10ನೇ ತರಗತಿ ಪಾಸ್ ಆಗಿರುವವರಿಗೆ KSRTC, BMTC ಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿದ್ದಾರೆ. ಇವರಿಗೆಲ್ಲ ಸರ್ಕಾರದಿಂದ ಸಿಹಿಸುದ್ದಿ ಇದೆ. ರಾಜ್ಯದಲ್ಲಿನ ಸರ್ಕಾರದ ವಿವಿಧ ಸಂಸ್ಥೆಗಳು ಹಾಗೂ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎನ್ನುವ ಅಧಿಕೃತ ಸುದ್ದಿ ಸರ್ಕಾರ ವತಿಯಿಂದ ಹೊರ ಬಿದ್ದಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಯಾವ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವ ಕರಡು ಪ್ರತಿ ಕೂಡ ಬಿಡುಗಡೆಯಾಗಿದ್ದು, ಅದರ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

WhatsApp Group Join Now
Telegram Group Join Now

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಸುಮಾರು 5,000ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವ ಸಂಬಂಧ ವಿವರವಾದ

ಅಧಿಸೂಚನೆಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ. ಮುಖ್ಯವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹೆಚ್ಚಿನ ಹುದ್ದೆಗಳು ಭರ್ತಿಯಾಗುತ್ತಿದ್ದು SSLC ಮತ್ತು PUC ವಿದ್ಯಾಭ್ಯಾಸ ಮಾಡಿದವರಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ.

ಈ ಮಾಹಿತಿ ಪ್ರಕಾರ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KKRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (RGUHS), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC), ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ (KUWSDB), ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಗಳಲ್ಲಿ (Karnataka Soap and Detergents Limited) ಖಾಲಿ ಇರುವ ವೃಂದ.

ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಸ್ಥಳೀಯ ವೃಂದದ ವಿವಿಧ ಹುದ್ದೆಗಳು ಖಾಲಿ ಇವೆ, ಮುಂದಿನ ದಿನಗಳಲ್ಲಿ ಈ ನೇಮಕಾತಿ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಈ ಪ್ರಕಟಣೆ ಸಂಬಂಧ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ.

1. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWDB)
* ಸಹಾಯಕ ಇಂಜಿನಿಯರ್ (Civil) – 50,
* ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆ (Group C) – 14.

2. ಬೃಹತ್ ಬೆಂಗಳೂರು ಮಹಾನಗರ ಸಾರಿಗೆ(BMTC):-
* ನಿರ್ವಾಹಕ – 2500
* ಸಹಾಯಕ ಲೆಕ್ಕಿಗ – 1
* ಸ್ಟಾಫ್‌ ನರ್ಸ್ – 1
ಫಾರ್ಮಾಸಿಸ್ಟ್ – 1
* ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (Group B) – 6
* ಅಧಿಕಾರಿ (ಲೆಕ್ಕಪತ್ರ) (Group B) – 1
* ಕಿರಿಯ ಅಧಿಕಾರಿ QAD – 2
* ಕಿರಿಯ ಅಧಿಕಾರಿ (R & D) – 1
* ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) – 2
* ಕಿರಿಯ ಅಧಿಕಾರಿ (ಸಾಮಗ್ರಿ / ಉಗ್ರಾಣ ವಿಭಾಗ) – 2
* ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) – 1
* ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) (Group A) – 1
* ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರ್ಕೆಟ್) – 1
* ನಿರ್ವಾಹಕರು (ಮಾರುಕಟ್ಟೆ) (Group A) – 1
* ಅಧಿಕಾರಿ (ಮಾರುಕಟ್ಟೆ) (Group A) – 2
* ಕಿರಿಯ ಅಧಿಕಾರಿ (ಮಾರುಕಟ್ಟೆ) (Group C) – 1
* ಮಾರಾಟ ಪ್ರತಿನಿಧಿ (ಮಾರುಕಟ್ಟೆ) (Group C) – 4
* ಕಿರಿಯ ಮಾರಾಟ ಪ್ರತಿನಿಧಿ (ಮಾರ್ಕೆಟ್) (Group C ) – 3
* ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) (Group D) – 11

3. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(RGUHS):-
* ಸಹಾಯಕ ಗ್ರಂಥಪಾಲಕ – 1
* ಜೂನಿಯರ್ ಪ್ರೋಗ್ರಾಮರ್ – 5
* ಸಹಾಯಕ ಇಂಜಿನಿಯರ್ 1
* ಸಹಾಯಕ 12
* ಕಿರಿಯ ಸಹಾಯಕ ಹುದ್ದೆ 25.

4. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC):-* * ಸಹಾಯಕ ಆಡಳಿತಾಧಿಕಾರಿ ಹುದ್ದೆ (Grade B) – 3
* ಸಹಾಯಕ ಲೆಕ್ಕಾಧಿಕಾರಿ – 2
* ಸಹಾಯಕ ಅಂಕಿಸಂಖ್ಯಾಧಿಕಾರಿ – 1
* ಸಹಾಯಕ ಉಗ್ರಾಣಾಧಿಕಾರಿ – 2
* ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ – 7
* ಸಹಾಯಕ ಕಾನೂನು ಅಧಿಕಾರಿ – 7
* ಸಹಾಯಕ ಅಭಿಯಂತರ ಖಾಲಿ ಹುದ್ದೆ(ಕಾಮಗಾರಿ) – 1

5. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC):-
* ಸಹಾಯಕ ಲೆಕ್ಕಿಗ – 15
* ನಿರ್ವಾಹಕ – 1737

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment

WhatsApp Group Join Now
Telegram Group Join Now