ಸಿಂಹ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯ

ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು ಹೇಳಲಾಗುತ್ತದೆ. ಒಂದು ವಾರದಲ್ಲಿ ಸೌರಮಂಡಲದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿಕೊಂಡು ವಾರ ಭವಿಷ್ಯ ಹೇಳಲಾಗುತ್ತದೆ. ಈ ವಾರ ಭವಿಷ್ಯ ಹೆಚ್ಚು ಉಪಯೋಗಕಾರಿ. ಯಾಕೆಂದರೆ ನಮಗೆ ಬರುವಂತಹ ಸಮಸ್ಯೆಗಳು, ಎದುರಾಗುವ ಆಪತ್ತು ಇತ್ಯಾದಿಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ನಡೆದು ಕೊಳ್ಳಬಹುದು.

WhatsApp Group Join Now
Telegram Group Join Now

ತಿಂಗಳ ಭವಿಷ್ಯವೂ ಅದೇ ರೀತಿಯಾಗಿದೆ. ತಿಂಗಳ ಕಾಲ ಗ್ರಹಗತಿಗಳು ಯಾವ ರೀತಿಯಲ್ಲಿ ಇರುವುದು ಎನ್ನುವುದನ್ನು ತಿಳಿದು ಜ್ಯೋತಿಷ್ಯ ಹೇಳಲಾಗುತ್ತದೆ. ಸಿಂಹ ರಾಶಿಯವರಿಗೆ ಈ ತಿಂಗಳು ತುಂಬಾ ಶುಭಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯಬಹುದು. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ದೀರ್ಘಕಾಲದವರೆಗೆ ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಅವಧಿಯಲ್ಲಿ ನೀವು ಬಯಸಿದ ಕೆಲಸವನ್ನು ಪಡೆಯಬಹುದು. ಬಹಳಷ್ಟು ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದೀರಿ. ಈ ಮಾರ್ಗದರ್ಶನದಲ್ಲಿ ಉದ್ಯೋಗ ಫಲಪ್ರದವಾಗುತ್ತದೆ. ನೀವು ಈಗಾಗಲೇ ಕೆಲಸ ಮಾಡುತ್ತಿದ್ದರೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ನಿಮ್ಮ ಸ್ಥಾನವು ಹೆಚ್ಚಾಗುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಬಲಗೊಳ್ಳುತ್ತದೆ. ವ್ಯಾಪಾರಸ್ಥರ ಕೈಯಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶವಿದೆ.

ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಪುಟ್ಟ ಪುಟ್ಟ ವ್ಯಾಪಾರಿಗಳಿಗೂ ಅಧಿಕ ಲಾಭವಾಗುತ್ತದೆ. ಇನ್ನು ಪಾನಿಪುರಿ ಅಂಗಡಿಗಳಂತವರಿಗೆ ಲಾಭವೇ ಇದೆ. ಹೂವಿನ ವ್ಯಾಪಾರ, ಪೇಪರ್ ಹಾಕುವವರಿಗೆ, ಏಜೆಂಟ್ ಗಳಿಗೆ ಈ ತಿಂಗಳು ಅಧಿಕ ಲಾಭವಿದೆ. ನೀವು ಮಿತ್ರರಿಂದ ಜಗಳವಾಡುವುದನ್ನು ಕಡಿಮೆ ಮಾಡಿಕೊಳ್ಳಿ. ಸಹೋದರ ಅಥವಾ ಸಹೋದರರಿಂದ ಧನ ಲಾಭವನ್ನು ನೀವು ಈ ತಿಂಗಳು ನೋಡಬಹುದು. ಇನ್ನು ನಿಮಗೆ ಈ ಭೂಮಿಯ ಯೋಗವು ಚೆನ್ನಾಗಿದೆ. ದಕ್ಷಿಣ ಹಾಗೂ ಪೂರ್ವ ದಿಕ್ಕಿನಿಂದ ಹಣ ನಿರೀಕ್ಷೆಯನ್ನು ನೀವು ಮಾಡಿದರೆ ನಿಮಗೆ ಶ್ರೇಯಸ್ಸು. ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಸಿಂಹ ರಾಶಿಯವರು ಹೊಸದೊಂದು ವಿಚಾರಣೆಯಲ್ಲಿ ಬದ್ಧರಾಗಿದ್ದೀರಿ. ಹೊಸ ಹೊಸ ಆಲೋಚನೆ ಮಾಡುತ್ತಾ ಇದ್ದೀರಿ. ಅಷ್ಟೆಲ್ಲದೆ ಭೂಮಿಗೆ ಸಂಬಂಧಪಟ್ಟ ವಿಷಯದಲ್ಲಿ ವಿಶೇಷವಾದ ಯೋಚನೆ ಇದೆ. ನಿಮ್ಮ ನಿವೇಶನವನ್ನು ಮಾರ ಬೇಕೆಂಬುದು ಬಹಳ ದಿವಸದ ಕನಸಾಗಿದೆ, ಆ ಕನಸು ಈಗ ನೆರವೇರುತ್ತದೆ.

ಈಗ ನೆರವೇರುವಂತೆ ಆಗಿದೆ ಇನ್ನು ವ್ಯವಹಾರ ಕ್ಷೇತ್ರದ ಬಗ್ಗೆ ಯೋಚನೆ ಮಾಡಿದರೆ ಅದು ಈ ತಿಂಗಳು ನಿಮಗೆ ಬಹಳ ಸೂಕ್ತವಾಗಿ ಒಲಿಯುತ್ತದೆ. ಇತ್ತೀಚೆಗೆ ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಿದ್ದರೆ, ಕೆಲವು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಈ ಸಮಯದಲ್ಲಿ ಹೊಸ ಸದಸ್ಯರು ನಿಮ್ಮ ಮನೆಗೆ ಪ್ರವೇಶಿಸಬಹುದು, ವಿಶೇಷವಾಗಿ ವಿವಾಹಿತರಿಗೆ ಈ ಸಮಯವು ತುಂಬಾ ಒಳ್ಳೆಯದು. ಪ್ರೀತಿಯ ವಿಷಯದಲ್ಲಿ ನೀವು ಸ್ವಲ್ಪ ನಿರಾಶೆಯನ್ನು ಪಡೆಯಬಹುದು. ಪಾಲುದಾರರೊಂದಿಗೆ ಸಮನ್ವಯವು ಹದಗೆಡಬಹುದು. ನೀವು ಅನಗತ್ಯವಾಗಿ ಅನುಮಾನಿಸುವುದನ್ನು ತಪ್ಪಿಸಬೇಕು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ನೀವು ಯಾವುದೇ ಹಳೆಯ ರೋಗವನ್ನು ತೊಡೆದುಹಾಕಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now