ಮನೆಯಲ್ಲಿ ಪಾತ್ರೆ ತೊಳೆಯುವುದೇ ಟೆನ್ಷನ್ ಅದನ್ನು ಹೇಗೋ ಕ್ಲೀನ್ ಮಾಡಬಹುದು. ಆದರೆ ದೇವರ ಪಾತ್ರೆಗಳನ್ನು ಕ್ಲೀನ್ ಮಾಡುವುದು ಅಡಿಗೆ ಮನೆ ಪಾತ್ರೆಗಳನ್ನು ಕ್ಲೀನ್ ಮಾಡಿದಷ್ಟು ಸುಲಭದ ಸಲೀಸಾದ ಕೆಲಸ ಅಲ್ಲವೇ ಅಲ್ಲ. ಎಲ್ಲರ ಮನೆಯಲ್ಲೂ ಕೂಡ ದೇವರ ಕೋಣೆಯಲ್ಲಿ ಬೆಳ್ಳಿ ಹಿತ್ತಾಳೆ ಕಂಚು ಮತ್ತು ತಾಮ್ರ ಈ ರೀತಿ ಲೋಕದ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ ಮತ್ತು ಕೆಲವರ ಅಡುಗೆ ಮನೆಯಲ್ಲಿ ಕೂಡ ಮತ್ತು ಅಲಂಕಾರಿಕ ವಸ್ತುವಾಗಿ ಕೂಡ ಇವುಗಳನ್ನು ಬಳಸುತ್ತಿರುತ್ತಾರೆ.
ಹಬ್ಬ ಹರಿದಿನ ಬಂದಾಗ ಮನೆಯ ಕೆಲಸವೇ ಜಾಸ್ತಿ ಇರುತ್ತದೆ ಅಂತಹ ಸಮಯದಲ್ಲಿ ಈ ದೇವರ ಮನೆಯ ಪಾತ್ರೆಗಳು ಮತ್ತು ಈ ರೀತಿ ಲೋಹದ ಪಾತ್ರೆಗಳನ್ನೆಲ್ಲಾ ಶುಚಿಗೊಳಿಸಬೇಕಾದ ಹೊರೆ ಹೆಚ್ಚಾಗುತ್ತದೆ ಇಂತಹ ಸಮಯದಲ್ಲಿ ಮಹಿಳೆಯರಿಗೆ ಆಗುವ ಟೆನ್ಶನ್ ಅಷ್ಟಿಷ್ಟಲ್ಲ. ನಿಮಗೂ ಕೂಡ ಇದೇ ರೀತಿಯಾಗಿ ಲೋಹದ ವಸ್ತುಗಳನ್ನು ಕ್ಲೀನ್ ಮಾಡುವ ಟೆನ್ಷನ್ ಕಾಡುತ್ತಿದ್ದರೆ ಇನ್ನು ಮುಂದೆ ಬೇಜಾರಾಗಬೇಡಿ.
ನೀವು ಉಜ್ಜದೆ ತಿಕ್ಕದೆ ನಿಮ್ಮ ಕೈ ನೋವು ಕೂಡ ಆಗದೇ ಸುಲಭವಾಗಿ 10 ನಿಮಿಷಗಳಲ್ಲಿ ಬರೀ ನೀರಿಗೆ ಹಾಕಿ ಇವುಗಳನ್ನು ಕ್ಲೀನ್ ಮಾಡಬಹುದಾದ ಐಡಿಯಾ ಹೇಳಿಕೊಡುತ್ತಿದ್ದೇವೆ. ಸಿಂಪಲ್ ಆಗಿ ನಿಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ ಸಾಕು.
ಈ ಸುದ್ದಿ ಓದಿ:- ಟೆಂಟ್ ಹೌಸ್ ಮತ್ತು ಸಪ್ಲೈಯರ್ಸ್ ಬಿಸಿನೆಸ್ ಮಾಡಿ, ಯಾವುದೇ ಟೆನ್ಷನ್ ಇಲ್ಲದೆ ದಿನಕ್ಕೆ ರೂ.30,000 ಆದಾಯ ಪಡೆಯಿರಿ.!
* ತಾಮ್ರ ಹಿತ್ತಾಳೆ ಕಂಚಿನ ಪಾತ್ರೆಗಳಾಗಿದ್ದರೆ ಒಂದು ಅಗಲವಾದ ಪಾತ್ರೆ ತೆಗೆದುಕೊಂಡು ಅದರಲ್ಲಿ ಮುಕ್ಕಾಲು ಭಾಗ ನೀರು ತುಂಬಿಸಿ ನಿಮ್ಮ ಮನೆಯಲ್ಲಿ ಪಾತ್ರೆಗಳು ಎಷ್ಟಿದೆ ಎನ್ನುವುದರ ಅಳತೆ ನೋಡಿಕೊಂಡು ಆ ಪ್ರಕಾರವಾಗಿ ಅಂದಾಜಿನಲ್ಲಿ ಒಂದೆರಡು ಚಮಚ ಅಡಿಕೆ ಉಪ್ಪು, ಒಂದೆರಡು ಚಮಚ ಟೇಸ್ಟಿಂಗ್ ಸಾಲ್ಟ್ ಮತ್ತು ಒಂದೆರಡು ಚಮಚ ಹಾಕಿ ವಿಮ್ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದೆಲ್ಲವೂ ಮಿಕ್ಸ್ ಆದರೆ ಮಾತ್ರ ನಿಮಗೆ ನೀವು ಅಂದುಕೊಳ್ಳುವ ರಿಸಲ್ಟ್ ಸಿಗುವುದು. ಈಗ ಇದಕ್ಕೆ ದೇವರ ಮನೆ ಪಾತ್ರೆಗಳನ್ನು ಅರಿಶಿಣ ಕುಂಕುಮ ಆಗಿದ್ದರೆ ಮೊದಲು ನೀರಿನಲ್ಲಿ ಕ್ಲೀನ್ ಮಾಡಿ ಬಳಿಕ ಡಿಪ್ ಮಾಡಿ ಇಡಿ. ಚಿಕ್ಕಪುಟ್ಟವೆಲ್ಲಾ ಮುಳುಗುತ್ತವೆ ದೊಡ್ಡದು ಇದ್ದರೆ ಆಗಾಗ ನೀವು ಚೆಕ್ ಮಾಡಿ ತಿರುಗಿಸಿ ತಿರುಗಿಸಿ ಇಡಬೇಕಾಗುತ್ತದೆ.
10 ನಿಮಿಷಗಳ ಕಾಲ ಹಾಗೆ ಇಟ್ಟು ತೆರೆದು ನೋಡಿ ನಿಮಗೆ ಲೈವ್ ಆಗಿ ರಿಸಲ್ಟ್ ತಿಳಿಯುತ್ತದೆ ಬಳಿಕ ಬರೇ ನೀರಿನಲ್ಲಿ ಇನ್ನೊಮ್ಮೆ ತೊಳೆದು ಇಟ್ಟುಕೊಳ್ಳಬಹುದು. ಒಂದು ವೇಳೆ ನೀವು ಬೆಳ್ಳಿ ಸಾಮಗ್ರಿಗಳನ್ನು ತೊಳೆಯುವುದಾದರೆ ಅದನ್ನು ಕೂಡ ಮೊದಲು ಅರಿಶಿನ ಕುಂಕುಮ ಆಗಿರುವುದನ್ನು ಕ್ಲೀನ್ ಮಾಡಿಕೊಂಡು ಬಳಿಕ ಒಂದು ದೊಡ್ಡ ಪಾತ್ರೆಗೆ ಸ್ವಲ್ಪ ಬೆಚ್ಚಗಿರುವ ನೀರು ತೆಗೆದುಕೊಂಡು ಅದಕ್ಕೆ ಒಂದೆರಡು ಚಮಚ ವಿಮ್ ಜೆಲ್ ಹಾಕಿ ಅರ್ಧ ಲೋಟದಷ್ಟು ವಿನೇಗರ್ ಹಾಗೂ ಒಂದೆರಡು ಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಸುದ್ದಿ ಓದಿ:- ಈ ಚಿಕ್ಕ ಮಿಷಿನ್ ಇದ್ದರೆ ಸಾಕು, ಪ್ರತಿದಿನ ದುಡ್ಡೆದುಡ್ಡು. ತಿಂಗಳಿಗೆ ರೂ.60,000 ಸಂಪಾದನೆ ಮಷೀನ್ ನ ಬೆಲೆ ರೂ.20,000 ಮಾತ್ರ ಸಿಂಪಲ್ ಬಿಜಿನೆಸ್ ಐಡಿಯಾ..!
ಇದರಲ್ಲಿ ಬೆಳ್ಳಿ ಪಾತ್ರೆಗಳು ಡಿಪ್ ಮಾಡಿ ಇಡಿ ಹತ್ತು ನಿಮಿಷಗಳಾದ ನಂತರ ನೀರಿನಿಂದ ತೊಳೆಯಿರಿ. ದೊಡ್ಡ ಪಾತ್ರೆಗಳು ಇದ್ದರೆ ಈ ಸಲ್ಯೂಷನ್ ಪಾತ್ರೆ ಮೇಲೆಲ್ಲಾ ಸ್ಪ್ರೆಡ್ ಮಾಡಿ. ತುಂಬಾ ಡಿಸೈನ್ ಇದ್ದರೆ ಬ್ರಶ್ ಸಹಾಯದಿಂದ ಉಜ್ಜಿ ತೊಳೆಯಿರಿ. ಒಂದು ಸಾಫ್ಟ್ ಬಟ್ಟೆಯಿಂದ ಒರೆಸಿ ಇಡಿ. ಈ ಟ್ರಿಕ್ ಗಳು ಉಪಯುಕ್ತ ಎನಿಸಿದರೆ ನಿಮ್ಮ ಸ್ನೇಹಿತರಿಗೂ ಕೂಡ ಇವುಗಳನ್ನು ಶೇರ್ ಮಾಡಿ.