ದೇಶದಾದ್ಯಂತ ಇರುವ ಎಲ್ಲಾ ಭಾರತ್, ಇಂಡಿಯನ್ ಮತ್ತು HP ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆಲ್ಲಾ ಸರ್ಕಾರದ ಕಡೆಯಿಂದ ಕಳೆದ ವರ್ಷ ಸಬ್ಸಿಡಿ (Gas Cylinder Subsidy) ಕುರಿತಂತೆ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಗತ್ಯ ವಸ್ತುಗಳು ಬೆಲೆ ಏರಿಕೆಯಾಗಿರುವುದು ಬಡ ಹಾಗೂ ಮಾಧ್ಯಮ ವರ್ಗದ ಜನರ ಬದುಕನ್ನು ಬಲು ದುಬಾರಿಗೊಳಿಸಿದೆ.
ದೇಶದ ಜನಸಾಮಾನ್ಯರ ಕಷ್ಟ ಅರಿತ ಕೇಂದ್ರ ಸರ್ಕಾರವು ಗೃಹಿಣಿಯರಿಗೆ ಅಡುಗೆ ಮನೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದಾಗಿ ಕಳೆದ ವರ್ಷ ರಕ್ಷಾಬಂಧನದ ವಿಶೇಷವಾಗಿ ಅಡುಗೆ ಅನಿಲ ಬೆಲೆ ಇಳಿಕೆ ಮಾಡಿ ಉಡುಗೊರೆ ನೀಡಿತ್ತು. ಇದಾದ ಬಡಿತವು ಮಹಿಳಾ ದಿನಾಚರಣೆ ಅಂಗವಾಗಿ ಮತ್ತೊಮ್ಮೆ ಮಹಿಳೆಯರಿಗೆ ಅಡುಗೆ ಅನಿಲದರ ಸಬ್ಸಿಡಿ ಘೋಷಣೆ ಮಾಡಿ ಗಿಫ್ಟ್ ನೀಡಿದೆ.
ಆ ಪ್ರಕಾರವಾಗಿ ಇನ್ನು ಮುಂದೆ ಪ್ರತಿ ಬುಕ್ಕಿಂಗ್ ಮೇಲೆ ರೂ.300 ಸಬ್ಸಿಡಿ ಸಿಗುತ್ತಿದೆ. ಇದಕ್ಕೆ ಯಾರು ಅರ್ಹರು? ಹಣ ಪಡೆಯಲು ಇರುವ ಕಂಡೀಷನ್ ಗಳೇನು? ಇತ್ಯಾದಿ ವಿವರ ಹೀಗಿದೆ ನೋಡಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಬಡ ಹಾಗೂ ಮಧ್ಯಮ ಕುಟುಂಬದ ಹೆಣ್ಣು ಮಕ್ಕಳು ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವಂತೆ ಆಗಬೇಕು.
ಈ ಸುದ್ದಿ ಓದಿ:- ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
ಇದರ ಮೂಲಕ ವಾಯು ಮಾಲಿನ್ಯ ನಿಯಂತ್ರಣವಾಗುವುದರ ಜೊತೆಗೆ ಪರಿಸರ ರಕ್ಷಣೆ ಮತ್ತು ಮಹಿಳೆಯರ ಆರೋಗ್ಯ ರಕ್ಷಣೆಯಾಗಬೇಕು ಎನ್ನುವ ಧ್ಯೇಯ ಇಟ್ಟುಕೊಂಡು 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತಂದರು. ಈ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಉಚಿತವಾಗಿ ತಮ್ಮ ಕುಟುಂಬಕ್ಕೆ ಗ್ಯಾಸ್ ಕನೆಕ್ಷನ್ ಪಡೆಯಬಹುದು.
ಇದರ ಜೊತೆಗೆ ಇನ್ನಷ್ಟು ಪರಿಕರಗಳು ಹಾಗೂ ಆಗಾಗ ಸರ್ಕಾರದ ಕಡೆಯಿಂದ ಸಬ್ಸಿಡಿ ನೆರವು ಕೂಡ ಸಿಗುತ್ತದೆ. ಆ ರೀತಿಯಾಗಿ ಈಗ ಪ್ರಧಾನಮಂತ್ರಿ ಉಜ್ವಲ್ ಯೋಜನೆಯ ಗ್ರಾಹಕರು ಪ್ರತಿ ಬುಕ್ಕಿಂಗ್ ಮೇಲೆ ರೂ.300 ಉಳಿತಾಯ ಮಾಡುತ್ತಿದ್ದಾರೆ. ಈ ಸಬ್ಸಿಡಿ ರೂಪದ ಹಣವು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ.
ಸಬ್ಸಿಡಿ ಹಣ ಪಡೆಯಲು ಕಂಡಿಷನ್ ಗಳು:-
* ಪ್ರಧಾಮಂತ್ರಿ ಉಜ್ವಲ ಯೋಜನೆಯ ಫಲಾನುಭವಿ ಆಗಿರಬೇಕು.
* ಒಂದು ಆರ್ಥಿಕ ವರ್ಷದಲ್ಲಿ ತಿಂಗಳಿಗೆ ಒಂದರಂತೆ 12 ಸಿಲಿಂಡರ್ ಬುಕ್ಕಿಂಗ್ ಮೇಲೆ ಮಾತ್ರ ಈ ಸಬ್ಸಿಡಿ ಹಣವನ್ನು ಪಡೆಯಬಹುದು.
* ಫಲಾನುಭವಿಯು ತನ್ನ ಏಜೆನ್ಸಿಯಲ್ಲಿ ಗ್ಯಾಸ್ ಕನೆಕ್ಷನ್ ಗೆ ಇ-ಕೆವೈಸಿ (e-KYC) ಮಾಡಿಸಬೇಕು. ತನ್ನ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸಿ ಆಕ್ಟಿವ್ ಆಗಿ ಇಟ್ಟುಕೊಂಡಿದ್ದರೆ ಮಾತ್ರ DBT ಮೂಲಕ ಹಣ ವರ್ಗಾವಣೆಯಾಗುವುದು.
* ಕಳೆದ ಹತ್ತು ವರ್ಷಗಳಿಂದ ಆಧಾರ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಅಂತಹ ನಿವಾಸಿಯ ಆಧಾರ್ ಕಾರ್ಡ್ ಸ್ಥಗಿತಗೊಳಿಸುತ್ತದೆ. ಹಾಗಾಗಿ ಉಚಿತವಾಗಿ ಜೂನ್ 14ರವರೆಗೆ ತಮ್ಮ ಯಾವುದೇ ಗುರುತಿನ ಪುರಾವೆ ಅಥವಾ ವಿಳಾಸಪುರವೆ ನೀಡಿ ಅಪ್ಡೇಟ್ ಮಾಡಿಸಬೇಕು ಅಥವಾ ಯಾವುದೇ ತಿದ್ದುಪಡಿ ಇದ್ದರೂ ಪೂರಕ ದಾಖಲೆಗಳನ್ನು ಒದಗಿಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ಕೊಟ್ಟಿದೆ.
ಈ ಸುದ್ದಿ ಓದಿ:- KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!
ನಿಮ್ಮ ಇ-ಕೆವೈಸಿ ದೃಢೀಕರಣ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಕೂಡ ಮುಖ್ಯ ಆಗಿರುವುದರಿಂದ ಒಂದು ವೇಳೆ ಇದನ್ನು ನಿರ್ಲಕ್ಷಿಸಿದ್ದಲ್ಲಿ ಆಧಾರ್ ಸಂಬಂಧಿತವಾಗಿ ಇರುವ ಎಲ್ಲಾ ಸೇವೆಗಳು ಸ್ಥಗಿತಗೊಳಿಸುತ್ತವೆ. ಹಾಗಾಗಿ ತಪ್ಪದೆ ಇದನ್ನು ಪೂರೈಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.