ನಾವು ಆಟ ಆಡುವಾಗ ಅಥವಾ ಮನೆಯಲ್ಲಿ ಪೆಟ್ರೋಲ್ ರೇಟ್ ಬಗ್ಗೆ ಮಾತನಾಡುವಾಗ ಪೆಟ್ರೋಲ್ ಮತ್ತು ನೀರಿಗೆ ಹೋಲಿಕೆ ಮಾಡಿರಬಹುದು. ನೀರಿನಲ್ಲಿ ಓಡಿಸುವ ಕಾಲ ಬಂದಾಗ ನಿಮಗೆ ಕಾರ್ ಕೊಡಿಸುತ್ತೇನೆ ಎಂದು ನಿಮ್ಮ ಹೆತ್ತವರು ಕಿಂಡಲ್ ಕೂಡ ಮಾಡಿರಬಹುದು ಅಥವಾ ನೀವೇ ನಿಮ್ಮ ಮನೆಯಲ್ಲಿ ಯಾರಾದರೂ ಸಣ್ಣ ಪುಟ್ಟ ಕೆಲಸಕ್ಕೂ ವೆಹಿಕಲ್ ತೆಗೆದುಕೊಂಡು ಹೋದಾಗ ಗಾಡಿಯನ್ನು ಪೆಟ್ರೋಲ್ ಬದಲು ನೀರಿನಲ್ಲಿ ಓಡುತ್ತದಾ? ಎಂದು ಕ್ಲಾಸ್ ತೆಗೆದುಕೊಂಡಿರಬಹುದು.
ಆದರೆ ಅಶ್ವಿನಿ ದೇವತೆಗಳು ಇದನ್ನು ಕೇಳಿ ಅಸ್ತು ಎಂದು ಬಿಟ್ಟಿದ್ದಾರೆ. ಹೇಗೆಂದರೆ ಇನ್ನು ಮುಂದೆ ನೀರಿನಿಂದ ಕೂಡ ಕಾರ್ ಓಡಿಸಬಹುದು ಅಂತಹದೊಂದು ಟೆಕ್ನಾಲಜಿ ಹೊಂದಿರುವ ಕಾರು ಮಾರುಕಟ್ಟೆಗೆ ಎಂಟ್ರಿ ಕೊಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಟೊಯೋಟಾ ಕಂಪನಿಯ ಅನೌನ್ಸ್ ಮಾಡಿರುವ ಈ ಸುದ್ದಿ ಇಡೀ ಜಗತ್ತಿನ ಆಟೋಮೊಬೈಲ್ಸ್ ಕ್ಷೇತ್ರವನ್ನೇ ಅಲುಗಾಡಿಸಿದೆ ಎಂದು ಹೇಳಲಾಗಿದೆ.
ಇದೇ ಮೊದಲ ಬಾರಿಗೆ ವಾಟರ್ ಚಾಲಿತ ಎಂಜಿನ್ ನ್ನು ಕಂಪನಿ ಅಭಿವೃದ್ಧಿಪಡಿಸಿದ್ದು ಇದು ಸದ್ಯದ ಪರಿಸ್ಥಿತಿಯಲ್ಲಿ ಗೇಮ್ ಚೇಂಜರ್ ರೀತಿ ವರ್ಕ್ ಆಗಲಿದೆ ಎಂದು ಭಾವಿಸಲಾಗಿದೆ. ಈ ಟೊಯೋಟಾ ಕಂಪನಿ ಅಭಿವೃದ್ಧಿ ಪಡಿಸುತ್ತಿರುವ ವಾಟರ್ ಬೇಸ್ಡ್ ಇಂಜಿನ್ ಕಾರ್ ಗೆ ಯಾವುದೇ ಇಂಧನ ಬೇಕಾಗಿಲ್ಲ.
ಈ ಸುದ್ದಿ ಓದಿ:-ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!
ಬರೀ ನೀರಿನಿಂದಲೇ ಇದು ರನ್ ಆಗಲಿದೆ. ಇದನ್ನು ಕೇಳುವುದೇ ಬಹಳ ಥ್ರಿಲ್ ಕೊಡುತ್ತಿದೆ. ಯಾಕೆಂದರೆ ವಾಟರ್ ಇಂಜಿನ್ ಪ್ರಯೋಗ 100% ಸಕ್ಸಸ್ ಆಗಿಬಿಟ್ಟರೆ ಪೆಟ್ರೋಲ್ ಪಂಪ್ ಗಳಲ್ಲಿ ಪೈಪ್ ನಿಂದ ಪೆಟ್ರೋಲ್ ಹಾಕಿಸುವ ಬದಲು ಒಂದು ವಾಟರ್ ಕ್ಯಾನ್ ನಲ್ಲಿ ನೀರು ತುಂಬಿ ಹಾಕುವ ರೀತಿ ಆಗಿಬಿಟ್ಟರೆ ಬದುಕು ಎಷ್ಟು ಹಗುರ ಅಲ್ಲವೇ?
ಇಂಜಿನ್ ಎಂದರೆ ನಾವು ಹಾಕುವ ಇಂಧನವನ್ನು ಎನರ್ಜಿ ಆಗಿ ಕನ್ವರ್ಟ್ ಮಾಡುವ ಒಂದು ಸಾಧನವಾಗಿದೆ. ಪೆಟ್ರೋಲ್ ಚಾಲಿತ ಕಾರ್ ಗಳಲ್ಲಿ ಇದೇ ಇಂಜಿನ್ ಪೆಟ್ರೋಲ್ ನ್ನು ದಹನ ಶಕ್ತಿಯಾಗಿ ಬದಲಾಯಿಸುತ್ತದೆ. ಈ ಪೆಟ್ರೋಲ್ ಇಂಜಿನ್ ತನ್ನ ಕಾರ್ಯ ತತ್ವದ ಪ್ರಕಾರ ಪೆಟ್ರೋಲ್ ತೆಗೆದುಕೊಂಡು ಅದನ್ನು ಎನರ್ಜಿ ಆಗಿ ಕನ್ವರ್ಟ್ ಮಾಡುತ್ತದೆ, ಆ ಶಕ್ತಿ ಇಂದಲೇ ಕಾರ್ ಮುಂದೆ ಹೋಗುತ್ತದೆ.
ಹೀಗೆ ಟೊಯೋಟಾ ಮುಖ್ಯಸ್ಥರು ಹೇಳಿರುವ ಪ್ರಕಾರವಾಗಿ ವಾಟರ್ ಇಂಜಿನ್ ಅಭಿವೃದ್ಧಿಪಡಿಸಿದರೆ ಮತ್ತು ಅವರ ಕಾನ್ಫಿಡೆನ್ಸ್ ಪ್ರಕಾರವಾಗಿ ಶೀಘ್ರದಲ್ಲಿ ಇದು ನಮ್ಮ ಬಳಕೆಗೂ ಸಿಕ್ಕಿದರೆ ಉಚಿತವಾಗಿ ಸಿಗುವ ಈ ನೀರನ್ನು ಯಾವುದೇ ಟೆನ್ಶನ್ ಇಲ್ಲದೆ ಬಳಸಿ ಕಾರಿನಲ್ಲಿ ಊರೆಲ್ಲಾ ಸುತ್ತಬಹುದು. ಕಂಪನಿ ವಿಶ್ವಾಸ ವ್ಯಕ್ತಪಡಿಸಿದ ದಿನದಿಂದಲೂ ಅನೇಕರು ಈಗಾಗಲೇ ಇದರ ಬಗ್ಗೆ ಕನಸು ಕೂಡ ಕಾಣುತ್ತಿದ್ದಾರೆ.
ಈ ಸುದ್ದಿ ಓದಿ:-ಮೀನು ಸಾಕಾಣಿಕೆ ಮಾಡಿ ತಿಂಗಳಿಗೆ 2 ಲಕ್ಷ ಲಾಭ ಪಡೆಯಿರಿ.!
ಹಾಗಾದರೆ ಇದು ಯಾವಾಗ ಕಂಪ್ಲೀಟ್ ಆಗುತ್ತದೆ ಮತ್ತು ಯಾವ ಫಾರ್ಮುಲಾ ಮೇಲೆ ಇದು ವರ್ಕ್ ಆಗುತ್ತದೆ ಒಂದು ವೇಳೆ ಇದು ಸಕ್ಸಸ್ ಆಗಿ ಮಾರಾಟವಾಗುವ ಹಂತಕ್ಕೆ ಬಂದರೆ ಭಾರತದ ಮಾರುಕಟ್ಟೆಯಲ್ಲಿ ಯಾವಾಗಲಿಂದ ಸಿಗುತ್ತದೆ ಮತ್ತು ಇದಕ್ಕೆ ಎಷ್ಟು ವೆಚ್ಚ ತಗುಲಬಹುದು ಇತ್ಯಾದಿ ಎಲ್ಲಾ ವಿಷಯದ ಬಗ್ಗೆಯೂ ಕೂಡ ಮೊದಲು ತಿಳಿದುಕೊಳ್ಳುವುದೇ ಒಳ್ಳೆಯದು.
ಇದರಿಂದ ನಾವು ನಂತರ ನಿರಾಸೆ ಪಡುವುದು ಕೂಡ ತಪ್ಪುತ್ತದೆ. ಹಾಗಾಗಿ ಈ ಬಗ್ಗೆ ನಿಮಗೂ ಆಸಕ್ತಿ ಇದ್ದರೆ ಈ ವಾಟರ್ ಚಾಲಿತ ಎಂಜಿನ್ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.