದು ದೂರು ಬಂದ ಕಾರಣ ಮತ್ತೆ ಮೂರು ತಿಂಗಳವರೆಗೆ ಗಡುವು ಹೆಚ್ಚಿಸಲಾಗಿತ್ತು. ಜೂನ್ 30 ಕ್ಕೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ತಿಗೊಂಡಿದೆ. ನೀವಿನ್ನು ಈ ಕಾರ್ಯವನ್ನು ಪೂರ್ತಿ ಗೊಳಿಸಿಲ್ಲ ಎಂದರೆ ನಿಮಗೆ 6,000 ದಂಡ ಬೀಳುತ್ತದೆ.
ಯಾಕೆಂದರೆ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಪ್ಯಾನ್ ಕಾರ್ಡ್ ಇದ್ದರೂ ಅದು ಅಮಾನ್ಯಗೊಳ್ಳುತ್ತದೆ. ಇದರಿಂದ ನೀವು ಈ ತಿಂಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ITR filling ಗೆ ಜುಲೈ 31 ಕಡೆಯ ದಿನಾಂಕ. ಅಷ್ಟರ ಒಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೆ ಇದ್ದಲ್ಲಿ ನಿಮಗೆ ದಂಡ ಬೀಳುತ್ತದೆ ನಿಮಗೆ 5 ಲಕ್ಷ ಆದಾಯ ಇದ್ದರೆ ಒಂದು ಲಕ್ಷಕ್ಕೆ 1000 ರೂಪಾಯಿಯಂತೆ 5 ಲಕ್ಷಕ್ಕೆ 5000 ದಂಡ ಬೀಳುತ್ತದೆ.
ನೀವೇನಾದರೂ ಈಗ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಲಿಂಕ್ ಮಾಡಲು ಹೋದರೆ 1000ರೂ. ದಂಡ ಕಟ್ಟಬೇಕು. ನೀವು ಈ ಬಾರಿ ದಂಡ ಕಟ್ಟಿ ಈ ಪ್ರಕ್ರಿಯೆ ಪೂರ್ತಿಗೊಳಲು ಪ್ರಯತ್ನಿಸಿದರೂ ಅದು ಪೂರ್ತಿಯಾಗಲು ಕನಿಷ್ಠ 30 ದಿನಗಳಾದರು ತಗಲುತ್ತದೆ. ಹಾಗಾಗಿ ಆದಾಯ ತೆರಿಗೆ ರಿಟರ್ನ್ಸ್ ಮಾಡದೆ ಇದ್ದ ಕಾರಣಕ್ಕಾಗಿ 5 ಲಕ್ಷ ಆದಾಯಕ್ಕೆ 5000ರೂ. ದಂಡ ಮತ್ತು ಈಗ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ 1000ರೂ. ದಂಡ ಸೇರಿ 6,000 ದಂಡವನ್ನು ನೀವು ಕಟ್ಟಬೇಕಾಗುತ್ತದೆ.
ಒಂದು ವೇಳೆ ನೀವು ಈ ತಿಂಗಳು ಕೂಡ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ತಡ ಮಾಡಿದರೆ ನಿಮಗೆ ಪಾನ್ ಕಾರ್ಡ್ ಇಂದ ನಡೆಯುವಂತಹ ಯಾವುದೇ ಬ್ಯಾಂಕ್ ಕೆಲಸವೂ ಕೂಡ ನಡೆಯುವುದಿಲ್ಲ. ಮುಂದೆ ಇನ್ನೂ ಹೆಚ್ಚಿನ ದಂಡವನ್ನು ಕಟ್ಟುವ ಪರಿಸ್ಥಿತಿ ಎದುರಾಗಬಹುದು ಹಾಗಾಗಿ ತಪ್ಪದೆ ಕೂಡಲೇ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ.