ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ವೇತನ 61,500/- ಆಸಕ್ತರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಈ ವರ್ಷ ಅದ್ಭುತವಾದ ಅವಕಾಶಗಳು ಸಿಗುತ್ತಿವೆ. ಈಗಾಗಲೇ ಗ್ರಾಮ ಆಡಳಿತ ಅಧಿಕಾರಿ ಹಾಗೂ ಸರ್ವೆಯರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಈ ನೇಮಕಾತಿ ಕುರಿತಾದ ಅಧಿಕೃತ ಆದೇಶ ಸದ್ಯದಲ್ಲೇ ಹೊರ ಬೀಳಲಿದ್ದು.

ಇದರ ಜೊತೆಗೆ KSRTC ಹಾಗೂ BMTC ಯಲ್ಲಿ ಬೃಹತ್ ಸಂಖ್ಯೆಯ ನಿರ್ವಾಹಕ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಯು ಈ ವರ್ಷವೇ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ (Panchayathraj fellowship recruitment) ಕಾರ್ಯಕ್ರಮದ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಈ ಸುದ್ದಿ ಓದಿ:- 14 ಕೋಟಿ ರೈತರಿಗೆ ಬರ ಪರಿಹಾರ ಹಣ ಜಮಾ.! ನಿಮ್ಮ ಹೆಸರಿದೇಯೇ ಈ ರೀತಿ ಚೆಕ್ ಮಾಡಿ.!

ಪ್ರಸ್ತುತವಾಗಿ ಕಲ್ಯಾಣ ಕರ್ನಾಟಕ ಭಾಗದ 07 ಜಿಲ್ಲೆಗಳ ಪ್ರತಿ ತಾಲ್ಲೂಕಿಗೆ ಒಬ್ಬರನ್ನು ನೇಮಿಸಲು ಅರ್ಹ ಮತ್ತು ಅನುಭವ ಹೊಂದಿರುವ ಯುವ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳಿಗಾಗಿ ಅಧಿಕೃತ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ನೇಮಕಾತಿ ಇಲಾಖೆ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR)
ಒಟ್ಟು ಹುದ್ದೆಗಳ ಸಂಖ್ಯೆ : 51 ಹುದ್ದೆಗಳು
ಹುದ್ದೆಗಳ ಹೆಸರು : ಫೆಲೋಶಿಪ್

ಉದ್ಯೋಗ ಸ್ಥಳ : ಕಲ್ಯಾಣ ಕರ್ನಾಟಕ ಜಿಲ್ಲೆಗಳು
* ಬೀದರ್ ಜಿಲ್ಲೆ
* ಕಲಬುರಗಿ ಜಿಲ್ಲೆ
* ರಾಯಚೂರು ಜಿಲ್ಲೆ
* ಯಾದಗಿರಿ ಜಿಲ್ಲೆ
* ಕೊಪ್ಪಳ ಜಿಲ್ಲೆ
* ಬಳ್ಳಾರಿ ಜಿಲ್ಲೆ
* ವಿಜಯನಗರ ಜಿಲ್ಲೆ

ಈ ಸುದ್ದಿ ಓದಿ:- ಚಿಟ್ ಫಂಡ್ ಬದಲು ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಲಾಭ, ಕೋಟ್ಯಾಧಿಪತಿಗಳಾಗಲು ಇದು ಬೆಸ್ಟ್.! 100% ನಿಮ್ಮ ಹಣ ಸೇಫ್.!

ವೇತನ ಶ್ರೇಣಿ:-

* ಫೇಲೋ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕ ಸಂಬಳವು ರೂ.60,000 ಇರುತ್ತದೆ
* ವೇತನದ ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ ಪ್ರಯಾಣ ಮಾಡಲು ಪ್ರತಿ ತಿಂಗಳು 1500 ರೂಪಾಯಿಯ ಪ್ರಯಾಣ ಭತ್ಯೆಯನ್ನು ಕೂಡ ನೀಡಲಾಗುವುದು.

ಶೈಕ್ಷಣಿಕ ವಿದ್ಯಾರ್ಹತೆ:-

* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಮಾಜಿಕ ವಿಜ್ಞಾನ ವಿಷಯಗಳಾದ ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರ ಅಥವಾ ಗ್ರಾಮೀಣಾಭಿವೃದ್ಧಿ ಅಥವಾ ಸಮಾಜ ಕಾರ್ಯ ಅಥವಾ ಸಾರ್ವಜನಿಕ ನೀತಿ ವಿಷಯಗಳಲ್ಲಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ಈ ಸುದ್ದಿ ಓದಿ:- ಆಸ್ತಿಗೆ ಸಂಬಂಧಪಟ್ಟ ವಿಲ್ ಎಂದರೇನು.? ಯಾರು ಬರೆಯಬಹುದು.? ಇದರಿಂದ ಎಷ್ಟು ಲಾಭಗಳಿವೆ ನೋಡಿ.!

* ಪ್ರಮುಖವಾದ ವಿಷಯವೇನೆಂದರೆ, ಈ ಮೇಲೆ ತಿಳಿಸಿದ ಶೈಕ್ಷಣಿಕ ವಿದ್ಯಾರ್ಹತೆಯೊಂದಿಗೆ ಅಭಿವೃದ್ಧಿ ವಲಯದಲ್ಲಿ ಕನಿಷ್ಠ 1 ರಿಂದ 2 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿದ್ದರೆ ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.

* ಕ್ಷೇತ್ರ ಮಟ್ಟದ ಅನುಭವ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಒಳಪಡಿಸಿ ಆದ್ಯತೆ ನೀಡಲಾಗುವುದು, ಇದರೊಂದಿಗೆ M.Phil ಅಥವಾ Ph.D ಆದ್ಯತೆ ನೀಡಲಾಗುವುದು.

ನಿಮ್ಮ ಮೊಬೈಲ್ ನಲ್ಲೇ ಸರ್ಚ್ ನಲ್ಲಿ ಕೇವಲ ಹೆಸರು ಹಾಕಿ ಸಾಕು.! ಮತದಾರರ ಸಂಪೂರ್ಣ ಮಾಹಿತಿ ಪಡೆಯಬಹುದು.!

ವಯೋಮಿತಿ :
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 32 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ:

* ಆನ್ಲೈನ್ ನಲ್ಲಿ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು
* https://crispindia.net/rgpr-fellowship-karnataka/application_form.php ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ:-

* ಮೊದಲಿಗೆ ಮೆರಿಟ್ ಕಮ್ ಅಪ್ಟಿಟ್ಯೂಡ್ ಮೌಲ್ಯಮಾಪನ ನಡೆಸಲಾಗುತ್ತದೆ.
* ನಂತರ ಲಿಖಿತ ಪರೀಕ್ಷೆ ನಡೆಸಿ ಅಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 22-01-2024
* ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05-02-2024

ಈ ಸುದ್ದಿ ಓದಿ:- ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now