ಈಗ ಭಾರತವು ಕೂಡ ಡಿಜಿಟಲ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದ್ದೆ. ಇಂದು ಪ್ರತಿಯೊಂದು ವಿಷಯವು ಕೂಡ ಮೊಬೈಲ್ ಹಾಗೂ ಕಂಪ್ಯೂಟರ್ ಸಹಾಯದಿಂದ ಆನ್ಲೈನ್ನಲ್ಲಿ (online) ನಡೆಯುತ್ತಿದೆ. ನಮ್ಮ ದಿನನಿತ್ಯದ ಎಷ್ಟೋ ಚಟುವಟಿಕೆಗಳಿಗೆ ನಾವು ಆನ್ಲೈನ್ ಅನುಸರಿಸುತ್ತೇವೆ.
ಇದರಿಂದ ಜನರ ಸಮಯ ಹಾಗೂ ಹಣ ಉಳಿತಾಯವಾಗುತ್ತಿದೆ ಮತ್ತು ಬಹಳ ವೇಗವಾಗಿ ಜನರ ಕಾರ್ಯಗಳು ನಡೆಯುತ್ತಿವೆ. ಸರ್ಕಾರಿ ಕೆಲಸಗಳು ಕೂಡ ಈಗ ಆನ್ಲೈನ್ ಮೂಲಕ ನಡೆಯುತ್ತಿದ್ದು ನೀವು ಯಾವುದೇ ಅರ್ಜಿ ಸಲ್ಲಿಸಿ ಸೇವೆ ಪಡೆಯಬೇಕಿದ್ದರೂ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಮಾಡಬಹುದು.
ಆ ಪ್ರಕಾರವಾಗಿ ಈಗ ಮತದಾರರ ಚೀಟಿಯನ್ನು ಹೇಗೆ ಆನ್ಲೈನ್ ನಲ್ಲಿ ಪಡೆಯಬಹುದು ಎನ್ನುವುದನ್ನು ತಿಳಿಸುತ್ತಿದ್ದೇನೆ. ಸರ್ಕಾರ ಈಗ ಡಿಜಿಟಲೈಸ್ ವೋಟರ್ ಐಡಿ (Digitalized Voter ID) ನೀಡುತ್ತಿದೆ, ಹೊಸದಾಗಿ ಅರ್ಜಿ ಸಲ್ಲಿಸುವವರು ಅಥವಾ ಈಗಾಗಲೇ ವೋಟರ್ ಐಡಿ ಇದ್ದರೂ ಡಿಜಿಟಲ್ ರೂಪದ ವೋಟರ್ ಐಡಿ ಬಯಸುವವರು ಈ ವಿಧಾನವನ್ನು ಬಳಸಿ ವೋಟರ್ ಐಡಿ ಪಡೆಯಿರಿ.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಮಹತ್ತರದ ತೀರ್ಪು ನೀಡಿದ ಹೈಕೋರ್ಟ್.!
* Playstore ನಲ್ಲಿ Voter helpline app ಡೌನ್ಲೋಡ್ ಮಾಡಿಕೊಳ್ಳಿ (ಇದು ಭಾರತ ಸರ್ಕಾರದ Election Commision of India ಆಪ್ ಆಗಿರುತ್ತದೆ, ಒಮ್ಮೆ ಡೌನ್ಲೋಡ್ ಮಾಡಿಕೊಂಡರೆ ನಾಲ್ಕು ಜನರಿಗೆ ನೀವು ಅಪ್ಲೈ ಮಾಡಬಹುದು)
* Voter Registration ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ
*New Voter ID Registration ಎಂದು ಇರುವ ಆಪ್ಷನ್ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ನಂಬರ್ (Mobile No.) ಹಾಕಿ ನಿಮಗೆ ಇಷ್ಟದ ಪಾಸ್ವರ್ಡ್ ಸೆಟ್ (Set Password) ಮಾಡಿ Send OTP ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಆ OTP ನಮೂದಿಸಿ ಲಾಗಿನ್ (Login) ಆಗಿ
* New Voter Registration (Form 6) ಏನು ಆಪ್ಷನ್ ಸೆಲೆಕ್ಟ್ ಮಾಡಿ, let start ಕ್ಲಿಕ್ ಮಾಡಿ
* ನೀವು ಮೊದಲ ಬಾರಿಗೆ ಹೊಸದಾಗಿ ವೋಟರ್ ಐಡಿ ಪಡೆಯಲು ಅಪ್ಲೈ ಮಾಡುತ್ತಿದ್ದರೆ ಅಥವಾ ನಿಮ್ಮ ಬಳಿ ಈಗಾಗಲೇ ವೋಟರ್ ಐಡಿ ಇದ್ದು ಡಿಜಿಟಲ್ ವೋಟರ್ ಐಡಿ ಗಾಗಿ ಅಪ್ಲೈ ಮಾಡುತ್ತಿದ್ದೀರಿ ಎನ್ನುವ ಆಪ್ಷನ್ ಇರುತ್ತದೆ ನಿಮ್ಮ ಆಯ್ಕೆ ಏನು ಅದನ್ನು ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಈ ಮಹಿಳೆಯರ ಗೃಹಲಕ್ಷ್ಮಿ ಹಣ ಮತ್ತು ಅಕ್ಕಿ ಹಣ ಬಂದ್, 5 ಲಕ್ಷ BPL ಕಾರ್ಡ್ ಕ್ಯಾನ್ಸಲ್, ಹೊಸ ಪಟ್ಟಿ ಬಿಡುಗಡೆ ನಿಮ್ಮ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!
* ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಫೋಟೋ ತೆಗೆದು ಇಟ್ಟುಕೊಂಡಿದ್ದರೆ ಅನುಕೂಲ. ಯಾಕೆಂದರೆ, ಮುಂದಿನ ಹಂತದಲ್ಲಿ ಅದನ್ನು ಅಪ್ಲೋಡ್ ಮಾಡಬೇಕು. ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳಿರುತ್ತದೆ Name, date of birth, Gender, Mobile No., Relation No. ಇತ್ಯಾದಿ ಮಾಹಿತಿ ನಮೂದಿಸಿ ಅಥವಾ ಕೆಲವೊಮ್ಮೆ ಆಟೋ ಅಪ್ಡೇಟ್ ಕೂಡ ಆಗಿರುತ್ತದೆ.
POI ದಾಖಲೆಯಾಗಿ ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್ ಇನ್ನಿತರ ದಾಖಲೆಗಳನ್ನು ಕೇಳಲಾಗಿರುತ್ತದೆ ಆ ಆಪ್ಷನ್ ನಲ್ಲಿ ಗ್ಯಾಲರಿ ಇಂದ ಫೋಟೋ ಸೆಲೆಕ್ಟ್ ಮಾಡುವ ಆಯ್ಕೆ ಇರುತ್ತದೆ ಈಗಾಗಲೇ ನಿಮ್ಮ ಫೋನ್ ನಲ್ಲಿ ಫೋಟೋ ತೆಗೆದು ಇಟ್ಟುಕೊಂಡಿರುವುದನ್ನು ಸೆಲೆಕ್ಟ್ ಮಾಡಿ ಅಪ್ಲೋಡ್ ಮಾಡಿ.
* ಮುಂದಿನ ಹಂತ Relation Type, ನೀವು ನಿಮ್ಮ ತಂದೆ ತಾಯಿ ಅಥವಾ ಗಂಡನ ವೋಟರ್ ಐಡಿ ತೆಗೆದುಕೊಳ್ಳಿ ಅದರಲ್ಲಿ ಇರುವಂತ ಮಾಹಿತಿಗಳನ್ನು ತುಂಬಿಸಿ ಮತ್ತು ನಿಮ್ಮ ಅವರ ಸಂಬಂಧ ಏನಾಗಬೇಕು ಎನ್ನುವ ಆಪ್ಷನ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ.
ಈ ಸುದ್ದಿ ಓದಿ:- ಆಸ್ತಿ ಮತ್ತು ಜಮೀನಿಗೆ ಕರಾರು ಪತ್ರ, ಒಪ್ಪಂದ ಪತ್ರ ಬರೆಯುವುದು ಹೇಗೆ ನೋಡಿ.!
* ಮುಂದಿನ ಹಂತದಲ್ಲಿ ನಿಮ್ಮ ವಿಳಾಸವನ್ನು ಸೆಲೆಕ್ಟ್ ಮಾಡಿ ಮನೆ ನಂ., ರಸ್ತೆ, ಗ್ರಾಮ, ಅಂಚೆ ಪಿನ್ ಕೋಡ್, ಹೋಬಳಿ, ತಾಲೂಕು, ಜಿಲ್ಲೆ ಎಲ್ಲವನ್ನು ಸೆಲೆಕ್ಟ್ ಮಾಡಿ ಮತ್ತು POI ದಾಖಲೆ ಕೇಳಿರುತ್ತಾರೆ, Aadhar Card ಅಪ್ಲೋಡ್ ಮಾಡಿ.
* ಕೊನೆಯಲ್ಲಿ ರಿಲೇಶನ್ ಟೈಪ್ ನೀವು ಯಾರ ದಾಖಲೆ ತೆಗೆದುಕೊಂಡಿದ್ದೀರಿ ಅವರ Name ಹಾಗೂ epic No. ಹಾಕಿ
* declaration ಬರುತ್ತದೆ. ನೀವು ನೀಡಿರುವ ಮಾಹಿತಿ ಸರಿ ಇದೆಯೇ? ದಾಖಲೆಗಳು ಸರಿ ಇದೆಯೇ ಎನ್ನುವುದನ್ನು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ. ಎಲ್ಲವೂ ಸರಿ ಇದ್ದರೆ ಸಬ್ಮಿಟ್ ಮಾಡಿದ ತಕ್ಷಣ ನೀವು ಕೊಟ್ಟಿದ್ದ ಮೊಬೈಲ್ ಸಂಖ್ಯೆಗೆ SMS ಕೂಡ ಬರುತ್ತದೆ. ಅದರಲ್ಲಿ ರೆಫರೆನ್ಸ್ ನಂಬರ್ ಇರುತ್ತದೆ ಮತ್ತು ನೀವು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಡಿಜಿಟಲ್ ವೋಟರ್ ಐಡಿ ಬರುತ್ತದೆ.