ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಈ ವರ್ಷ ಬರಗಾಲದ(drought) ಪರಿಸ್ಥಿತಿ ಎದುರಾಗಿರುವುದರಿಂದ ರೈತನ ಪರಿಸ್ಥಿತಿ ಸುಧಾರಿಸುವುದಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿರುವ ಸರ್ಕಾರವು ಅಂತೆಯೇ ರೈತರು ಸಹಕಾರಿ ಸಂಘಗಳಲ್ಲಿ (Co-operative Society) ಪಡೆದಿರುವ ದೀರ್ಘಾವಧಿ, ಮಧ್ಯಮಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ(Agriculture and agriculture related bad debt) ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ(CM siddaramaya) ರವರು ಘೋಷಣೆ ಮಾಡಿದ್ದರು.
ಇದೀಗ ರಾಜ್ಯ ಸರ್ಕಾರ(state government) ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ರೈತರು ರಾಜ್ಯದ ಸಹಕಾರ ಸಂಘಗಳಾದ (Co-operative Society) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲಗಳನ್ನು ಪಡೆದಿದ್ದ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಆಗುತ್ತಿದೆ. ಆದರೆ ಅದಕ್ಕೆ ಕೆಲವು ಕಂಡೀಶನ್ ಗಳನ್ನು ಕೂಡ ಹಾಕಲಾಗಿದ್ದು ಯಾವೆಲ್ಲ ರೈತರು ಈ ಬಡ್ಡಿಮನ್ನ ಅನುಕೂಲತೆ ಪಡೆಯುತ್ತಾರೆ ಅದಕ್ಕೆ ಇರುವ ಕಂಡಿಷನ್ ಗಳು ಏನು ಇಲ್ಲಿದೆ ನೋಡಿ ವಿವರ.
ಈ ಸುದ್ದಿ ಓದಿ:- ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಬಂದಿದೆಯೋ ಅಥವಾ ಇಲ್ಲವೋ ಈ ರೀತಿ ಚೆಕ್ ಮಾಡಿ.!
* 31.12.2023ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ಫೆ.29, 2024 ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ ಅಥವಾ ಸಾಲ ಮಾಡಿರುವಂತಹ ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದರೆ ಮಾತ್ರ ಅಂತಹ ರೈತರುಗಳ ಈ ಮೊತ್ತಕ್ಕೆ ಬಾಕಿ ಇದ್ದ ಬಡ್ಡಿಯನ್ನು ಮನ್ನಾ ಮಾಡಲು ಮಂಜೂರಾತಿ ನೀಡಲಾಗಿದೆ.
* ಕೃಷಿಯೇತರ ಉದ್ದೇಶಗಳಿಂದ ಮಾಡಿರುವ ಸಾಲಗಳಿಗೆ ಅನ್ವಯವಾಗುವುದಿಲ್ಲ ಈ ಮೇಲೆ ತಿಳಿಸಿರುವ ಸಂಸ್ಥೆಗಳನ್ನು ಹೊರತುಪಡಿಸಿ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೂ ಈ ಸೌಲಭ್ಯ ಅನ್ವಯ ಆಗುವುದಿಲ್ಲ.
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ.!
ಆದರೆ ನಬಾರ್ಡ್ ಗುರುತಿಸಿದ ಕೃಷಿ ಅಥವಾ ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ(irrigation), ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
* ಮಾರಿಟೋರಿಯಂ ಅವಧಿಯಲ್ಲಿ ಸುಸ್ತಿಯಾಗಿರುವ ಬಡ್ಡಿಗೂ ಸಹ ಅನ್ವಯವಾಗುತ್ತದೆ. ಒಂದು ವೇಳೆ ರೈತರು ಮರುಪಾವತಿಸುವ ಸುಸ್ತಿ ಸಾಲದ ಅಸಲು ಏಪ್ರಿಲ್ 1, 2004 ಕ್ಕಿಂತ ಹಿಂದಿನ ಅವಧಿಯ ಸಾಲವಾಗಿದ್ದರೆ, ಅದರ ಬಡ್ಡಿ ಪಾವತಿಸಲು ಬಾಕಿ ಇದ್ದ ದಿನಾಂಕದಿಂದ ಸಾಲ ಮರುಪಾವತಿ ದಿನಾಂಕದವರೆಗೆ ಸಾಲಗಳಿಗೆ ನಿಗದಿಮಾಡಲಾಗಿರುವ ಬಡ್ಡಿದರ.
ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಇನ್ಮುಂದೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರಲ್ಲ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!
ಅಥವಾ ಶೇ.12 ರ ಬಡ್ಡಿದರ ಇದರಲ್ಲಿ ಯಾವುದು ಕಡಿಮೆಯೋ ಅಂತಹ ಬಡ್ಡಿ ಆಧಾರದಲ್ಲಿ ಸಹಕಾರ ಸಂಘಗಳಿಗೆ ಸರ್ಕಾರದ ವತಿಯಿಂದ ಬಡ್ಡಿ ಸಹಾಯಧನವನ್ನು ಭರಿಸಲಾಗುವುದು. ಅಂತೆಯೇ, ಏಪ್ರಿಲ್ 1 2004ರ ನಂತರದ ಸಾಲಗಳಿಗೆ ಆಯಾ ವರ್ಷದಲ್ಲಿ ರೈತರು ಪಾವತಿಸಬೇಕಾದ ಬಡ್ಡಿ ಮತ್ತು ಸರ್ಕಾರ ಪಾವತಿಸಬೇಕಾದ ಬಡ್ಡಿ ಸಹಾಯಧನದ ಒಟ್ಟು ಬಡ್ಡಿ ಅಥವಾ ಗರಿಷ್ಠ ಶೇ.12 ಇದರಲ್ಲಿ ಯಾವುದು ಕಡಿಮೆಯೋ ಆ ಬಡ್ಡಿಯನ್ನು ಸಂಬಂಧಿಸಿದ ಸಹಕಾರ ಸಂಸ್ಥೆಗಳಿಗೆ ಸರ್ಕಾರದಿಂದ ಭರಿಸಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
* 10 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಸಾಮಾನ್ಯ ಬಡ್ಡಿ ದರದಲ್ಲಿ ವಿತರಿಸಿದರೂ ಸಹ ಆಯಾ ವರ್ಷದಲ್ಲಿ ರೂ.10 ಲಕ್ಷಗಳವರೆಗೆ ನಿಗದಿಪಡಿಸಿದ ಬಡ್ಡಿ ದರದನ್ವಯ ಬಡ್ಡಿ ಮನ್ನಾ ಮೊತ್ತ ಕ್ಲೇಮ್ ಮಾಡಬೇಕು, ಮರುಪಾವತಿಸುವ ಸಾಲಗಳಿಗೆ ಯಾವುದೇ ಸುಸ್ತಿ ಬಡ್ಡಿ, ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿ, ವಸೂಲಿ ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಸಹಕಾರ ಸಂಸ್ಥೆಗಳು ಕ್ಲೇಮ್ ಮಾಡುವಂತಿಲ್ಲ. ಈ ಎಲ್ಲಾ ಕಂಡಿಷನ್ ಗಳಿಗೆ ಒಳಪಟ್ಟ ರೈತರ ಸಾಲದ ಬಡ್ಡಿ ಮಾತ್ರ ಮನ್ನಾ ಆಗಲಿದೆ ಎಂಬ ವಿಚಾರವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.!