ರೈತರಿಗೆ ಸರ್ಕಾರದಿಂದ ಮೊದಲನೇ ಕಂತಿನ ಬರ ಪರಿಹಾರ ಹಣ 2000 ಜಮೆ, ಹಣ ಬರದೆ ಇದ್ದವರು ಈ ರೀತಿ ಮಾಡಿ.!

 

WhatsApp Group Join Now
Telegram Group Join Now

2023-24ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಬಹುತೇಕ ರಾಜ್ಯದಾದ್ಯಂತ ಕೃಷಿಯು (Agriculture) ಸಂಪೂರ್ಣ ನೆಲಕಚ್ಚಿದೆ. ಪರಿಣಾಮ ರಾಜ್ಯದಲ್ಲಿ ಬರದ ವಾತಾವರಣ (drought) ಸೃಷ್ಟಿಯಾಗಿದೆ. NDRF ಪ್ರಕಾರ ಎಲ್ಲಾ ಜಿಲ್ಲೆಗಳ 212 ತಾಲೂಕುಗಳು ಬರಪೀಡಿತ ತಾಲ್ಲೂಕುಗಳು (drought declaired Thaluk) ಎಂದು ಘೋಷಣೆಯಾಗಿವೆ.

ಈ ಪರಿಸ್ಥಿತಿಯಲ್ಲಿ ಉಳಿದ ಎಲ್ಲರಿಗಿಂತ ರೈತನ ಕ’ಷ್ಟವು ದಯಾ ಹೀನವಾಗಿದೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತನಿಗೆ ನೆರವಾಗಲು ಮುಂದಾಗಿ ಬರ ಪರಿಹಾರ (drpught releif) ನೀಡುವುದಾಗಿ ತಿಳಿಸಿದ್ದವು. ಆ ಪ್ರಕಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಒಟ್ಟು ರೂ.8,000 ರೈತನಿಗೆ ಬರ ಪರಿಹಾರದ ಹಣ ಸಿಗಲಿದೆ.

ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಿದರೆ ರೈತನಿಗೆ ನೆರವಾಗುತ್ತದೆ ಎಂದು ರಾಜ್ಯ ಸರ್ಕಾರವು ಈವರೆಗೂ ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸದೆ, ಆದರೆ ಕೇಂದ್ರ ಸರ್ಕಾರದ ಕಡೆಯಿಂದ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಮೊದಲನೇ ಹಂತದ ಪರಿಹಾರದ ಹಣವನ್ನು ರಾಜ್ಯ ಸರ್ಕಾರದ ಹಣವನ್ನು ಬಿಡುಗಡೆ ಮಾಡಿದೆ.

ಈ ಸುದ್ದಿ ಓದಿ:- ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ.!

ಇದರ ಪ್ರಯುಕ್ತವಾಗಿ ಎಲ್ಲಾ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೂ DBT ಮೂಲಕ ಹಣವನ್ನು ಜಮೆ ಮಾಡಲಾಗುತ್ತಿದೆ. ಈ ಹಿಂದೆ ಸರ್ಕಾರ ಪರಿಹಾರದ ಹಣ ಪಡೆಯಲು ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆ ಮತ್ತು ತಮ್ಮ ಪಹಣಿ ಸಂಖ್ಯೆಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ (FRUITS) ಲಿಂಕ್ ಮಾಡಿಸಿ ಕಡ್ಡಾಯವಾಗಿ FID ಪಡೆದಿರಬೇಕು ಎಂದು ಸೂಚನೆ ಕೊಟ್ಟಿತ್ತು.

ಆ ಪ್ರಕಾರವಾಗಿ ನಡೆದುಕೊಂಡಿರುವ ರೈತರಗಳ ಖಾತೆಗೆ ಬರಹ ಪರಿಹಾರದ ಹಣ ವರ್ಗಾವಣೆ ಆಗಿದೆ ಮತ್ತು ಹಣ ಪಡೆದ ರೈತರ ಮೊಬೈಲ್ ಸಂಖ್ಯೆಗಳಿಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಕಡೆಯಿಂದ SMD ಸಂದೇಶ ಕೂಡ ರವಾನೆಯಾಗಿದೆ.

ಈ ರೀತಿ SMS ಪಡೆದ ರೈತರುಗಳು ಬರ ಪರಿಹಾರದ ಹಣ ಬಂದಿದೆ ಎಂದುಕೊಳ್ಳಬಹುದು. ಕೆಲವರಿಗೆ ತಾಂತ್ರಿಕ ದೋಷದಿಂದ ಅಥವಾ ಸರ್ವರ್ ಸಮಸ್ಯೆಯಿಂದ SMS ತಲುಪದೇ ಇರಬಹುದು ಒಮ್ಮೆ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಚೆಕ್ ಮಾಡಿದರೆ ಬರ ಪರಿಹಾರದ ರೂ.2000 ಹಣ ಜಮೆ ಆಗಿರುವುದರ ಬಗ್ಗೆ ತಿಳಿಯುತ್ತದೆ.

ಈ ಸುದ್ದಿ ಓದಿ:-ಕೇಂದ್ರ ಸರ್ಕಾರದ ಹೊಸ ಯೋಜನೆ, ಮಹಿಳೆಯರಿಗೆ ತಿಂಗಳಿಗೆ 15 ಸಾವಿರ ಹಣ ಬರುವ ಯೋಜನೆ.! ಇಲ್ಲಿದೆ ನೋಡಿ ಸಂಪೂರ್ಣ ವಿವರ.!

ಒಂದು ವೇಳೆ ನಿಮಗೆ ಹಣ ಬಂದೇ ಇಲ್ಲ ಎನ್ನುವುದಾದರೆ ಕೂಡಲೇ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಬರ ಪರಿಹಾರದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂದು ಪರಿಶೀಲಿಸಬಹುದು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕೂಡ ಮೊದಲೇ ಕಂತಿನ ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಇರುತ್ತದೆ. ಅದರಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದಲ್ಲಿ ನಿಮಗೆ ಹಣ ಬರುವುದಿಲ್ಲ.

ಆಗ ಕೂಡಲೇ ನೀವು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿ ಗಳಿಗೆ ಭೇಟಿ ಕೊಟ್ಟು ಸಮಸ್ಯೆಯನ್ನು ಹೇಳಿಕೊಳ್ಳಬಹುದು ಜೊತೆಗೆ ಸೂಕ್ತ ದಾಖಲೆಗಳನ್ನು ಕೊಟ್ಟು ಬರ ಪರಿಹಾರದ ಹಣ ಪಡೆಯಲು ನಿರೀಕ್ಷಣೆಯಲ್ಲಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕೂಡ ಸೇರಿಸುವಂತೆ ಮನವಿ ಸಲ್ಲಿಸಬಹುದು.

ಪರಿಹಾರ ಪೋರ್ಟಲ್ನಲ್ಲೂ (Through Parihara Portal) ಕೂಡ ರೈತನ ಆಧಾರ್ ಕಾರ್ಡ್ ಅಥವಾ ಮೊಬೈಲ್ ಸಂಖ್ಯೆ, FID ಹಾಕುವ ಮೂಲಕ ನಿಮಗೆ ಯಾವ ದಿನಾಂಕದಂದು ಯಾವ ಬ್ಯಾಂಕ್ ಶಾಖೆಗೆ ಹಣ ವರ್ಗಾವಣೆ ಆಗಿದೆ, ರೈತನ ಹೆಸರು ಜಮೀನಿನ ಸರ್ವೆ ನಂಬರ್ ವಿಸ್ತೀರ್ಣ ಸಮೇತವಾಗಿ ಪೂರ್ತಿ ಮಾಹಿತಿಯನ್ನು ಸರಳವಾಗಿ ಪಡೆಯಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now