ಕನ್ನಡದ ಬಹು ನಿರೀಕ್ಷಿತ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಈ ಬಿಗ್ ಬಾಸ್ ಕಾರ್ಯಕ್ರಮವನ್ನು ತುಂಬಾ ಜನರು ಇಷ್ಟಪಟ್ಟು ನೋಡುತ್ತಿದ್ದರು ಆದರೆ ಇದೀಗ ಬಿಗ್ ಬಾಸ್ OTT ಪ್ರಾರಂಭವಾಗಿದ್ದು ಹಲವಾರು ಜನರು ಕಾರ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ ಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಬಿಗ್ ಬಾಸ್ ಅನ್ನು ಜನರು ಅಷ್ಟಾಗಿ ಇಷ್ಟಪಡುತ್ತಿಲ್ಲ ಕಾರಣ ಇಲ್ಲಿ ಸ್ಪರ್ಧೆ ಮಾಡಿರುವಂತಹ ಹಲವಾರು ಸ್ಪರ್ಧಿಗಳು ಬಿಗ್ ಬಾಸ್ ಗೆ ಯೋಗ್ಯರಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಸಹ ಈ ಒಂದು ಸೀಸನ್ ನಲ್ಲಿ ಚರ್ಚೆಗೆ ಒಳಪಡುತ್ತಿರುವಂತಹ ಸ್ಪರ್ಧಿಗಳು ಯಾರೆಂದರೆ ಸೋನು ಶ್ರೀನಿವಾಸ್ ಗೌಡ, ರಾಕೇಶ್ ಅಡಿಗ, ರೂಪೇಶ್ ಹಾಗೆಯೇ ಆರ್ಯವರ್ಧನ್ ಗುರೂಜಿ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಇವರ ವಿಷಯಗಳು ಆಗಾಗ ಬರುತ್ತಲೇ ಇರುತ್ತದೆ.
ಈಗಾಗಲೇ ಐದು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು ಉಳಿದಿರುವಂತಹ ಸ್ಪರ್ಧಿಗಳಲ್ಲಿ ಯಾರು ಫೈನಲ್ ಗೆ ಬಂದು ಈ ಒಂದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿನ್ ಆಗುತ್ತಾರೆ ಎನ್ನುವಂತಹ ಕುತೂಹಲ ಎಲ್ಲರಲ್ಲಿಯೂ ಇದೆ. ಈ ನಡುವೆ ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ಮಧ್ಯೆ ಏನೋ ಇದೆ ಎನ್ನುವಂತಹ ವಿಚಾರ ನಮಗೆ ಕೇಳಿ ಬರುತ್ತಿದೆ ಹೌದು ಹೆಚ್ಚಾಗಿ ಸೋನು ಶ್ರೀನಿವಾಸ್ ಗೌಡ ಅವರು ಮನೆಯಲ್ಲಿ ರಾಕೇಶ್ ಅಡಿಗ ಅವರ ಜೊತೆಯಲ್ಲಿ ಕ್ಲೋಸ್ ಆಗಿದ್ದಾರೆ ಅವರ ಜೊತೆಯಲ್ಲಿ ತುಂಬಾ ಸಮಯವನ್ನು ಕಳೆಯುತ್ತಾರೆ. ಈ ಒಂದು ವಿಚಾರವನ್ನು ನೋಡಿದರೆ ಸೋನು ಶ್ರೀನಿವಾಸ್ ಗೌಡ ಅವರಿಗೆ ರಾಕೇಶ್ ಅಡಿಗ ಅವರ ಮೇಲೆ ಪ್ರೀತಿ ಇರುವುದು ನಮಗೆ ಗೋಚರವಾಗುತ್ತದೆ.
ಸೋನು ಶ್ರೀನಿವಾಸ್ ಗೌಡ ಅವರು ರಾಕೇಶ್ ಅಡಿಗ ಅವರ ಜೊತೆಯಲ್ಲಿ ಮಾತನಾಡುವ ರೀತಿ ಹಾಗೆಯೇ ಅವರ ಜೊತೆಯಲ್ಲಿ ಸಲುಗೆಯಿಂದ ನಡೆದುಕೊಳ್ಳುವುದು ಈ ಎಲ್ಲವನ್ನು ನೋಡಿದರೆ ರಾಕೇಶ್ ಅಡಿಗ ಅವರ ಮೇಲೆ ಇವರಿಗೆ ಜಲಸ್ ಇದೆ ಎನ್ನುವುದು ಎಲ್ಲರಿಗು ಸಾಮಾನ್ಯವಾಗಿ ಗೊತ್ತಾಗುತ್ತದೆ. ರಾಕೇಶ್ ಅಡಿಗ ಅವರು ಸೋನುವ ಶ್ರೀನಿವಾಸ್ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಇತರ ಹೆಣ್ಣು ಮಕ್ಕಳ ಜೊತೆಯಲ್ಲಿ ಆಗಾಗ ಸ್ವಲ್ಪ ಕ್ಲೋಸ್ ಆಗಿ ಇರುತ್ತಾರೆ ಇದನ್ನು ನೋಡಿದಂತಹ ಸೋನು ಶ್ರೀನಿವಾಸ್ ಗೌಡ ಅವರು ಕೋಪ ಮಾಡಿಕೊಂಡು ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಅದೇ ರೀತಿಯಲ್ಲಿ ಸೋನುವ ಶ್ರೀನಿವಾಸ್ ಗೌಡ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ರಾಕೇಶ್ ಅಡಿಗ ಅವರು ಇದೀಗ ಜಯಶ್ರೀ ಅವರಿಗೆ ಕಿಸ್ ಕೊಡುವ ಮೂಲಕ ತೋರಿಸಲು ಹೊರಟಿದ್ದಾರೆ. ರಾಕೇಶ್ ಜಯಶ್ರೀ ಅವರಿಗೆ ಕಿಸ್ ಕೊಟ್ಟಂತಹ ಸಂದರ್ಭದಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ಮುಖದಲ್ಲಿ ವಿಭಿನ್ನವಾದ ಒಂದು ಎಕ್ಸ್ಪ್ರೆಶನ್ ಕೊಡುತ್ತಾರೆ ಹಾಗೆಯೇ ಅವರು ಕೋಪ ಮಾಡಿಕೊಂಡು ಆ ಸ್ಥಳದಿಂದ ಬೇರೆ ಕಡೆಗೆ ಹೋಗುತ್ತಾರೆ. ಸೋನು ಗೌಡ ಅವರು ನೇರವಾಗಿ ಯಾವುದೇ ವಿಚಾರವನ್ನು ಹೇಳಿಕೊಂಡಿಲ್ಲ, ಈ ಎಲ್ಲಾ ವಿಚಾರ ಎಲ್ಲವನ್ನು ಗಮನಿಸಿದಾಗ ನಮಗೆ ಸೋನು ಗೌಡ ಅವರಿಗೆ ರಾಕೇಶ್ ರವರ ಮೇಲೆ ಇರುವಂತಹ ಭಾವನೆ ಎಂತದ್ದು ಎಂದು ತಿಳಿಯುತ್ತದೆ. ಸೋನು ಶ್ರೀನಿವಾಸ್ ಗೌಡ ಅವರ ಈ ಒಂದು ಮನಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮೂಲಕ ತಿಳಿಸಿ.