ಕ್ರಯ ಮಾಡಿದ ಮಾರಾಟ ಪತ್ರವನ್ನು ರದ್ದುಗೊಳಿಸುವುದು ಹೇಗೆ ನೋಡಿ.!

 

WhatsApp Group Join Now
Telegram Group Join Now

ಆಸ್ತಿಯನ್ನು ದಾನ, ವಿಭಾಗ ಮತ್ತು ಕ್ರಯದ ಮೂಲಕ ಮತ್ತೊಬ್ಬರಿಗೆ ನೀಡಲಾಗುತ್ತದೆ. ಇಲ್ಲಿ ಕ್ರಯ (Sale deed) ಆಗಿದೆ ಎನ್ನುವುದು ಆಸ್ತಿ ಮಾರಾಟವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಕ್ರಯದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಆಗಿದ್ದರೆ ಅನೇಕರು ರಿಜಿಸ್ಟರ್ ಆದಮೇಲೆ ಅದನ್ನು ಕ್ಯಾನ್ಸಲ್ (Sale deed Cancelation) ಮಾಡುವುದಕ್ಕೆ ಆಗುವುದಿಲ್ಲ ನಾವು ಖರೀದಿಸಿದ ಮೇಲೆ ಆ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಬೇಕು ಹೊರತು ಬೇರೆ ದಾರಿ ಇಲ್ಲ ಎಂದು ತಪ್ಪು ತಿಳಿದುಕೊಂಡಿದ್ದಾರೆ.

ಆದರೆ ಖಂಡಿತವಾಗಿಯೂ ಇದೊಂದು ತಪ್ಪಾದ ಮಾಹಿತಿ ಆಗಿದೆ. ಆಸ್ತಿ ಖರೀದಿ ಆದಮೇಲೆ ರಿಜಿಸ್ಟರ್ ಆಗಿದ್ದರೂ ಕೂಡ ನೀವು ಆ ಕ್ರಯ ಪತ್ರವನ್ನು ರದ್ದುಗೊಳಿಸಬಹುದು, ಕಾನೂನಿನಲ್ಲಿ ಇದಕ್ಕೆ ಅವಕಾಶ ಇದ್ದೇ ಇದೆ, ಈ ವಿಷಯದ ಬಗ್ಗೆ ನಾವು ಇಂದು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ವೇತನ 61,500/- ಆಸಕ್ತರು ಅರ್ಜಿ ಸಲ್ಲಿಸಿ.!

ಕಾರಣಾಂತರಗಳಿಂದ ನಾವು ಖರೀದಿ ಪ್ರಕ್ರಿಯೆ ರದ್ದು ಪಡಿಸಬೇಕಾಗುತ್ತದೆ. ಕೆಲವೊಮ್ಮೆ ಆ ಆಸ್ತಿಯಲ್ಲಿ ತಕರಾರು ಇರಬಹುದು. ಉದಾಹರಣೆಗೆ, ಪಿತ್ರಾರ್ಜಿತವಾಗಿ ಇರುವ ಆಸ್ತಿಯನ್ನು ಯಾವುದಾದರು ವ್ಯಕ್ತಿಯು ಅವರ ಸಹೋದರ ಸಹೋದರಿಯರ ಅನುಮತಿ ಕೇಳದೆ ಮೋ’ಸ ಮಾಡಿ ಒಬ್ಬನೇ ಮಾಲೀಕ ಎಂದು ಹೇಳಿ ಆಸ್ತಿ ಮಾರಾಟ ಮಾಡಿದ್ದರೆ.

ಆಗ ಆತನ ಸಹೋದರ ಸಹೋದರಿಯರು ಈ ಆಸ್ತಿ ಕ್ರಯ ಆಗಿರುವುದನ್ನು ರದ್ದುಪಡಿಸಲು ಕೋರ್ಟ್ ನಲ್ಲಿ ಕೇಸ್ ಹಾಕಬಹುದು. ಅರ್ಜಿ ಸಲ್ಲಿಸಿ ಆ ಕ್ರಯವನ್ನು ರದ್ದುಪಡಿಸಬಹುದು. ಇದು ಮಾತ್ರ ಅಲ್ಲದೆ ಆ ವ್ಯಕ್ತಿಯು ಕೂಡ ಈ ಕ್ರಯ ಪತ್ರವನ್ನು ರದ್ದುಪಡಿಸಲು ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:- 14 ಕೋಟಿ ರೈತರಿಗೆ ಬರ ಪರಿಹಾರ ಹಣ ಜಮಾ.! ನಿಮ್ಮ ಹೆಸರಿದೇಯೇ ಈ ರೀತಿ ಚೆಕ್ ಮಾಡಿ.!

ಕೆಲವೊಮ್ಮೆ ಖರೀದಿ ಮಾಡಿದ ನಂತರ ಆಸ್ತಿಗೆ ಸಂಬಂಧಿಸಿದ ಹಾಗೆ ವ್ಯಾಜ್ಯಗಳು ಇವೆ ಎನ್ನುವುದಾಗಲಿ ಅಥವಾ ಆತನೇ ಆಸ್ತಿ ಸಂಪೂರ್ಣ ಒಡೆಯ ಎನ್ನುವುದರ ಬಗ್ಗೆ ಆಗಲಿ ಗೊಂದಲಗಳಿವೆ ಎನ್ನುವುದು ತಿಳಿದು ಬಂದಾಗ ಆಗಲು ಕೂಡ ರದ್ದುಪಡಿಸುವುದಕ್ಕೆ ಅವಕಾಶವಿದೆ.

ಇನ್ನು ಕೆಲವು ಸಂದರ್ಭಗಳಲ್ಲಿ ಆಸ್ತಿ ಮಾರಾಟ ಮಾಡಿರುತ್ತಾರೆ ಆದರೆ ಹೆಚ್ಚು ಟ್ಯಾಕ್ಸ್ ಕಟ್ಟಬೇಕಾಗುತ್ತದೆ ಎನ್ನುವ ಕಾರಣಕ್ಕೆ ಆ ಆಸ್ತಿಯ ವ್ಯಾಲ್ಯೂ ಗಿಂತ ಕಡಿಮೆ ಬೆಲೆಗೆ ಆಸ್ತಿ ಮಾರಾಟವಾಗಿದೆ ಎನ್ನುವ ರೀತಿ ಪತ್ರ ಮಾಡಿಸಿ ಆಸ್ತಿ ಮಾರಾಟ ಮಾಡಿರುತ್ತಾರೆ ನಂತರ ಹಣ ಬರದೆ ಮೋ’ಸ ಆಗಿರುತ್ತದೆ. ಆಗ ಕೂಡ ಮರಾಟ ಮಾಡಿದ ಅಂದರೆ ಕ್ರಯ ಮಾಡಿಕೊಟ್ಟ ವ್ಯಕ್ತಿಯೇ ಅದನ್ನು ರ’ದ್ದುಪಡಿಸುವಂತೆ ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:- ಚಿಟ್ ಫಂಡ್ ಬದಲು ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಲಾಭ, ಕೋಟ್ಯಾಧಿಪತಿಗಳಾಗಲು ಇದು ಬೆಸ್ಟ್.! 100% ನಿಮ್ಮ ಹಣ ಸೇಫ್.!

ಇಂತಹ ಕೇಸ್ ಗಳಲ್ಲಿ ಕೋರ್ಟು ಮಾರಾಟ ಮಾಡಿದ ವ್ಯಕ್ತಿಗೆ ಆಸ್ತಿ ವ್ಯಾಲ್ಯೂ 1% ದಂಡವಾಗಿ ಕಟ್ಟಿಸಿಕೊಳ್ಳುತ್ತದೆ. ಮತ್ತು ಆ ಕ್ರಯವನ್ನು ರದ್ದುಪಡಿಸುತ್ತದೆ ಮತ್ತು ಕ್ರಯ ಮಾಡುವ ಮುನ್ನ ಏನಾದರೂ ಇದರ ಬಗ್ಗೆ ಸೇಲ್ ಅಗ್ರಿಮೆಂಟ್ (Sale agriment) ಮಾಡಿಕೊಂಡಿದ್ದರೆ ಆ ಅಗ್ರಿಮೆಂಟ್ ನಲ್ಲಿರುವ ಯಾವುದಾದರೂ ನಿಯಮ ಮುರಿದಾಗ ಅದನ್ನು ದಾಖಲೆಯಾಗಿ ತೋರಿಸಿ ಕೂಡ ಕ್ಯಾನ್ಸಲ್ ಮಾಡಬಹುದು.

ಈ ರೀತಿಯಾಗಿ ಅನೇಕ ಕಾರಣಗಳಿಗೆ ಸೂಕ್ತ ಕಾರಣವನ್ನು ತಿಳಿಸುವ ಮೂಲಕ ಕ್ರಯ ರದ್ದುಪಡಿಸುವ ಅವಕಾಶವನ್ನು ಕಾನೂನಿನಲ್ಲಿ ನೀಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಇದ್ದರೆ ಕೋರ್ಟ್ ನಲ್ಲಿ ಅದನ್ನು ಇತ್ಯರ್ಥ ಪಡಿಸಿಕೊಳ್ಳಬಹುದು.

ಈ ಸುದ್ದಿ ಓದಿ:- ಆಸ್ತಿಗೆ ಸಂಬಂಧಪಟ್ಟ ವಿಲ್ ಎಂದರೇನು.? ಯಾರು ಬರೆಯಬಹುದು.? ಇದರಿಂದ ಎಷ್ಟು ಲಾಭಗಳಿವೆ ನೋಡಿ.!

ಈ ರೀತಿ ಆಸ್ತಿ ಮೇಲಿನ ಹಕ್ಕು ವರ್ಗಾವಣೆ ಕುರಿತಾದ ಕೆಲ ಪ್ರಮುಖ ಅಂಶಗಳು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಿಳಿದಿರಬೇಕು ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ವಿಚಾರದ ಬಗ್ಗೆ ಏನೇ ಹೆಚ್ಚಿನ ಮಾಹಿತಿ ಬೇಕಾಗಿದ್ದರೂ ನಿಮ್ಮ ವಕೀಲರನ್ನು ಅಥವಾ ಕಾನೂನು ಸಲಹಾ ಕೇಂದ್ರವನ್ನು ಸಂಪರ್ಕಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now