ಬೆಂಗಳೂರಿನಲ್ಲಿರುವ ಉದ್ಯೋಗ ಆಕಾಂಕ್ಷಿಗಳಿಗೆ ಪಾಲಿಕೆ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ ಅದೇನೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP Recruitment) ಖಾಲಿ ಇರುವ ಡಿ ಗ್ರೂಪ್ ಪೌರಕಾರ್ಮಿಕರ (D Group) ಹುದ್ದೆಗಳಿಗೆ ಬೃಹತ್ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಹುದ್ದೆಗಳಿಗೆ ನಗರದಾದ್ಯಂತ ಇರುವ ಎಲ್ಲ ಮಹಿಳಾ ಮತ್ತು ಪುರುಷ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದು. ಇದರ ಸಂಬಂಧ ಪಾಲಿಕೆ ಕಡೆಯಿಂದ ಅಧಿಕೃತ ಅಧಿಸೂಚನೆ ಕೂಡ ಹೊರ ಬಿದ್ದಿದ್ದು, ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೇಮಕಾತಿ ಕುರಿತಂತೆ ಇರುವ ಪ್ರಮುಖ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಉದ್ಯೋಗ ಸಂಸ್ಥೆ:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ಹುದ್ದೆ ಹೆಸರು:- ಪೌರ ಕಾರ್ಮಿಕರು (Group D)
ಒಟ್ಟು ಹುದ್ದೆಗಳ ಸಂಖ್ಯೆ:- 11,307 ಹುದ್ದೆಗಳು
ಹುದ್ದೆಗಳ ವಿವರ:-
* ಉಳಿಕೆ ಮೂಲ ವೃಂದ – 10,402 ಹುದ್ದೆಗಳು
* ಕಲ್ಯಾಣ ಕರ್ನಾಟಕ ವೃಂದ – 905 ಹುದ್ದೆಗಳು
ಉದ್ಯೋಗ ಸ್ಥಳ:- ಬೆಂಗಳೂರು…
ಈ ಸುದ್ದಿ ಓದಿ:- ನೀರಿನಿಂದ ಚಲಿಸುವ ಇಂಜಿನ್ ತಯಾರಿಸಲು ಹೆಜ್ಜೆ ಇಟ್ಟಿರುವ ಟಯೋಟಾ ಹಾಗಾದರೆ ಮುಗಿಯಿತಾ.? ಪೆಟ್ರೋಲ್ ಡೀಸೆಲ್ ಕಾರ್ ಗಳ ಕಥೆ.!
ವೇತನ ಶ್ರೇಣಿ:- ಈ ಹುದ್ದೆಗಳಿಗೆ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.17,000 ರಿಂದ ರೂ.28,950 ಶ್ರೇಣಿಯಲ್ಲಿ ವೇತನ ನೀಡುತ್ತಾರೆ.
ಅರ್ಹತಾ ಮಾನದಂಡಗಳು:-
* ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 55 ವರ್ಷ ಮೀರಿರಬಾರದು.
* ಬೆಂಗಳೂರಿಗರಿಗೆ ಮೊದಲ ಆದ್ಯತೆ
* ಕನ್ನಡ ಭಾಷೆ ಮಾತನಾಡಲು ತಿಳಿದಿರಬೇಕು.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಡಿಯಲ್ಲಿನ ತ್ಯಾಜ್ಯ ನಿರ್ವಹಣೆ ಕಾರ್ಯಗಳಲ್ಲಿ ಹಾಲಿ ನೇರಪಾವತಿ ಅಥವಾ ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ಕನಿಷ್ಠ 2 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ ಸೇವೆಯನ್ನು ಸಲ್ಲಿಸಿರುವ ಹಾಗೂ ಸದರಿ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಅಂದರೆ ದಿನಾಂಕ 02 ಮಾರ್ಚ್, 2023 ರಿಂದ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು.
* ಪಾಲಿಕೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
* ಫಾರಂನಲ್ಲಿ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಇದಕ್ಕೆ ಅಧಿಸೂಚನೆಯನ್ನು ತಿಳಿಸಿರುವ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ. ಈ ಕೆಳಗೆ ತಿಳಿಸಲಾಗುವ ಕಚೇರಿ ವಿಳಾಸಕ್ಕೆ ಅಪ್ಲಿಕೇಶನ್ ಹಾಕಲು ಅನುಮತಿ ನೀಡಿರುವ ಕೊನೆಯ ದಿನಾಂಕದ ಒಳಗೆ ತಲುಪಿಸಿ.
ಈ ಸುದ್ದಿ ಓದಿ:- ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಅತೀ ಕಡಿಮೆ ಬಂಡವಾಳದಲ್ಲಿ ಪೆಟ್ರೋಲ್ ಬಂಕ್ ಶುರು ಮಾಡಿ.! ತಿಂಗಳಿಗೆ ಎಷ್ಟು ಲಾಭ ಸಿಗುತ್ತೆ ನೋಡಿ.!
* ವಿಳಾಸ:-
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು,
ಘನತ್ಯಾಜ್ಯ ನಿರ್ವಹಣೆ ವಿಭಾಗ,
BBMP ಕಛೇರಿ,
ಬೆಂಗಳೂರು.
ಕಛೇರಿ ಸಮಯ:-
ಬೆಳಿಗ್ಗೆ 10.00 ರಿಂದ ಸಂಜೆ 5.30
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅವರ ಕೆಲಸದ ಅನುಭವ ಇವುಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:- ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, 4660 ರೈಲ್ವೆ ಪೊಲೀಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
ಅರ್ಜಿ ಶುಲ್ಕ:-
* ಯಾವುದೇ ರೀತಿ ಅರ್ಜಿ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಏಪ್ರಿಲ್ 15, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 15, 2024.