ಪಿತೃಗಳಿಗೆ ನೀವು ಪೂಜೆ ಮಾಡಿಲ್ಲ ಅಂದ್ರೆ ಪಿತೃ ದೋಷ ಬರುತ್ತದೆ ಪಿತೃಪಕ್ಷದಲ್ಲಿ ಈ ಮೂರು ವಸ್ತುಗಳನ್ನು ದಾನ ಮಾಡಿ.

ತಂದೆ ತಾಯಿಯರು ಬದುಕಿದ್ದಾಗ ಅವರ ಮಾತನ್ನು ಚಾಚು ತಪ್ಪದೇ ಕೇಳಬೇಕು ಅವರು ಕೊಡುವಂತಹ ಮಾರ್ಗದಲ್ಲಿ ನಾವು ನಡೆಯಬೇಕು. ಯಾವ ತಂದೆ ತಾಯಿಯರು ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಆದ್ದರಿಂದ ತಂದೆ ತಾಯಿಯ ಮಾತನ್ನು ಕೇಳಬೇಕು ಪುತ್ರ ಎಂಬ ಅರ್ಹತೆಯನ್ನು ಪಡೆಯಬೇಕಾದರೆ ಇದು ಮೊದಲನೆಯ ಅರ್ಹತೆಯಾಗಿದೆ. ತಂದೆ ತಾಯಿಯರು ಗತಿಸಿದ ನಂತರ ಪರಮಾತ್ಮನಲ್ಲಿ ಲೀನವಾಗುತ್ತಾರೆ, ಪ್ರತಿಯೊಂದು ಅಂಗಾಂಗಗಳಲ್ಲಿಯು ಸಹ ಒಂದೊಂದು ದೇವರು ಇರುತ್ತಾರೆ. ಜನಾಂಗದಲ್ಲಿ ಬ್ರಹ್ಮನಿರುತ್ತಾನೆ, ಪಾದದಲ್ಲಿ ವಿಷ್ಣು ಇರುತ್ತಾನೆ, ಕೈಗಳಲ್ಲಿ ಈಶ್ವರ ಇರುತ್ತಾನೆ ಹೀಗೆ ನಮ್ಮ ದೇಹದ ಪ್ರತಿಯೊಂದು ಅಂಗಗಳಲ್ಲಿಯೂ ಸಹ ಒಂದೊಂದು ದೇವರು ನೆಲೆಸಿರುತ್ತಾರೆ.

WhatsApp Group Join Now
Telegram Group Join Now

ಅಂದರೆ ನಾವು ಒಂದೊಂದು ಅಂಗಗಳನ್ನು ಸಹ ಒಂದೊಂದು ದೇವರಲ್ಲಿ ಪಡೆದುಕೊಂಡು ಬಂದಿರುತ್ತೇವೆ ಆದ್ದರಿಂದ ಯಾರಿಂದ ನಾವು ನಮ್ಮ ದೇಹವನ್ನು ಪಡೆದುಕೊಂಡು ಬಂದಿರುತ್ತೇವೋ ಮತ್ತೆ ಅವರಿಗೆ ಸಮರ್ಪಣೆ ಮಾಡುವಂತಹದ್ದೇ ಮ’ರ’ಣ. ನಮ್ಮ ಶರೀರಕ್ಕೆ ಸಾ’ವಿ’ದೆ ಆದರೆ ನಮ್ಮ ಆತ್ಮಕ್ಕೆ ಮ’ರ’ಣ ಇರುವುದಿಲ್ಲ ಸ’ತ್ತ ಮೇಲೆ ಪುನರ್ಜನ್ಮ ಇರಬಾರದು ಪರಮಾತ್ಮನಲ್ಲಿ ಆತ್ಮ ಲೀನವಾಗಬೇಕು ಅದನ್ನು ಮೋ’ಕ್ಷ ಎಂದು ಹೇಳುತ್ತೇವೆ. ಆದ್ದರಿಂದ ನಾವು ತಂದೆ ತಾಯಿ ಬದುಕಿದ್ದಾಗ ಅವರ ಮಾತನ್ನು ಕೇಳಬೇಕು ಹಾಗೆಯೇ ತಂದೆ ತಾಯಿ ಗತಿಸಿದ ನಂತರ ಅವರ ಹೆಸರಿನಲ್ಲಿ ನಾವು ನಾಲ್ಕು ಜನರಿಗೆ ಊಟ ಹಾಕಬೇಕು ಅವರು ಸ’ತ್ತ ಮೇಲೆ ಅವರ ಆತ್ಮ ನಮ್ಮನ್ನು ನೋಡುತ್ತದೆ ನಾನು ಬದುಕಿದ್ದಾಗ ನನ್ನ ಶಕ್ತಿ ಅನುಸಾರ ಅವರಿಗೆ ಇಷ್ಟೆಲ್ಲ ಮಾಡಿದೆ ನನಗಾಗಿ ಸ’ತ್ತ ಮೇಲೆ ನನ್ನ ಹೆಸರಿನಲ್ಲಿ ನಾಲ್ಕು ಜನರಿಗೆ ಊಟ ಹಾಕುತ್ತಾರಾ ಎಂದು ನೋಡುತ್ತಾ ಇರುತ್ತದೆ.

ಆದ್ದರಿಂದ ಅವರ ಆತ್ಮತೃಪ್ತಿಗಾಗಿ ನೀವು ತಂದೆ ತಾಯಿಯರು ಸ’ತ್ತ ನಂತರ ಊಟವನ್ನು ಹಾಕಬೇಕು. ಮೂರನೆಯದು ನೀವು ಗಯಾ ಶ್ರಾದ್ಧವನ್ನ ಮಾಡಬೇಕು ಈ ಮೂರನ್ನು ಮಾಡಿದರೆ ಮಾತ್ರ ಅವರಿಗೆ ಪುತ್ರ ಸ್ಥಾನ ಸಿಗುತ್ತದೆ. ಗುಯಾ ಎಂಬ ಜಾಗದಲ್ಲಿ ಹೋಗಿ ಗಯಾ ಶ್ರದ್ಧಾ ಮಾಡಿ ಪೂಜೆ ಮಾಡಿದರೆ ಆವರ ತಂದೆ ತಾಯಿಯರಿಗೆ ಹಾಗು ಅವರ ಹಿರಿಯರಿಗೆ ಮೋಕ್ಷ ಎಂಬುದು ದೊರೆಯುತ್ತದೆ. ಸಾಕಷ್ಟು ಜನರು ಗಯಾ ಎಂಬ ಸ್ಥಳದಲ್ಲಿ ದರ್ಪಣಗಳು, ದಾನಗಳು, ಶ್ರಾದ್ಧಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಪುತ್ರನ ಒಂದು ಸ್ಥಾನ ಸಿಗಬೇಕಾದರೆ ಈ ಮೂರನ್ನು ಮಾಡಬೇಕು. ಪಿತೃ ಪಕ್ಷದಲ್ಲಿ ಪಿಂಡಪ್ರದಾನ ಇಡಬೇಕು ತಿಲತರ್ಪಣವನ್ನು ಕೊಡುವಂತಹವರು ಕೊಡಬಹುದು ಯಾರಿಗೂ ಬೇಕಾದರೂ ತಿಲತರ್ಪಣವನ್ನು ಕೊಡಬಹುದು.

ನಿಮ್ಮ ಸ್ನೇಹಿತರಿಗೆ, ನೀವು ಸಾಕಿದ ನಾಯಿಗೆ, ವಿದ್ಯೆ ಹೇಳಿಕೊಟ್ಟವರಿಗೆ, ತಂದೆ, ತಾಯಿ ಯಾರಿಗೆ ಬೇಕಾದರೂ ತಿಲತರ್ಪಣವನ್ನು ಕೊಡಬಹುದು ತಿಲತರ್ಪಣಕ್ಕೆ ಯಾವುದೇ ರೀತಿಯಾದಂತಹ ಚೌಕಟ್ಟು ಇರುವುದಿಲ್ಲ. ಹಾಗೆಯೇ ದಾನವನ್ನು ಮಾಡಬೇಕು, ದಾನಗಳಲ್ಲಿ ತುಂಬಾ ವಿಶೇಷವಾದ ದಾನಗಳು ಎಂದರೆ ಗೋ ಧಾನ, ಭೂದಾನ, ಕನ್ಯಾದಾನ ಈ ಮೂರು ದಾನಗಳು ಸಹ ತುಂಬಾ ವಿಶೇಷ. ನೀವು ಎಳ್ಳನ್ನು ದಾನ ಮಾಡಬಹುದು ಹಾಗೆ ಚಿನ್ನ, ತುಪ್ಪ, ವಸ್ತ್ರ, ಧಾನ್ಯ, ಬೆಲ್ಲ, ಬೆಳ್ಳಿ, ಉಪ್ಪು ಈ ಹತ್ತು ದಾನಗಳಲ್ಲಿ ನಿಮಗೆ ಯಾವುದು ಅನುಕೂಲ ಎನಿಸುತ್ತದೆಯೋ ಅಂತಹದ್ದನ್ನು ನೀವು ದಾನ ಮಾಡಬಹುದು. ಈ ರೀತಿಯಾಗಿ ನೀವು ಪಿತೃ ಪಕ್ಷದಲ್ಲಿ ದಾನ ಮಾಡಿದ್ದೆ ಆದಲ್ಲಿ ನಿಮ್ಮ ಪಿತೃಗಳಿಗೆ ಮೋಕ್ಷ ದೊರೆಯುತ್ತದೆ. ಯಾರಿಗೆ ಅವಶ್ಯಕತೆ ಇದೆಯೋ ಅಂತಹವರಿಗೆ ದಾನ ಮಾಡಿದರೆ ತುಂಬಾ ಒಳ್ಳೆಯದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now