ಅಂಚೆ ಕಚೇರಿ (Post office) ಸೌಲಭ್ಯಗಳು ಈಗ ಪತ್ರ ವ್ಯವಹಾರಕ್ಕೆ ಮಾತ್ರವಲ್ಲದೆ ಅಂಚೆ ಬ್ಯಾಂಕ್ ಗಳ (Post Bank) ಮೂಲಕ ಹಣ ಹೂಡಿಕೆಗೆ ಕೂಡ ಬಳಕೆಯಾಗುತ್ತಿವೆ. ಪೋಸ್ಟ್ ಆಫೀಸ್ ನ ಈ ವಿಶೇಷ ಉಳಿತಾಯ ಯೋಜನೆಗಳ ಮೂಲಕ ನೀವು ಹಣ ಉಳಿತಾಯ ಮಾಡಿ ಅತಿಹೆಚ್ಚಿನ ರೂಪದ ಬಡ್ಡಿಯನ್ನು ಆದಾಯದ ರೂಪದಲ್ಲಿ ಹಿಂಪಡಬಹುದು.
ಸದ್ಯಕ್ಕೆ ಅಂಚೆ ಕಚೇರಿಯಲ್ಲಿ 13ಕ್ಕೂ ಹೆಚ್ಚು ಈ ಬಗೆಯ ಯೋಜನೆಗಳಿದ್ದು ಇದರಲ್ಲಿ ಅತ್ಯಂತ ಪ್ರಮುಖವಾದ ಹೆಚ್ಚು ಲಾಭ ಕೊಡುವ ವಿಶೇಷ ಯೋಜನೆಗಳ ಬಗ್ಗೆ ಮತ್ತು ಈ ಯೋಜನೆಗಳ ಖಾತೆ ತೆರೆಯಲು ನೀಡಬೇಕಾದ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
1. ಪೋಸ್ಟ್ ಆಫೀಸ್ ಉಳಿತಾಯ ಖಾತೆ(Post office savings account) :
* ಯಾವುದೇ ವ್ಯಕ್ತಿ ಹೆಸರಿನಲ್ಲಿ ಕನಿಷ್ಠ ಠೇವಣಿ ರೂ.500 ರ ಉಳಿತಾಯದೊಂದಿಗೆ ಈ ಖಾತೆ ತೆರೆಯಬಹುದು.
* ಜಂಟಿ ಮಾಲೀಕತ್ವದಲ್ಲಿ ಕೂಡ ಖಾತೆಯನ್ನು ತೆರೆಯಬಹುದು.
* ಈ ಖಾತೆಗಳ ಉಳಿತಾಯದ ಮೇಲೆ 4% ರಷ್ಟು ಬಡ್ಡಿ ದರವು ಅನ್ವಯಿಸುತ್ತದೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿ ಜಮೆ ಆಗುತ್ತದೆ.
ಈ ಸುದ್ದಿ ಓದಿ:- ಮನೆಯಿಂದಲೇ ಪೆನ್ ಮೇಕಿಂಗ್ ಬಿಜಿನೆಸ್ ಮಾಡಿ, ದಿನಕ್ಕೆ 6000 ಸಂಪಾದಿಸಿ ರಿಸ್ಕ್ ಇಲ್ಲದ ವ್ಯಾಪಾರ ಇದು.!
* ಈ ಉಳಿತಾಯ ಖಾತೆಗೆ ನೀವು ನೀವು ಚೆಕ್ ಬುಕ್, ATM, ಇ-ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಮತ್ತು ಇತರ ಸೇವೆಗಳನ್ನು ಪಡೆಯಬಹುದು.
* ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTA ಅಡಿಯಲ್ಲಿ ವ್ಯಕ್ತಿಗಳು ಒಟ್ಟು ಆದಾಯದಿಂದ 10,000 ರೂ.ಗಳವರೆಗೆ ಕಡಿತವನ್ನು ಪಡೆಯಬಹುದು.
* ರಾಷ್ಟ್ರೀಕೃತ ಬ್ಯಾಂಕ್ ಒಂದ. ಸಾಮಾನ್ಯ ಉಳಿತಾಯ ಖಾತೆಯಂತೆ ಎಲ್ಲ ಸೌಲಭ್ಯಗಳು ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಕೂಡ ಸಿಗುತ್ತವೆ
2. 5-ವರ್ಷದ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆ (RD)(5years post office Return Deposit Account) :
* ಐದು ವರ್ಷಗಳವರೆಗೆ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಠೇವಣಿ ಮಾಡುವ ಯೋಜನೆಯಾಗಿದೆ. ಐದು ವರ್ಷಗಳ ಅಂತ್ಯದ ಬಳಿಕ ಚಾಲ್ತಿಯಲ್ಲಿರುವ ಬಡ್ಡಿದರ ಅನ್ವಯಿಸಿ ನಿಮ್ಮ ಉಳಿತಾಯ ಖಾತೆಗೆ ಹೂಡಿಕೆ ಮತ್ತು ಬಡ್ಡಿರೂಪದ ಲಾಭದ ಹಣವನ್ನು ಜಮೆ ಮಾಡಲಾಗುತ್ತದೆ.
* ಕನಿಷ್ಠ ರೂ.100 ರಿಂದ ಪ್ರಾರಂಭಿಸಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ.
ಈ ಸುದ್ದಿ ಓದಿ:- ನೀರಿನಿಂದ ಚಲಿಸುವ ಇಂಜಿನ್ ತಯಾರಿಸಲು ಹೆಜ್ಜೆ ಇಟ್ಟಿರುವ ಟಯೋಟಾ ಹಾಗಾದರೆ ಮುಗಿಯಿತಾ.? ಪೆಟ್ರೋಲ್ ಡೀಸೆಲ್ ಕಾರ್ ಗಳ ಕಥೆ.!
* ಪ್ರಸ್ತುತವಾಗಿ 6.7% ರಷ್ಟು ಬಡ್ಡಿದರ ಅನ್ವಯವಾಗುತ್ತಿದೆ ಮತ್ತು ಪ್ರತಿ ತ್ರೈಮಾಸಿಕಕ್ಕೊಮ್ಮೆ ಇದು ಪರಿಷ್ಕೃತಗೊಳ್ಳುತ್ತದೆ
ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಯೋಜಿಸಲಾಗುತ್ತದೆ.
* ಡಿಫಾಲ್ಟ್(Default) ಮಾಡದೆಯೇ 12 ಕಂತುಗಳನ್ನು ಪೂರ್ಣಗೊಳಿಸಿದ ನಂತರ ಖಾತೆಯಲ್ಲಿ ಲಭ್ಯವಿರುವ ಠೇವಣಿಯ ಆಧಾರದಲ್ಲಿ ನೀವು 50% ವರೆಗೆ ಸಾಲವನ್ನು ಪಡೆಯಬಹುದು.
3. ಪೋಸ್ಟ್ ಆಫೀಸ್ ಸಮಯದ ಠೇವಣಿ (Post office Time deposite)
* ಈ ಯೋಜನೆಯು ನಾಲ್ಕು ಸಂಭವನೀಯ ಅವಧಿಗಳಿಗೆ ಲಭ್ಯವಿದೆ. (1 ವರ್ಷ, 2 ವರ್ಷಗಳು, 3 ವರ್ಷಗಳು ಮತ್ತು 5 ವರ್ಷಗಳು).
* ಕನಿಷ್ಠ ಠೇವಣಿ ರೂ.1,000 ದಿಂದ ಠೇವಣಿ ಇಡಬಹುದು, ನೀವು ಇಡುವ ಅವಧಿ ಆಧಾರದ ಮೇಲೆ ಬಡ್ಡಿದರ ನಿರ್ಧಾರವಾಗುತ್ತದೆ
ಅವಧಿಬಡ್ಡಿ ದರ
1 ವರ್ಷದ ಖಾತೆ -6.9%
2 ವರ್ಷಗಳ ಖಾತೆ -7%
3 ವರ್ಷಗಳ ಖಾತೆ-7.1%
5 ವರ್ಷಗಳ ಖಾತೆ-7.5%
* 5 ವರ್ಷಗಳ ಮುಕ್ತಾಯದೊಂದಿಗೆ ಖಾತೆಯಲ್ಲಿನ ಹೂಡಿಕೆಯು ಸೆಕ್ಷನ್ 80C ಕಡಿತಕ್ಕೆ ಅರ್ಹತೆ ಪಡೆಯುತ್ತದೆ.
4. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆ (POMIS)
* ಈ ಯೋಜನೆಯಡಿ ನೀವು ಒಂದೇ ಖಾತೆಯಲ್ಲಿ ರೂ 1,000 ವರೆಗೆ ರೂ 9 ಲಕ್ಷದವರೆಗೆ ಮತ್ತು ಜಂಟಿ ಖಾತೆಯಲ್ಲಿ ರೂ 15 ಲಕ್ಷದವರೆಗೆ ಠೇವಣಿ ಮಾಡಬಹುದು.
* ಪ್ರಸ್ತುತವಾಗಿ 7.4% ಬಡ್ಡಿದರ ಅನ್ವಯವಾಗುತ್ತಿದೆ
* POMIS ನ ಮೆಚ್ಯುರಿಟಿ ಅವಧಿಯು 5 ವರ್ಷಗಳು.
* ಉದಾಹರಣೆಗೆ, ನೀವು 5 ವರ್ಷಗಳ ಅವಧಿಗೆ ಪೋಸ್ಟ್ ಆಫೀಸ್ MIS ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಿದರೆ, ನೀವು ಅವಧಿಯ ಅಂತ್ಯದವರೆಗೆ ಪ್ರತಿ ತಿಂಗಳು 5,325 ರೂಪಾಯಿಗಳ ಮಾಸಿಕ ಬಡ್ಡಿಯನ್ನು (monthly intrest) ಸ್ವೀಕರಿಸುತ್ತೀರಿ. ಐದು ವರ್ಷಗಳ ಅವಧಿಯ ಕೊನೆಯಲ್ಲಿ ನೀವು ರೂ 9 ಲಕ್ಷದ ಠೇವಣಿ ಮೊತ್ತವನ್ನು ಮರಳಿ ಪಡೆಯುತ್ತೀರಿ.
5. ಸಾರ್ವಜನಿಕ ಭವಿಷ್ಯ ನಿಧಿ ಖಾತೆ (PPF):
* ಸೆಕ್ಷನ್ 80C ಅಡಿಯಲ್ಲಿ ಪ್ರತಿ ಹಣಕಾಸು ವರ್ಷಕ್ಕೆ ರೂ 1.5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವುದರಿಂದ ಅನೇಕ ಸಂಬಳದ ವ್ಯಕ್ತಿಗಳು ಹೂಡಿಕೆ ಮತ್ತು ನಿವೃತ್ತಿ ಸಾಧನವಾಗಿ PPF ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ.
* ಖಾತೆ ತೆರೆಯಲು ಕನಿಷ್ಠ ಠೇವಣಿ 500 ರೂ. ಮತ್ತು ಗರಿಷ್ಠ ಮಿತಿ 1.5 ಲಕ್ಷ ರೂ.
* ಮೆಚ್ಯುರಿಟಿ ಅವಧಿ ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳು.
* ಖಾತೆಯನ್ನು ಸಕ್ರಿಯವಾಗಿಡಲು ನೀವು ಪ್ರತಿ ಆರ್ಥಿಕ ವರ್ಷಕ್ಕೆ ಕನಿಷ್ಠ ರೂ.500 ರೂಪಾಯಿಗಳನ್ನು ಠೇವಣಿ ಮಾಡಬೇಕು
* ಪ್ರಸ್ತುತವಾಗಿ 7.1% ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ, ಈ ಖಾತೆಯಲ್ಲಿ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ.
PPF ನಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಕಡಿತವಾಗಿ ಕ್ಲೈಮ್ ಮಾಡಬಹುದು.
ಕೆಲ ಪ್ರಮುಖ ಸಂಗತಿಗಳು:-
* ಭಾರತೀಯ ನಾಗರಿಕನಾಗಿರುವ ವ್ಯಕ್ತಿಗೆ ಮಾತ್ರ ಅಂಚೆ ಕಚೇರಿಯ ಈ ಸೌಲಭ್ಯಗಳು ಸಿಗುವುದು
* ಇವಿಷ್ಟೇ ಅಲ್ಲದೆ ಸುಕನ್ಯ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಪಿಂಚಣಿ ಯೋಜನೆ, ಮಹಿಳಾ ಸಮ್ಮಾನ್ ಯೋಜನೆ ಈ ರೀತಿ ಪ್ರತ್ಯೇಕವಾಗಿ ಆಯಾವರ್ಗಗಳಿಗೂ ಕೂಡ ವಿಶೇಷ ಉಳಿತಾಯ ಯೋಜನೆಗಳು ಲಭ್ಯವಿದೆ.
ಈ ಸುದ್ದಿ ಓದಿ:- BBMP ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 28,950.
* ಈ ಎಲ್ಲಾ ಖಾತೆಗಳಿಗೂ ಕೂಡ ನಾಮಿನಿಯನ್ನು ತಪ್ಪದೆ ಸೂಚಿಸಬೇಕು ಒಂದು ವೇಳೆ ಹೂಡಿಕೆದಾರ ಅಕಸ್ಮಾತ್ ಮೃ’ತಪಟ್ಟಲ್ಲಿ ಕಾನೂನುಬದ್ಧವಾಗಿ ಸೇರಬೇಕಾದ ಹಣವು ನಾಮಿನಿಗೆ ತಲುಪುತ್ತದೆ
* ಮೆಚುರಿಟಿ ಅವಧಿಗೂ ಮುನ್ನ ಹಣ ಹಿಂಪಡೆಯುವುದಾದರೆ ಯೋಜನೆಗೆ ಇರುವ ಕಂಡೀಶನ್ ಪ್ರಕಾರವಾಗಿ ದಂಡ ವಿಧಿಸಲಾಗುತ್ತದೆ ಅಥವಾ ಉಳಿತಾಯ ಖಾತೆಯಲ್ಲಿಯ ಹಣಕ್ಕೆ ನೀಡಲಾಗುವ ಬಡ್ಡಿಯನ್ನಷ್ಟೇ ನೀಡಲಾಗುತ್ತದೆ
* ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಗೆ ಭೇಟಿ ಕೊಡಿ.
ಬೇಕಾಗುವ ದಾಖಲೆಗಳು:-
* ವಿಳಾಸದ ಪುರಾವೆ ಮತ್ತು ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* KYC
* ಇನ್ನಿತರ ಪ್ರಮುಖ ದಾಖಲೆಗಳು