ನಮ್ಮ ದೇಶದಲ್ಲಿ ಆಸ್ತಿ ವಿಷಯಕ್ಕೆ ಸಂಬಂಧ ಪಟ್ಟ ಹಾಗೆ ಪ್ರತಿನಿತ್ಯವೂ ಕೂಡ ಕೋರ್ಟ್ ನಲ್ಲಿ ಕೇಸ್ ಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಒಂದೇ ಕುಟುಂಬಸ್ಥರ ನಡುವೆ ತಂದೆ-ಮಕ್ಕಳ, ಸಹೋದರ-ಸಹೋದರಿ ನಡುವೆ ಅಜ್ಜ-ಮೊಮ್ಮಕ್ಕಳ ನಡುವೆ ಈ ರೀತಿ ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ನಡೆಯುತ್ತಿರುವುದು ನಿಜಕ್ಕೂ ಖೇ’ದ’ನೀ’ಯ.
ಇದಕ್ಕೆಲ್ಲ ಪರಿಹಾರ ಸಿಗಬೇಕು ಎಂದರೆ ಆದಷ್ಟು ಹಿರಿಯರು ತಾವು ಬದುಕಿರುವಾಗಲೇ ಯಾರ ಪಾಲಿಗೆ ಎಷ್ಟು ಎಂದು ನಿರ್ಧಾರ ಮಾಡಿ ಆಸ್ತಿ ಭಾಗ ಮಾಡಿ ಬಿಡುವುದೇ ಪರಿಹಾರ, ಇದರಲ್ಲಿ ಎಷ್ಟೋ ಸಮಸ್ಯೆ ತಪ್ಪುತ್ತದೆ. ಕಾನೂನಿನಲ್ಲಿ ಕೂಡ ಸ್ಪಷ್ಟವಾಗಿ ಯಾರ ಆಸ್ತಿ ಯಾರಿಗೆ ಸೇರಬೇಕು ಎನ್ನುವುದರ ಕುರಿತು ನ್ಯಾಯ ಬದ್ಧವಾದ ಸ್ಪಷ್ಟತೆ ಇದೆ. ಆದರೆ ಕಾನೂನಾತ್ಮಕವಾಗಿ ಕೋರ್ಟು ಕಚೇರಿ ಅಲೆದು ಇದು ಇತ್ಯರ್ಥವಾಗುವ ಸಮಯಕ್ಕೆ ಜೀವನದ ಅತ್ಯಮೂಲ್ಯವಾದ ಹತ್ತಾರು ವರ್ಷಗಳು ಕಳೆದು ಹೋಗಿರುತ್ತದೆ.
ಹಾಗಾಗಿ ಸಾಧ್ಯವಾದಷ್ಟು ಈ ರೀತಿ ಆಸ್ತಿ ವಿವಾದಗಳನ್ನು ಮಾತುಕತೆಯ ಮೂಲಕ ಕುಟುಂಬದಲ್ಲಿ ರಾಜಿ ಪಂಚಾಯಿತಿ ಮಾಡಿ ಪರಿಹರಿಸಿಕೊಳ್ಳುವುದು ಹೆಚ್ಚು ಅನುಕೂಲಕರ ಮತ್ತು ಈ ರೀತಿ ತೀರ್ಮಾನವಾದದ್ದನ್ನು ಕಾನೂನಾತ್ಮಕವಾಗಿ ಬಧ್ರಪಡಿಸಿಕೊಂಡರೆ ಅದೇ ಆಧಾರ ಎನ್ನಬಹುದು. ಇದರ ಜೊತೆಗೆ ಪ್ರತಿಯೊಬ್ಬರೂ ಕೂಡ ತಮಗೆ ಕೂಡು ಕುಟುಂಬದ ಯಾವ ಆಸ್ತಿಯಲ್ಲಿ ಎಷ್ಟು ಪಾಲು ಬರುತ್ತದೆ.
ತಂದೆ ತಾಯಿಯ ಯಾವ ರೀತಿ ಆಸ್ತಿಗಳನ್ನು ನಾವು ಕೇಳಬಹುದು, ಪಿತ್ರಾರ್ಜಿತ ಆಸ್ತಿಯನ್ನು ಹೇಗೆ ಪಡೆದುಕೊಳ್ಳಬೇಕು? ತಾತನ ಆಸ್ತಿಯಲ್ಲಿ ನಮಗೆ ಎಷ್ಟು ಪಾಲು ಬರುತ್ತದೆ? ಇತ್ಯಾದಿ ಬೇಸಿಕ್ ಅಂಶಗಳನ್ನು ತಿಳಿದುಕೊಂಡಿರಲೇಬೇಕು ಆಗ ಮಾತ್ರ ನಾವು ನಮ್ಮ ಹಕ್ಕು ಇದಿಯೋ ಇಲ್ಲವೋ ಎನ್ನುವುದನ್ನು ದೃಢಪಡಿಸಿಕೊಂಡು ಮುಂದುವರಿಯಬಹುದು.
ಇಲ್ಲವಾದಲ್ಲಿ ಹಲವು ವರ್ಷಗಳ ಕಾಲ ಓಡಾಡಿ ಕೊನೆಗೆ ಹಣದ ಜೊತೆಗೆ ಸಮಯ ವ್ಯರ್ಥವಾಗಿ ನ’ಷ್ಟವಾಗುತ್ತದೆ ಅದಕ್ಕಾಗಿ ತಾತನ ಯಾವ ಆಸ್ತಿಗಳು ಮೊಮ್ಮಗನಿಗೆ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುವ ವಿಚಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ತಾತ ತನ್ನ ಜೀವಿತಾವಧಿಯಲ್ಲಿ ತಾನೇ ತನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿದ ಹಣದಲ್ಲಿ ಮನೆ, ಜಮೀನು, ಸೈಟು, ಬಂಗಾರ ಖರೀದಿಸಿದ್ದರೆ ಇದು ಅವರ ಸ್ವಯಾರ್ಜಿತ ಆಸ್ತಿಯಾಗುತ್ತದೆ.
ಈ ರೀತಿ ಸ್ವಯಾರ್ಜಿತ ಆಸ್ತಿಗಳಲ್ಲಿ ಯಾವ ಮಕ್ಕಳಿಗೂ ಪಾಲು ಕೇಳಲು ಅಧಿಕಾರ ಇರುವುದಿಲ್ಲ, ಅವರ ಮೊಮ್ಮಕ್ಕಳಿಗೂ ಇರುವುದಿಲ್ಲ, ಕಾನೂನಿನಲ್ಲಿ ಅದಕ್ಕೆ ಅವಕಾಶವೂ ಇಲ್ಲ. ಅವರು ತಮಗೆ ಇಷ್ಟ ಆದ ಯಾವುದೇ ಒಬ್ಬ ಮಗನಿಗೆ ಅಥವಾ ಯಾವುದೇ ವ್ಯಕ್ತಿಗೆ ಆ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಬಹುದು ಅಥವಾ ಇರುವಾಗ ಅವರ ನಂತರ ಯಾರಿಗೆ ಹೋಗಬೇಕು ಎಂದು ವಿಲ್ ಮಾಡಿ ಇಡಬಹುದು.
ಈ ರೀತಿ ಯಾರ ಹೆಸರನ್ನು ಸೂಚಿಸದೆ ಮ’ರ’ಣ ಹೊಂದಿದ ಪಕ್ಷದಲ್ಲಿ ತಾತನ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳಿಗೆ ಮಾತ್ರ ಅದರಲ್ಲಿ ಸಮಾನ ಪಾಲು ಸಿಗುತ್ತದೆ. ಆಗ ಮೊಮ್ಮಕ್ಕಳು ಇದರಲ್ಲಿ ತಮ್ಮ ತಂದೆ ಅಥವಾ ತಾಯಿಗೆ ಯಾವ ಪಾಲು ಬಂದಿದೆ ಅದರಲ್ಲಿ ಪಾಲು ಕೊಡಲೇಬೇಕು ಎಂದು ಕೇಳಲು ಬರುವುದಿಲ್ಲ.
ಅದೇ ರೀತಿಯಾಗಿ ತಾತನಿಗೆ ಅವರ ತಂದೆ ಅಥವಾ ತಾತನಿಂದ ಪಿತ್ರಾರ್ಜಿತವಾಗಿ ಆಸ್ತಿ ಬಂದಿದ್ದರೆ ಅದು ಕೂಡ ತಂದೆ ಹೆಸರಿನ ನಂತರ ಮಕ್ಕಳ ಹೆಸರಿಗೆ ಬರುವುದು. ತಾತನ ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆಯ ಎಲ್ಲ ಸಹೋದರ ಹಾಗೂ ಸಹೋದರರಿಗೆ ಸಮಾನ ಪಾಲು ಇರುತ್ತದೆ. ಇದರಲ್ಲಿ ತಂದೆಗೆ ಬಂದ ಆಸ್ತಿಯಲ್ಲಿ ಮೊಮ್ಮಕ್ಕಳು ಪಾಲು ಹೊಂದಿರುತ್ತಾರೆ.
ಉದಾಹರಣೆಗೆ ತಾತನಿಂದ ತಂದೆಗೆ ಆರು ಎಕರೆ ಬಂದಿದ್ದರೆ ನಿಮ್ಮ ತಂದೆಗೆ ನೀವು ಇಬ್ಬರು ಗಂಡು ಮಕ್ಕಳು ಇದ್ದರೆ ತಂದೆಗೆ ಎರಡು ಎಕರೆ ನಿಮಗೆ ಎರಡು ಎಕರೆ ಮತ್ತು ನಿಮ್ಮ ಸಹೋದರನಿಗೆ ಎರಡು ಎಕರೆ ಹೋಗುತ್ತದೆ. ಆ ಎರಡು ಎಕರೆ ಆಸ್ತಿಯನ್ನು ತಂದೆ ಕೊಡಲು ಒಪ್ಪದಿದ್ದಾಗ ನೀವು ನ್ಯಾಯಾಲಯಗಳಲ್ಲಿ ಧಾವೇ ಹೂಡುವ ಮೂಲಕ ನಿಮ್ಮ ಆಸ್ತಿ ಹಕ್ಕು ಸ್ಥಾಪಿಸಬಹುದು.
ಒಂದು ವೇಳೆ ತಂದೆ ಮೃ’ತ ಪಟ್ಟಿದ್ದರೆ ಆಗ ನೇರವಾಗಿ ತಾತನಿಂದ ಮೊಮ್ಮಕ್ಕಳಿಗೆ ಆಸ್ತಿ ಬರುತ್ತದೆ. ಆದರೆ ಹೆಣ್ಣು ಮಕ್ಕಳು ತಂದೆಯಿಂದ ಆಸ್ತಿ ಪಡೆದಿದ್ದರೆ ಆಕೆ ಬದುಕಿರುವಾಗಲೇ ಆ ಹೆಣ್ಣು ಮಗಳ ಮಕ್ಕಳು ತಾತನ (ತಾಯಿಯ ತಂದೆ) ಆಸ್ತಿಯಲ್ಲಿ ಪಾಲು ಕೇಳಲು ಅಧಿಕಾರವಿರುವುದಿಲ್ಲ.