ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ಇವು ಎಷ್ಟು ಜವಾಬ್ದಾರಿಯುತ ಹಾಗೂ ಹೆಚ್ಚು ಬಜೆಟ್ ನ ದೊಡ್ಡ ಯೋಜನೆ ಎನ್ನುವುದನ್ನು ಅರ್ಥ ಮಾಡಿಸುತ್ತದೆ. ಸದ್ಯಗಂತೂ ಈಗಿನ ಕಾಲದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಗೆ ಜವಾಬ್ದಾರಿ ವಹಿಸಿ ಹಣ ಕೊಟ್ಟು ಎರಡು ದಿನದ ಮದುವೆ ಬೇಕಾದರೂ ಮಾಡಿ ಮುಗಿಸಬಹುದು ಆದರೆ ಮನೆ ಕಟ್ಟಿಸುವ ಕೆಲಸ ಮಾತ್ರ ಅಷ್ಟು ಈಜಿ ಅಲ್ಲ ಎನ್ನುವುದು ಮನೆ ಕಟ್ಟಿದ ಪ್ರತಿಯೊಬ್ಬರ ಅನುಭವದ ಮಾತಾಗಿದೆ.
ಎಷ್ಟೇ ಹಣ ಹೊಂದಿಸಿದರು ಮನೆ ಎನ್ನುವ ಖರ್ಚಿಗೆ ಸಾಲುವುದೇ ಇಲ್ಲ ಹಾಗೆ ಎಷ್ಟು ಸಮಯ ಕೊಟ್ಟರು ಮನೆ ಪೂರ್ತಿ ಆಗುವವರೆಗೂ ಕೂಡ ಒಂದು ರೀತಿಯ ಗೊಂದಲ, ಮನೆ ಹೊಸಲಿಗೆ ತೋರಣ ಬೀಳುವವರೆಗೂ ಮನೆ ಕಟ್ಟುವವರ ಟೆನ್ಶನ್ ಅಷ್ಟಿಷ್ಟಲ್ಲ.
ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿರುವ ಕೆಲ ನಂಬಿಕಸ್ತ ಕನ್ಸ್ಟ್ರಕ್ಷನ್ ಕಂಪನಿಗಳು ಈ ಜವಾಬ್ದಾರಿಯನ್ನು ಸ್ವಲ್ಪ ಮಟ್ಟಿಗೆ ಇಳಿಸಿದೆ. ನಿಮ್ಮ ಮನೆ ಕನಸನ್ನು ನಿಮ್ಮ ಇಚ್ಛೆಯಂತೆ ಪೂರೈಸುವ ಕಡಿಮೆ ಬಜೆಟ್ ನಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡುವ ಧ್ಯೇಯದಡಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಕಂಪನಿಗಳಲ್ಲಿ RCC ಕನ್ಸ್ಟ್ರಕ್ಷನ್ ಕಂಪನಿ ಕೂಡ ಒಂದು.
ರಾಜ್ಯದಲ್ಲಿ ಬೆಂಗಳೂರಿನಲ್ಲಿ ಹೆಡ್ ಆಫೀಸ್ ಹೊಂದಿರುವ ಇವರ ಕಂಪನಿಗಳು ಮೈಸೂರು ಮಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಇವೆ. ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆ ಭಾಗಕ್ಕೆ ಬೇಕಾದರೂ ಬಂದು ಇವರು ಕನ್ಸ್ಟ್ರಕ್ಷನ್ ಮಾಡಿ ಕೊಡುತ್ತಾರೆ. ಈ ಕ್ಷೇತ್ರದಲ್ಲಿ ಅಪಾರ ಕೆಲಸದ ಅನುಭವ ಹೊಂದಿರುವ ಇವರು ನೂರಾರು ಮನೆ ನಿರ್ಮಿಸಿದ ಅನುಭವದೊಂದಿಗೆ ಎಲ್ಲವನ್ನು ಲೆಕ್ಕಾಚಾರ ಹಾಕಿ ಸರಿದೂಗಿಸಿ ನಿಮ್ಮ ಇಚ್ಛೆಯ ಮನೆಯ ನಿರ್ಮಾಣ ಮಾಡಿ ಕೀಲಿ ನಿಮ್ಮ ಕೈಗೆ ಕೊಡುತ್ತಾರೆ.
ಉದಾಹರಣೆಯೊಂದಿಗೆ ಹೇಳುವುದಾದರೆ ಬೆಂಗಳೂರಿನ ಬಾಗಲಗುಂಟೆ ಸಮೀಪದಲ್ಲಿ ಕೇವಲ ರೂ.49 ಲಕ್ಷಕ್ಕೆ 6 ಮನೆ ಕಟ್ಟಿಕೊಟ್ಟಿದ್ದಾರೆ. ಇಷ್ಟು ಕಡಿಮೆ ಹಣಕ್ಕೆ ನಿಜವಾಗಲೂ ಇದು ಸಾಧ್ಯವಾಯಿತಾ? ಎನ್ನುವುದು ಅನೇಕರ ಅನುಮಾನ ಖಂಡಿತವಾಗಿಯೂ ಸಾಧ್ಯವಾಗಿದೆ. ಈ ಆರು ಮನೆಗಳೂ ಕೂಡ ಬಾಡಿಗೆ ಪರ್ಪಸ್ ಗಾಗೇ ಕಟ್ಟಿರುವ ಮನೆಗಳು ಆಗಿವೆ.
ಬಾಡಿಗೆಗೆ ಬರುವವರು ಸಾಮಾನ್ಯವಾಗಿ ಕಡಿಮೆ ಹಣಕ್ಕೆ ಬಾಡಿಗೆ ಸಿಕ್ಕರೆ ಸಾಕು ಎಂದುಕೊಳ್ಳುತ್ತಾರೆ ಹಾಗೆ ಓನರ್ ಗಳು ಕೂಡ ಬಾಡಿಗೆಯವರು ಹೇಗೆ ಇಟ್ಟುಕೊಳ್ಳುತ್ತಾರೋ ಏನೋ ಎಂದು ಹೆಚ್ಚು ಹಣ ಸುರಿಯಲು ಇಷ್ಟ ಪಡುವುದಿಲ್ಲ. ಈ ಉದ್ದೇಶದಿಂದ ಮನೆ ಕಟ್ಟಿಸುವವರಿಗೆ ಇದು ಅತ್ಯುತ್ತಮವಾದ ಪ್ಲಾನಿಂಗ್ ಆಗಿದೆ.
ಬಜೆಟ್ ಕಡಿಮೆ ಎಂದು ಸ್ಟ್ರೆಂತ್ ವಿಷಯದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ ಆದರೆ ಕಾಸ್ಟ್ ಕಡಿಮೆ ಮಾಡುವ ಉದ್ದೇಶದಿಂದ ಆರು ಮನೆಗಳನ್ನು ಒಂದೇ ರೀತಿ ಸಿಮಿಲರ್ ಆಗಿ ಡಿಸೈನ್ ಮಾಡಿ ಕಟ್ಟಿದ್ದಾರೆ. ಗ್ರಾನೈಟ್, ಸಿಂಕ್, ಡೋರ್, ವಿಂಡೋ ಎಲ್ಲವನ್ನು ಕೂಡ ಒಂದೇ ರೀತಿ ಖರೀದಿಸಿರುವುದರಿಂದ ಇದರಲ್ಲಿ ಸ್ವಲ್ಪ ಖರ್ಚು ಕಡಿಮೆ ಆಗಿದೆ.
ಎಲ್ಲವೂ ಸಿಂಗಲ್ ಬೆಡ್ ರೂಮ್ ಮನೆಗಳಾಗಿದ್ದು ಒಂದು ಚಿಕ್ಕ ಕುಟುಂಬ ಆರಾಮಾಗಿ ಜೀವಿಸಲು ಬೇಕಾದಷ್ಟು ಸ್ಥಳಾವಕಾಶದೊಂದಿಗೆ ಒಂದು ಸಿಂಪಲ್ ಡಿಸೈನ್ ಮಾಡಿ ಮನೆ ಕಟ್ಟಿಕೊಡಲಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮಗೂ ಈ ರೀತಿ ಮನೆ ಕಟ್ಟಿಸುವ ಆಸಕ್ತಿ ಇದ್ದರೆ ಈ ಕಂಪನಿಗೆ ಜವಾಬ್ದಾರಿ ವಹಿಸಿ ನಿಶ್ಚಿಂತೆಯಾಗಿರಿ.
RCC
7022876667
7022956667