ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ.!

 

WhatsApp Group Join Now
Telegram Group Join Now

ಕೃಷಿ ಕ್ಷೇತ್ರಕ್ಕೆ ಸರ್ಕಾರಗಳು ಸಾಕಷ್ಟು ಯೋಜನೆಗಳ ಮೂಲಕ ನೆರವಾಗುತ್ತಿವೆ. ಕೃಷಿ ಕ್ಷೇತ್ರದಲ್ಲಿ ಅನೇಕ ಬಗೆಯ ಸಮಸ್ಯೆಗಳಿದ್ದು ಇವುಗಳಲ್ಲಿ ಒಂದು ಕಾರ್ಮಿಕರ ಕೊರತೆ ಕೂಡ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕೃಷಿಯನ್ನು ಕೂಡ ಯಾತ್ರೀಕರಣಗೊಳಿಸಿ ಆಧುನಿಕ ಕೃಷಿ ಪದ್ಧತಿಯಿಂದ ರೈತರು ಹೆಚ್ಚು ಲಾಭ ಪಡೆಯಲಿ ಎನ್ನುವ ಉದ್ದೇಶದಿಂದ ಸರ್ಕಾರಗಳು ರೈತನಿಗೆ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತಿವೆ.

ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಕೂಡ ಜಾರಿ ಮಾಡಿದೆ. ಈ ಯೋಜನೆ ಮೂಲಕ ಆಯ್ದ ಕೆಲ ಯಂತ್ರೋಪಕರಣಗಳ ಖರೀದಿಗೆ ರೈತನ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ 90% ರವರೆಗೂ ಕೂಡ ಸಹಾಯಧನ ಪಡೆಯಬಹುದು.

ಈ ಸುದ್ದಿ ಓದಿ:-ಪ್ರಧಾನ ಮಂತ್ರಿ ಆವಾಸ್ ಯೋಜನಯಡಿ 36,789 ಮನೆ ಹಂಚಿಕೆ.! ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಿ.!

ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ‌, ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್, ರೋಟೋವೇಟರ್,ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳ ಖರೀದಿಗೆ ಅರ್ಹ ರೈತರಿಗೆ ಇಲಾಖೆ ವತಿಯಿಂದ ಈ ಸಹಾಯಧನ ಸಿಗಲಿದೆ. ಯೋಜನೆಗೆ ಯಾರು ಅರ್ಹರು? ಏನೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಎಷ್ಟು ನೆರವು ಸಿಗುತ್ತದೆ, ಇತ್ಯಾದಿ ವಿವರ ಹೀಗಿದೆ…

ಅರ್ಜಿ ಸಲ್ಲಿಸಲು ಕಂಡಿಷನ್ ಗಳು

* ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಕೃಷಿ ಜಮೀನು ಇದ್ದು ಆತ ಸ್ವಂತ ಕೃಷಿ ಮಾಡುತ್ತಿರಬೇಕು
* ರೈತರ ಜಮೀನಿನ ಪಹಣಿ, ಆಧಾರ್ ಕಾರ್ಡ್‌ ಮತ್ತು ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿ FRUITS ತಂತ್ರಾಂಶದಡಿ ನೋಂದಾಯಿಸಿಕೊಂಡು FID ಪಡೆದಿರಬೇಕು.
* ಒಂದು ವೇಳೆ ಪಹಣಿ ಜಂಟಿಯಾಗಿದ್ದರೆ ಮತ್ತೊಬ್ಬ ರೈತನಿಂದ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆದು ಸಲ್ಲಿಸಬೇಕು.‍
* ‌ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಹೆಚ್ಚಿನ ನೆರವು ಇರುತ್ತದೆ.

ಈ ಸುದ್ದಿ ಓದಿ:-ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ವೇತನ 56,100 ಆಸಕ್ತರು ಅರ್ಜಿ ಸಲ್ಲಿಸಿ.!

* ರೈತರು ಯಾವ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ಅರ್ಜಿ ನಮೂನೆ ಭರ್ತಿ ಮಾಡಿ ಸಂಬಂಧಪಟ್ಟ ಇಲಾಖೆ ಸಲ್ಲಿಸಬೇಕು
* ಲಭ್ಯತೆ ಆಧಾರದ ಮೇಲೆ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುವುದು. ಹಾಗಾಗಿ ಅರ್ಜಿ ಮೊದಲು ಸಲ್ಲಿಸಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ಪಹಣಿ ಪತ್ರ
* ಬ್ಯಾಂಕ್ ಪಾಸ್ ಬುಕ್ ವಿವರ
* FID
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಅರ್ಜಿ ನಮೂನೆ
* ಇತ್ಯಾದಿ ದಾಖಲೆಗಳು

ಯಂತ್ರೋಪಕರಣಗಳು ಮತ್ತು ಸಹಾಯಧನದ ವಿವರ:-

1. ಮಿನಿ ಟ್ರ್ಯಾಕ್ಟರ್:-
* ಮಿನಿ ಟ್ರ್ಯಾಕ್ಟರ್‌ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ
* ಸಾಮಾನ್ಯ ವರ್ಗದವರಿಗೆ ರೂ.75,000

2. ಪವರ್ ಟಿಲ್ಲರ್:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90% ಗರಿಷ್ಠ 1 ಲಕ್ಷ
* ಸಾಮಾನ್ಯ ವರ್ಗದವರಿಗೆ ಶೇ. 50 % ಅಥವಾ ರೂ.72,500

3. ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್‌:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ ಖರೀದಿಗೆ ರೂ. 25830 ರೂಪಾಯಿ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ ರೂ. 51,300 ರೂಪಾಯಿ ಸಹಾಯಧನ ಸಿಗಲಿದೆ
* ಸಾಮಾನ್ಯ ವರ್ಗದವರಿಗೆ ಎಂ.ಬಿ.ಫ್ಲೋ ಖರೀದಿಗೆ ರೂ.14,100, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ ರೂ.25,800 ರೂಪಾಯಿ ಸಹಾಯಧನ ಸಿಗಲಿದೆ. ‌

4. ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ:
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.52,200 – ರೂ.65,700
* ಸಾಮಾನ್ಯ ವರ್ಗದವರಿಗೆ ರೂ.29,000 – ರೂ.36,500

5. ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.52,200 – ರೂ.63,000
* ಸಾಮಾನ್ಯ ವರ್ಗದವರಿಗೆ ರೂ.29,000 – ರೂ.35,000

ಅರ್ಜಿ ಸಲ್ಲಿಸುವ ವಿಧಾನ:-

* ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಹೆಚ್ಚಿನ ಮಾಹಿತಿ ಪಡೆದು ಕೃಷಿ ಇಲಾಖೆ / ತೋಟಗಾರಿಕೆ ಇಲಾಖೆ ಎಲ್ಲಿ ಯಾವ ಯಂತ್ರೋಪಕರಣಗಳಿಗೆ ಅನುದಾನ ಸಿಗುತ್ತದೆ ಎನ್ನುವುದನ್ನು ಅರಿತು, ಅರ್ಜಿ ಪಡೆದು ಸಂಬಂಧ ಪಟ್ಟ ಇಲಾಖೆಗೆ ಸಲ್ಲಿಸಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now