ಟಿವಿ ಆನ್ ಮಾಡಿದರೆ, ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡಿದರೆ ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಅಭಾವದ (Bangalore Water Problem) ಬಗ್ಗೆ ಅಲ್ಲಿನ ಜನರ ನೀರಿನ ಹಾಹಾಕಾರದ ವಿಡಿಯೋಗಳು ಹರಿದು ಬರುತ್ತಿವೆ. ಸದ್ಯಕ್ಕೆ ಬೆಂಗಳೂರಿನ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ, ಹನಿ ನೀರಿಗೂ ಕೂಡ ಗಂಟೆಗಟ್ಟಲೆ ಕಾದು ಕೂರಬೇಕಾದ ಪರಿಸ್ಥಿತಿ ಎದುರಾಗಿದ್ದು ಕುಡಿಯುವ ನೀರಿಗೆ ಮನೆ ಬಳಕೆಯ ನೀರಿಗೆ ಕೊರತೆ ಅನುಭವಿಸುತ್ತಿರುವ ಬೆಂಗಳೂರಿಗರು BBMP ಮತ್ತು ಸರ್ಕಾರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ.
ಬ್ರಾಂಡ್ ಬೆಂಗಳೂರಿನ ಕನಸು ಒಂದು ಕಡೆಯಾದರೆ, ಇದೇ ಬೆಂಗಳೂರಿನಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಾಗಿ ಮೊದಲ ಆದ್ಯತೆ ಆಗಿರುವ ನೀರಿಗೆ ಇಂತಹ ಅಭಾವ ಸೃಷ್ಟಿಯಾಗಿರುವುದು ಸರ್ಕಾರಕ್ಕೂ ತಲೆ ನೋವಾಗಿದೆ ಹಾಗಾಗಿ ಬೆಂಗಳೂರಿಗೆ ಸರ್ಕಾರದ ಕಡೆಯಿಂದ ಕಡಕ್ ಆದೇಶ (New Rule for Bengalurians) ರವಾನಿಯಾಗಿದೆ.
ಬೆಂಗಳೂರಿನ ಮೂಲ ನಿವಾಸಿಗಳು ಸೇರಿದಂತೆನಗರಕ್ಕೆ ಪ್ರತಿನಿತ್ಯ ಬಂದು ಹೋಗುವವರನ್ನು ಸೇರಿಸಿ ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷ ಎಂದು ಅಂದಾಜಿಸಲಾಗಿದೆ. ಇಷ್ಟು ಜನರಿಗೆ ಕುಡಿಯುವ ನೀರಿನ ಸರಿಯಾದ ಪೂರೈಕೆ ಹಾಗೂ ದಿನ ಬಳಕೆಗಾಗಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಈ ಸುದ್ದಿ ಓದಿ:- SSLC ಆದವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಗ್ರೂಪ್ ಡಿ ಹುದ್ದೆಗಳು ಅರ್ಜಿ ಆಹ್ವಾನ.! ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!
ಆದರೆ ದಿನೇ ದಿನೇ ಬೆಂಗಳೂರಿನ ತಾಪ ಹೆಚ್ಚಾಗುತ್ತಿದ್ದು ಮಳೆ ಕೊರತೆ ಕಾರಣದಿಂದಲೂ ಕೂಡ ಅಂತರ್ಜಲ ಕುಸಿದಿದೆ. ತಿಂಗಳ ಹಿಂದೆಯೇ ಬೆಂಗಳೂರಿನಲ್ಲಿ ಈ ರೀತಿ ಕೆಲ ಏರಿಯಾಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಾದರೂ ಈಗ ಬಹುತೇಕ ಎಲ್ಲಾ ಏರಿಯಗಳ ಪರಿಸ್ಥಿತಿ ಹೀಗೆಯೇ ಇದ್ದು ಸಮಸ್ಯೆ ತಾರಕಕ್ಕೇರಿ ಆಡಳಿತ ಪಕ್ಷಗಳಿಗೂ ಕೂಡ ತಲೆ ನೋವಾಗಿ ಪರಿಣಮಿಸಿದೆ.
ಸದ್ಯಕ್ಕೆ ಇರುವ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸರ್ಕಾರ ಬೆಂಗಳೂರಿಗರಿಗೆ ನೀರು ಪೋಲು ಮಾಡಿದಂತೆ ಮನವಿ ಸಲ್ಲಿಸಿ ಅನಗತ್ಯ ನೀರಿನ ಖರ್ಚು ಮಾಡುವವರಿಗೆ ರೂ.5000 ದಂಡ (fine to Water Loss) ವಿಧಿಸುವುದಾಗಿ ಎಚ್ಚರಿಸಿದೆ.
ಬೆಂಗಳೂರು ನಗರದಲ್ಲಿ ನೀರು ಪೋಲಾಗುವುದನ್ನು ತಡೆಯುವುದು ಅನಿವಾರ್ಯ ಎನ್ನುವುದನ್ನು ಮನಗಂಡಿರುವ ಸರ್ಕಾರವು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಬೆಂಗಳೂರು ನಗರದ ಜನರು ಬೇಕಾಬಿಟ್ಟಿ ನೀರು ಪೋಲು ಮಾಡಬಾರದು ವಾಹನಗಳ ಸ್ವಚ್ಛತೆ, ತೋಟಗಾರಿಕೆ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ.
ಈ ಸುದ್ದಿ ಓದಿ:-ಕೇವಲ 20 ರೂಪಾಯಿ ಕಟ್ಟಿ ಸಾಕು, 2 ಲಕ್ಷದವರೆಗೆ ವಿಮೆ ಸಿಗುತ್ತದೆ, ಕೇಂದ್ರ ಸರ್ಕಾರದಿಂದ ಬಡವರಿಗಾಗಿ ಯೋಜನೆ, ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಯೋಜನೆ ಇಂದೇ ಮಾಡಿಸಿ.!
ಕಾರಂಜಿಗಳಿಗೆ ನೀರು ಬಳಸಿ ನೀರನ್ನು ವ್ಯರ್ಥ ಮಾಡಬಾರದು ಎಂದು ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಈ ಮಹತ್ವದ ಆದೇಶವನ್ನು ಒಂದು ವೇಳೆ ಉಲ್ಲಂಘಿದ್ದು ಕಂಡುಬಂದಲ್ಲಿ ಅವರಿಗೆ ರೂ.5,000 ದಂಡ ವಿಧಿಸುವುದಾಗಿ ಕೂಡ ತಿಳಿಸಿದೆ.
ಬೆಂಗಳೂರು ಜಲ ಮಂಡಳಿಯು (BWSSB) ಈ ಆದೇಶವನ್ನು ಹೊರಡಿಸಿದ್ದು ನಿಯಮವನ್ನು ಉಲ್ಲಂಘನೆ ಮಾಡಿದರೆ ಅಂತಹ ನಾಗರಿಕರ ವಿರುದ್ಧ ಜಲ ಮಂಡಳಿ ಕಾಯ್ದೆ 1964ರ ಸೆಕ್ಷನ್ 109 ರ ಪ್ರಕಾರ ಮೊದಲ ಬಾರಿಗೆ ಈ ರೀತಿ ನಿಯಮ ಉಲ್ಲಂಘನೆ ಮಾಡಿದವರಿಗೆ ರೂ.5000 ದಂಡ ಮತ್ತು ಪದೇ ಪದೇ ಈ ರೀತಿ ನಿಯಮ ಮೀರಿ ನಡೆಯುತ್ತಲೇ ಇದ್ದರೆ.
5,000ರೂ. ದಂಡವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ದಿನಕ್ಕೆ 500 ರೂಪಾಯಿಯಂತೆ, ದಂಡ ಕಟ್ಟಿಸಲಾಗುತ್ತದೆ ಬೆಂಗಳೂರಿನ ಜನರು ಮಿತವಾಗಿ ನೀರಿನ ಬಳಕೆ ಮಾಡಬೇಕು ಎಂದು ಈ ಮೂಲಕ ಜಲ ಮಂಡಳಿಯು ತಿಳಿಸಿದೆ. ಹೀಗಾಗಿ ನೀವೇನಾದರೂ ಬೆಂಗಳೂರಿನಲ್ಲಿ ಇನ್ನು ಮುಂದೆ ಮನೆ ಮುಂದೆ ಬೈಕ್ ಕಾರ್ ವಾಶ್ ಮಾಡುವುದಾದರೆ ಈ ನಿಯಮ ನೆನಪಿನಲ್ಲಿ ಇರಲಿ.