ನಿಂಬೆಹಣ್ಣಿನ ಬಿಸಿನೆಸ್ ಬಗ್ಗೆ ಹಲವು ರೈತರಿಗೆ ಮಾಹಿತಿಯೇ ಇಲ್ಲ. ಕೆಲವರು ಇದನ್ನು ಹೊಸದಾಗಿ ಕೇಳುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಮಾರ್ಕೆಟ್ ನಲ್ಲಿ ಹಲವು ವರ್ಷಗಳಿಂದಲೂ ಬಹಳ ಸಕ್ಸಸ್ ಫುಲ್ ಆಗಿ ಈ ಲೆಮೆನ್ ಗ್ರಾಸ್ ಬಿಜಿನೆಸ್ ರನ್ ಆಗುತ್ತಿದೆ. ರೈತನೇನಾದರೂ ಈ ಬಗ್ಗೆ ಮನಸು ಮಾಡಿದರೆ ವರ್ಷಕ್ಕೆ ಲಕ್ಷಾಂತರ ಆದಾಯ ಕಾಣುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಯಾಕೆಂದರೆ ಈ ಬೆಳೆಯನ್ನು ಬೆಳೆಯುವುದು ಕೂಡ ಸುಲಭ, ನಿರ್ವಹಣೆ ಕೂಡ ಸುಲಭ, ಅದೇ ರೀತಿ ಮಾರ್ಕೆಟಿಂಗ್ ಕೂಡ ಸುಲಭ. ಮಾರ್ಕೆಟಿಂಗ್ ವಿಚಾರವನ್ನೇ ಮಾತನಾಡುವುದಾದರೆ ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಕೂಡ ನೀವು ನಿಂಬೆ ಹುಲ್ಲಿನಿಂದ ಮಾಡಿದ ಪ್ರಾಡಕ್ಟ್ ಗಳನ್ನು ಸೇಲ್ ಮಾಡಬಹುದು.
ನಿಂಬೆಹಣ್ಣಿನಿಂದ ಎಣ್ಣೆ ತೆಗೆಯಲಾಗುತ್ತದೆ, ಈ ಎಣ್ಣೆಗೆ ಲೀಟರ್ ಗೆ ರೂ.2000 ದವರೆಗೆ ಬೆಲೆ ಇದೆ. ಈ ಲೆಮೆನ್ ಗ್ರಾಸ್ ಎಣ್ಣೆಯನ್ನು ಕಾಸ್ಮೆಟಿಕ್ ಗಳಲ್ಲಿ ಮೆಡಿಸನ್ ಗಳಲ್ಲಿ ಮತ್ತು ಎಲ್ಲೆಲ್ಲಿ ನಿಂಬೆ ಫ್ಲೇವರ್ ಗಳನ್ನು ಬಳಸಲಾಗುತ್ತದೆ ಆ ಎಲ್ಲಾ ಪ್ರಾಡಕ್ಟ್ ಗಳಲ್ಲಿ ಕೂಡ ಬಳಸುತ್ತಾರೆ.
ಈ ಸುದ್ದಿ ಓದಿ:-2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!
ಹಾಗಾದರೆ ಈ ಬೆಳೆ ಬೆಳೆಯುವುದು ಹೇಗೆ ಮತ್ತು ಇದರಿಂದ ಎಣ್ಣೆ ತೆಗೆಯುವುದು ಹೇಗೆ ಎನ್ನುವ ವಿಚಾರದ ಬಗ್ಗೆ ಹೇಳುವುದಾದರೆ ಮೊದಲಿಗೆ ರೈತ ಈ ಬೆಳೆಗೆ ಸ್ಪ್ರೌಟ್ಸ್ ಗಳನ್ನು ಖರೀದಿಸಬೇಕು. ಈ ಸ್ಪ್ರೌಟ್ಸ್ ಗಳು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ, ನರ್ಸರಿಗಳು ಅಥವಾ ಈಗಾಗಲೇ ಈ ಬೆಳೆಯಲ್ಲಿ ತೊಡಗಿಕೊಂಡಿರುವ ರೈತನ ರ ಬಳಿ ಸಿಗುತ್ತವೆ. ಸ್ಪ್ರೌಟ್ಸ್ ತಂದು ಬಿತ್ತನೆ ಮಾಡಿ ನೀರು ಕಟ್ಟಿ ಪೈರು ಬಂದರೆ ಸಾಕು ನಿರ್ವಹಣೆಗೆ ಮತ್ತೇನು ಖರ್ಚು ಆಗುವುದಿಲ್ಲ.
ಒಂದು ಎಕರೆಗೆ ರೂ.15,000 ದಷ್ಟು ಬಿತ್ತನೆಗೆ ಹಣ ಖರ್ಚು ಆಗುತ್ತದೆ. ಆದರೆ ಇದರಲ್ಲಿರುವ ಪ್ಲಸ್ ಪಾಯಿಂಟ್ ಏನೆಂದರೆ ಒಮ್ಮೆ ನೀವು ಈ ಗ್ರಾಸ್ ಬಿತ್ತನೆ ಮಾಡಿದರೆ ಐದಾರು ವರ್ಷದವರೆಗೆ ಕಟಾವು ಮಾಡಿ ಬೆಳೆ ತೆಗೆಯಬಹುದು ನೀವು ಗ್ರಾಸ್ ಕಟಾವು ಮಾಡಿದಷ್ಟು ಎರಡು ಮೂರು ತಿಂಗಳಿಗೆ ಮತ್ತೆ ಗ್ರಾಸ್ ಬರುತ್ತದೆ.
ಇನ್ನು ಈ ಗ್ರಾಸ್ ದಿಂದ ಎಣ್ಣೆ ತೆಗೆಯುವುದು ಹೇಗೆಂದರೆ ನೀವು ಹತ್ತಾರು ಎಕರೆಗೆ ಈ ಗ್ರಾಸ್ ಬೆಳೆದಿದ್ದರೆ ಮಾತ್ರ ಎಣ್ಣೆ ತೆಗೆಯುವ ಮಿಷನ್ ಖರೀದಿಸಿ ಇಲ್ಲವಾದರೆ 4-5 ರೈತರು ಒಟ್ಟಿಗೆ ಸೇರಿ ಈ ಮಿಷನ್ ಖರೀದಿಸಿ. ಯಾಕೆಂದರೆ 5-6 ಲಕ್ಷ ಖರ್ಚಾಗುತ್ತದೆ. ಗಾಣದ ರೀತಿಯಲ್ಲಿ ಗ್ರಾಸ್ ಖರೀದಿಸಿ ಎಣ್ಣೆ ಕೊಡುವವರಿದ್ದಾರೆ, ನೀವು ಅಲ್ಲಿಗೆ ಕ್ರಾಸ್ ಕೊಟ್ಟು ಎಣ್ಣೆ ಪಡೆಯಬಹುದು.
ಈ ಸುದ್ದಿ ಓದಿ:-ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
ಒಂದು ಎಕರೆಗೆ ಒಂದು ಟನ್ ಗಿಂತ ಹೆಚ್ಚು ಗ್ರಾಸ್ ಬರುತ್ತದೆ. ಇದರಿಂದ ಗುಣಮಟ್ಟದ ಆಧಾರದ ಮೇಲೆ 10-15 ಲೀಟರ್ ವರೆಗೆ ಎಣ್ಣೆ ಪಡೆಯಬಹುದು. ಇಲ್ಲಿ ಬಿತ್ತನೆ ಮಾತ್ರ ಬಂಡವಾಳವಾಗುತ್ತದೆ ಹೊರತು ಮತ್ ಯಾವುದೇ, ಪೆಸ್ಟಿಸೈಜ್ ಅಥವಾ ಫರ್ಟಿಲೈಜರ್ ಅಥವಾ ಪದೇ ಪದೇ ಬಿತ್ತನೆ ಮಾಡುವ ಟೆನ್ಶನ್ ಇಲ್ಲದೆ.
ವರ್ಷಕ್ಕೆ 4 ಬಾರಿಯಾದರೂ ಬೆಳೆ ತೆಗೆಯಬಹುದಾದ ಕಾರಣದಿಂದಾಗಿ ವಾರ್ಷಿಕವಾಗಿ ಖಂಡಿತ ಲಕ್ಷಗಟ್ಟಲೆ ಆದಾಯ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಮಾಹಿತಿಯನ್ನು ಎಲ್ಲಾ ರೈತರ ಜೊತೆಗೆ ಹಂಚಿಕೊಳ್ಳಿ.