ಸಿಕ್ಕ ಸಿಕ್ಕ ಕಡೆ ಲೋನ್ ಪಡೆಯುತ್ತಿದ್ದೀರಾ.? ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಳ್ಳಿ.!

ಅವಶ್ಯಕತೆಗೆ ತಕ್ಷಣ ಹಣ ಬೇಕು ಎಂದರೆ ಮೊದಲು ನೆನಪಾಗುವುದು ಸ್ನೇಹಿತರು ಹಾಗೂ ಸಂಬಂಧಿಕರು ಆದರೆ ಅವರ ಬಳಿಯೂ ಕೂಡ ಹಣ ಇರುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ ಮತ್ತು ಇಷ್ಟು ಆತ್ಮೀಯರ ಬಳಿ ಸಾಲ (loan) ಕೇಳುವುದಕ್ಕೆ ನಮಗೂ ಕೂಡ ಮುಜುಗರ ಆಗುತ್ತದೆ.

WhatsApp Group Join Now
Telegram Group Join Now

ಆಗ ಈಜಿಯಾಗಿ ಹೆಚ್ಚು ಬಡ್ಡಿ ಡಿಮ್ಯಾಂಡ್ ಮಾಡುವ ಲೇವಾದೇವಿಗಳ ಬಳಿ ಸಿಲುಕಿಕೊಂಡು ಬಿಡುತ್ತೇವೆ ಒಮ್ಮೆ ಇವರ ಸಾಲದ ಸುಳಿಗೆ ಸಿಕ್ಕಿ ಬಿದ್ದರೆ ಇದರಿಂದ ಹೊರಬರಲು ಬಹಳ ಸಮಯ ಬೇಕಾಗುತ್ತದೆ. ಆದರೆ ಈ ರೀತಿ ಆಗಬಾರದು ಎಂದರೆ ಈಗ ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸುಲಭವಾಗಿ ಬಹಳ ಬೇಗ ಸಾಲ ಸಿಗುತ್ತಿವೆ.

ಅದರಲ್ಲೂ ಬ್ಯಾಂಕ್ ಗಳಿಗಿಂತ NBFC ಗಳಲ್ಲಿ ಈಗಿನ ಕಾಲದಲ್ಲಿ ತಕ್ಷಣಕ್ಕೆ 24 ಗಂಟೆ ಒಳಗೆ ದಾಖಲೆ ಇದ್ದರೆ ಸಾಲ ಸಿಗುವುದರ ಜೊತೆಗೆ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಇವರು ನಿಮಗೆ ಸ್ಪಂದಿಸಲು ರೆಡಿ ಇರುತ್ತಾರೆ. ಈ ಅವಕಾಶಗಳನ್ನು ಬಳಸಿಕೊಳ್ಳುವುದು ಉತ್ತಮ ಇದರ ಕುರಿತು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ.

ಈ ಸುದ್ದಿ ಓದಿ:- ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?

NBFC ಗಳು ಲೆಂಡಿಂಗ್ ಆಪ್ ಗಳ (lending App) ಮೂಲಕ ಸಾಲ ನೀಡುತ್ತವೆ. ಇದು ಪೂರ್ತಿ ಆನ್ಲೈನ್ ಮೂಲಕ ನಡೆಯುವ ವ್ಯವಹಾರವಾಗಿದ್ದು ಡಿಜಿಟಲ್ ರೂಪದಲ್ಲಿ ನಿಮ್ಮ ದಾಖಲೆಗಳನ್ನು ನೋಡಿ ಡಿಜಿಟಲ್ ರೂಪದಲ್ಲಿಯೇ ನಿಮ್ಮ ಜೊತೆ ಮಾತುಕತೆ ನಡೆಸಿ ಹಣ ಕೂಡ ನೀಡಿ ಸಹಾಯ ಮಾಡುತ್ತಾರೆ.

ಆದರೆ ಈಗಿನ ಕಾಲದಲ್ಲಿ ಆನ್ಲೈನ್ನಲ್ಲಿ ಸಾಲ ನೀಡುವ ರೀತಿ ಹೇಳಿಕೊಂಡು ವಂಚನೆ ಮಾಡುವವರ ಮತ್ತು ಸಾಲ ಕೊಟ್ಟು ಹೆಚ್ಚಿನ ಬಡ್ಡಿ ತೆಗೆದುಕೊಳ್ಳುವ ಅಥವಾ ತಕ್ಷಣವೇ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿ ಹಿಂ’ಸೆ ಕೊಡುವವರು ಇದ್ದಾರೆ ಎನ್ನುವ ಮಾತುಗಳು ಕೂಡ ಇವೆ.

ಆದರೆ ನೀವು RBI ನಿಂದ ರೆಕಗ್ನೈಸ್ ಆಗಿರುವ ಎಂದು NBFC ಗಳನ್ನು ಆರಿಸಿಕೊಳ್ಳುವುದಾದರೆ ಇಂತಹ ಯಾವುದೇ ರಿಸ್ಕ್ ಇಲ್ಲದೆ ನಿಮ್ಮ ಕಷ್ಟಕ್ಕೆ ಸುಲಭವಾಗಿ ಹಣವನ್ನು ಪಡೆಯಬಹುದು. ನೀವು ಯಾವುದೇ ಆಪ್ ಡೌನ್ಲೋಡ್ ಮಾಡಿ ಕೊಳ್ಳುವಾಗ ಅಥವಾ ವೆಬ್ಸೈಟ್ ಗಳನ್ನು ಭೇಟಿ ಕೊಡುವಾಗ ಅದರ ಗೈಡ್ಲೈನ್ ಗಳು ಅಥವಾ ಇನ್ನಿತರ ವಿಷಯಗಳನ್ನು ಸರಿಯಾಗಿ ಓದಿ.

ಈ ಸುದ್ದಿ ಓದಿ:-2024 ರ ಮತದಾರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯೇ ಇಲ್ಲವೇ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ ಒಂದ್ವೇಳೆ ಇಲ್ಲದಿದ್ರೆ ಈ ರೀತಿ ಮಾಡಿ.!

ಆಗ ಇದು RBI ನಿಯಮಗಳಿಗೆ ಒಳಪಟ್ಟಿದೆಯೋ ಇಲ್ಲವೋ ಎನ್ನುವ ವಿಚಾರ ನಿಮ್ಮ ಅರಿವಿಗೆ ಬರುತ್ತದೆ ನಂತರ ಸರಿಯಾದ ವಿಧಾನದಲ್ಲಿ ಮುಂದುವರಿಯಬೇಕು. ಯಾವುದೇ ಕಾಗದ ವ್ಯವಹಾರ ಇಲ್ಲದೇ ಆನ್ಲೈನಲ್ಲಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ನಿಮ್ಮ ಸ್ಯಾಲರಿ ಸ್ಲಿಪ್ ದಾಖಲೆ ನೀಡಬಹುದು ಸರ್ಕಾರ ನಡುವಿನ ಇವುಗಳನ್ನು ವೇರಿಫೈ ಮಾಡುವುದು ಕೂಡ ಸುಲಭ ಇ-ಕೆವೈಸಿ (e-KYC) ಆಗಿದ್ದರೆ ಇನ್ನೂ ಅನುಕೂಲ.

ಒಟ್ಟಾರೆಯಾಗಿ ಮೊಬೈಲ್ ಮತ್ತು ಇಂಟರ್ನೆಟ್ ಕನೆಕ್ಷನ್ ಇದ್ದರೆ ಸಾಕು ನೀವು ಉದ್ಯೋಗಸ್ಥರ ಅಥವಾ ಉದ್ಯಮದಾರರ ಎನ್ನುವ ಆಧಾರದ ಮೇಲೆ ಸಾಲದ ಮೊತ್ತ ನಿರ್ಧಾರ ಆಗುತ್ತದೆ. ಸರಿಯಾದ ಸಮಯಕ್ಕೆ ಸಾಲ ಮತ್ತು ವಂತಿಕೆಗಳನ್ನು ತೀರಿಸುವವರಿಗೆ ರಿವಾರ್ಡ್ ಗಳು ಮತ್ತು ವಿಳಂಭ ಮಾಡುವವರಿಗೆ ಫೈನ್ ಖಂಡಿತ ಇರುತ್ತದೆ.

ಆದರೆ ಪ್ರಾಮಾಣಿಕ ಕಾರಣಗಳಿಂದಾಗಿ ವಿಳಂಬ ಆಗಿದ್ದರೆ ನಂತರ ಅದನ್ನು ಸರಿಪಡಿಸಿಕೊಂಡರೆ ಆ ಪಟ್ಟಿಯಿಂದ ಇವರನ್ನು ಕೈ ಬಿಡುವ ಅನುಕೂಲತೆ ಕೂಡ ಮಾಡಿಕೊಡುತ್ತಾರೆ. ರಿಮೈಂಡರ್ಗಳ ಮೂಲಕ ಆಪ್ ನೋಟಿಫಿಕೇಶನ್ ಮೂಲಕ ದಿನಾಂಕಗಳನ್ನು ನೆನಪು ಮಾಡಲಾಗುತ್ತದೆ ಮತ್ತು ನಿಗದಿತ ದಿನಾಂಕದಂದು ನಿಮ್ಮ ಖಾತೆಯಿಂದ ಆಟೋ ಡೆಬಿಟ್ (Auto Debit) ಆಗಿ ಸಾಲ ಜಮೆಯಾಗುತ್ತಿರುತ್ತದೆ.

ಈ ಸುದ್ದಿ ಓದಿ:-ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

ಒಮ್ಮೆ ಸಾಲ ಪಡೆದರೆ ಸರಿಯಾದ ಸಮಯಕ್ಕೆ ಹಿಂತಿರುಗಿಸಿದರೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಾಗುತ್ತದೆ. ಹೀಗೆ ಯಾವ ದಿನ ಯಾವುದೇ ಸಮಯದಲ್ಲಿ ಬೇಕಾದರೂ ಆನ್ಲೈನ್ನಲ್ಲಿ ನೀವು ಸಾಲ ಪಡೆದುಕೊಳ್ಳಬಹುದು. ನಿಮ್ಮ ಹತ್ತಿರದವರನ್ನು ಕೇಳುವುದಕ್ಕಿಂತ ಮುಕ್ತವಾಗಿ ಇಲ್ಲಿ ನಿಮ್ಮ ವ್ಯವಹಾರ ನಡೆಯುತ್ತದೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now