2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!

 

WhatsApp Group Join Now
Telegram Group Join Now

ಕಳೆದ ಒಂದು ದಶಕದ ಹಿಂದೆ ಹೆಣ್ಣು ಮಕ್ಕಳ ಜನನದ ಬಗ್ಗೆ ಬಹಳ ನಿರ್ಲಕ್ಷ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣ ಹ’ತ್ಯೆ ನಿಷೇಧ ಕಾಯ್ದೆಯನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತಂದು ಮತ್ತು ಹೆಣ್ಣು ಮಕ್ಕಳಿಗಾಗಿ ಸರ್ಕಾರದಿಂದ ಅನೇಕ ಯೋಜನೆಗಳನ್ನು ಒದಗಿಸಿ ಈ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.

ಹೆಣ್ಣು ಮಕ್ಕಳ ಪೋಷಣೆಗಾಗಿ ಅವರ ಭವಿಷ್ಯವನ್ನು ಉಜ್ವಲಿಸುವ ದೂರ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡಿವೆ. ಆ ನಿಟ್ಟಿನಲ್ಲಿ 2006ರಲ್ಲಿ ಕರ್ನಾಟಕದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು (C M Yedyurappa) ಹೆಣ್ಣು ಮಕ್ಕಳಿಗಾಗಿ ಪರಿಚಯಿಸಿದ ಭಾಗ್ಯಲಕ್ಷ್ಮಿ ಬಾಂಡ್ (Bhagyalakshmi Bond) ಎನ್ನುವ ವಿಶೇಷ ಯೋಜನೆಯು ಬಹಳ ವಿಶೇಷ.

ಈ ಸುದ್ದಿ ಓದಿ:- BBMP ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 28,950.

ಆ ಸಮಯದಲ್ಲಿ ಇಂತಹ ಬಾಂಡ್ ಗಳನ್ನು ಪಡೆದಿದ್ದ ಹೆಣ್ಣು ಮಕ್ಕಳಿಗೆ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ ಅದರ ಕುರಿತು ಈ ಲೇಖನದಲ್ಲಿ ಮಾಹಿತಿ ಕೊಡುತ್ತಿದ್ದೇವೆ.
ಯೋಜನೆಯ ಹೆಸರು:- ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ

ಯೋಜನೆ ಕುರಿತು ಕೆಲ ವಿಶೇಷ ಮಾಹಿತಿಗಳು:-

* ಈ ಯೋಜನೆಯನ್ನು ಬಡತನಕ್ಕೆ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಮೊದಲ ಎರಡು ಹೆಣ್ಣು ಮಕ್ಕಳು ಪಡೆಯಲು ಅರ್ಹರಾಗಿದ್ದಾರೆ.
* ಹೆಣ್ಣು ಮಕ್ಕಳ ಪೋಷಕರು ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಹೋಗಿ ಪೂರಕ ದಾಖಲೆಗಳನ್ನು ಒದಗಿಸಿ ಯೋಜನೆಗೆ ನೋಂದಾಯಿಸಿಕೊಂಡರೆ ಅವರು ಸರ್ಕಾರಕ್ಕೆ ಮಾಹಿತಿ ಸಲ್ಲಿಸುತ್ತಾರೆ.

ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಯೋಜನೆಯಲ್ಲಿ ಕೇವಲ 500 ಹೂಡಿಕೆ ಮಾಡಿ ಸಾಕು ನಲ್ಲಿ 47 ಲಕ್ಷ ಸಿಗುತ್ತೆ.!

* ದಾಖಲೆಗಳ ಪರಿಶೀಲನೆ ನಡೆದು ಅನುಮೋದನೆಯಾದರೆ ಪ್ರತಿ ಫಲಾನುಭವಿಗೆ ರೂ.10,000 ಹಣವನ್ನು ಫಲಾನುಭವಿ ಹೆಸರಿನಲ್ಲಿ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿಯನ್ನು ಇಡಲಾಗುತ್ತದೆ. ಫಲಾನುಭವಿ 18 ವರ್ಷ ಪೂರೈಸಿದ ಬಳಿಕ ಗರಿಷ್ಠ ಬಡ್ಡಿ ರೂಪದ ಲಾಭದೊಂದಿಗೆ ಪಾಲುದಾರ ಸಂಸ್ಥೆ ಆ ಹೆಣ್ಣು ಮಗುವಿಗೆ ಈ ಹೂಡಿಕೆ ಮೊತ್ತವನ್ನು ಹಿಂತಿರುಗಿಸುತ್ತದೆ.

ಸಿಗುವ ನೆರವು:-

* ಯೋಜನೆ ಆರಂಭವಾದ ಸಮಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ದಂಪತಿಯ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ರೂ.10,000 ಠೇವಣಿ ಇಡಲಾಗುತ್ತಿತ್ತು ಮೆಚುರಿಟಿ ಅವಧಿಯಲ್ಲಿ ರೂ.40,918 ಸಿಗುತ್ತಿತ್ತು.
* ನಂತರ ಇದನ್ನು ಬದಲಾಯಿಸಲಾಯಿತು. ಆ ಪ್ರಕಾರವಾಗಿ 2008 ರ ಆಗಸ್ಟ್ ನಂತರ ಜನಿಸಿದ ಮಗುವಿಗೆ ಠೇವಣಿ ಮೊತ್ತವನ್ನು ರೂ.19,300 ಕ್ಕೆ ಏರಿಸಲಾಗಿದೆ ಮತ್ತು ಎರಡನೇ ಮಗುವಿಗೆ ರೂ.18, 350 ಠೇವಣಿ ನಿಗದಿಪಡಿಸಲಾಗಿದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!

ಈ ಮೂಲಕ ಮೊದಲ ಹೆಣ್ಣು ಮಗುವಿಗೆ 1,00,052 ರೂ. ಎರಡನೇ ಮಗುವಿಗೆ ಒಟ್ಟು 1,00,097 ರೂಪಾಯಿ ಸಿಗಲಿದೆ.
* ಈಗ ವಿಚಾರ ಏನೆಂದರೆ 2006ರಲ್ಲಿ ಈ ಬಾಂಡ್ ಪಡೆದಿದ್ದ ಹೆಣ್ಣು ಮಕ್ಕಳಿಗೆ ಈಗ 18 ವರ್ಷ ಪೂರೈಸುತ್ತಿದ್ದು, ಇವರು ತಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆದು ಸ್ಕೀಮ್ ಅಮೌಂಟ್ ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.

* ಪ್ರಸ್ತುತವಾಗಿ ಈ ಯೋಜನೆಯನ್ನು ಸುಕನ್ಯ ಸಮೃದ್ಧಿ ಯೋಜನೆ (SSY) ಜೊತೆ ಮರ್ಜ್ ಮಾಡಲಾಗಿದೆ ಮತ್ತು ಕೆಲವು ನಿಯಮಗಳನ್ನು ಬದಲಾಯಿಸಲಾಗಿದೆ.

ಈ ಯೋಜನೆಗೆ ಕಂಡಿಷನ್ ಗಳು:-

* ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಿರಬೇಕು.
* ಮಗುವಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗನಿರೋಧಕ ಹಾಕಿಸಿರಬೇಕು.
ಅಂಗನವಾಡಿ ಕೇಂದ್ರಕ್ಕೆ ನೋಂದಣಿಯಾಗಿರಬೇಕು.
* ಶಿಕ್ಷಣ ಇಲಾಖೆಯ ನೋಂದಾಯಿತ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿಸಿರಬೇಕು.
* ಮಗು ಬಾಲಕಾರ್ಮಿಕರಾಗಿರಬಾರದು.
* 18 ವರ್ಷ ಪೂರ್ಣಗೊಳ್ಳುವ ಮುನ್ನ ವಿವಾಹವಾದವರಿಗೆ ಈ ಯೋಜನೆಯ ನೆರವು ಸಿಗುವುದಿಲ್ಲ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now