ಸದ್ಯಕ್ಕಂತೂ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಲಾಭ ಕೊಡುವ ಮಾರ್ಗ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿ ಹೋಗಿದೆ. ಯಾಕೆಂದರೆ ಕಳೆದ ಒಂದು ದಶಕದಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಗಮನಿಸಿದರೆ ಹಣವನ್ನು ಬ್ಯಾಂಕ್ ನಲ್ಲಿ ಇಡುವುದಕ್ಕಿಂತ ಚಿನ್ನ ಖರೀದಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸದೆ ಇರದು.
ಆದರೆ ಎಷ್ಟು ತಾನೇ ಚಿನ್ನವನ್ನು ಮೈ ಮೇಲೆ ಹಾಕಿಕೊಳ್ಳಲು ಸಾಧ್ಯ ಮತ್ತು ಸದಾ ಕಾಲ ಈ ರೀತಿ ಕೆಜಿಗಟ್ಟರೆ ಬಂಗಾರ ಹಾಕಿಕೊಂಡು ಓಡಾಡುವುದು ಕೂಡ ಕಷ್ಟ. ಇನ್ನು ಮನೆಯಲ್ಲಿ ಇಡುವುದಕ್ಕೂ ಕೂಡ ಕಳ್ಳ ಕಾಕರ ಭಯ ಹೀಗಾಗಿ ಚಿನ್ನಕ್ಕೆ ಸುರಕ್ಷತೆ ಬೇಕು ಎಂದು ಬ್ಯಾಂಕ್ ಗಳಲ್ಲಿ ತೆಗೆದುಕೊಂಡು ಹೋಗಿ ಇಡುತ್ತೇವೆ.
ಇಲ್ಲಿ ಚಿನ್ನವೇನೋ ಸುರಕ್ಷತೆಯಿಂದ ಇರುತ್ತದೆ ನಿಜ ಆದರೆ ಆಗಾಗ ಹೋಗಿ ನಾವು ಅಲ್ಲಿನ ನಿಯಮಗಳ ಪ್ರಕಾರವಾಗಿ ಪರಿಶೀಲಿಸಬೇಕು, ನೋಡಿಕೊಳ್ಳಬೇಕು, ಸಹಿ ಮಾಡಿಕೊಡಬೇಕು, ಒಪ್ಪಂದ ಮಾಡಿಕೊಳ್ಳಬೇಕು ಇತ್ಯಾದಿ ಪ್ರೊಸೀಜರ್ಗಳು ನಡೆಯುತ್ತದೆ, ದೂರದ ಊರುಗಳಲ್ಲಿ ಇದ್ದರೆ ಆಗಾಗ ಬ್ಯಾಂಕಿಗೆ ಹೋಗಲು ಕಷ್ಟ. ಇನ್ನು ಈ ರೀತಿ ಲಾಕರ್ ನಲ್ಲಿ ಚಿನ್ನ ಇಡುವುದಾದರೆ ಅದಕ್ಕೆ ನಾವೇ ಶುಲ್ಕವನ್ನು ಕೂಡ ಕಟ್ಟಬೇಕು.
ಹಾಗಾಗಿ ಅನೇಕರು ಈ ಬಗ್ಗೆ ಆಸಕ್ತಿ ಕಳೆದುಕೊಂಡಿರುತ್ತಾರೆ. ಆದರೆ ನಿಮಗೆಲ್ಲ ಇಂದು ಈ ವಿಚಾರವಾಗಿ ಒಂದು ಸಿಹಿ ಸುದ್ದಿ ಹೇಳುತ್ತಿದ್ದೇವೆ. ಅದೇನೆಂದರೆ, ಕೇಂದ್ರ ಸರ್ಕಾರವು ಬಡ ಹಾಗೂ ಮಧ್ಯಮ ವರ್ಗದವರ ಚಿನ್ನ ಖರೀದಿಸುವ ಕನಸಿಗೆ ನೆರವಾಗುವ ಉದ್ದೇಶದಿಂದ ಸವರನ್ ಗೋಲ್ಡ್ ಬಾಂಡ್ (Sovereign Gold Bond) ಎನ್ನುವ ಯೋಜನೆಯೊಂದನ್ನು RBI ಸಹಯೋಗದೊಂದಿಗೆ ಜಾರಿಗೆ ತಂದಿದೆ.
ನೀವೇನಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕ್ ನಿಮ್ಮ ಚಿನ್ನವನ್ನು ಇಟ್ಟುಕೊಳ್ಳುವುದು ಮಾತ್ರವಲ್ಲದೆ ನಿಮಗೆ ಬಡ್ಡಿ ರೂಪದಲ್ಲಿ ಹಣ ಕೂಡ ಕೊಡುತ್ತದೆ. ಇದು ಆಶ್ಚರ್ಯ ಅನಿಸಿದರೂ ಸತ್ಯ ಇದರ ಕುರಿತು ವಿವರ ಹೀಗಿದೆ ನೋಡಿ.
* ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಭಾರತೀಯ ನಾಗರೀಕನಾದ ವ್ಯಕ್ತಿಯು ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಕನಿಷ್ಠ 1 grm ನಿಂದ ಹೂಡಿಕೆ ಮಾಡಬಹುದು.
* ಆದರೆ ನೀವು ಇಲ್ಲಿ ನಿಮ್ಮ ಮನೆಯಲ್ಲಿರುವ ಚಿನ್ನವನ್ನು ಅಥವಾ ಚಿನ್ನದ ಬಿಸ್ಕೆಟ್ ಗಳನ್ನು ಖರೀದಿಸಿ ಇಡಬೇಕಾದ ಅಗತ್ಯ ಇಲ್ಲ 1.grm ಚಿನ್ನಕ್ಕೆ ಈಗ ಪ್ರಸ್ತುತವಾಗಿ ಎಷ್ಟು ಬೆಲೆ ಬಾಳುತ್ತಿದೆಯೋ ಅಷ್ಟು ಲೆಕ್ಕದಲ್ಲಿ ನೀವು ಈ ಯೋಜನೆಯಲ್ಲಿ ಬಾಂಡ್ ಖರೀದಿಸುತ್ತೀರಾ ಇದು ಒಂದು ರೀತಿಯಲ್ಲಿ ಶೇರ್ ಮಾರ್ಕೆಟ್ ನಲ್ಲಿ ಶೇರ್ ಖರೀದಿಸಿದ ರೀತಿ ಆಗುತ್ತದೆ.
*ಯೋಜನೆಯ ಮೆಚುರಿಟಿ ಅವಧಿ 8 ವರ್ಷಗಳಾಗಿದ್ದು, ಎಂಟು ವರ್ಷಕ್ಕೆ ನೀವು ವಿಥ್ ಡ್ರಾ ಮಾಡಿಕೊಳ್ಳಬಹುದು. ಎಂಟನೇ ವಯಸ್ಸಕ್ಕೆ ನೀವು ಈ ಯೋಜನೆ ಹಣವನ್ನು ಕ್ಲೈಮ್ ಮಾಡುವಾಗ ಆಗ ಚಿನ್ನಕ್ಕೆ ಎಷ್ಟು ಬೆಲೆ ಇದ್ದರೂ ನೀವು ಹೂಡಿಕೆ ಮಾಡಿರುವ ತೂಕ ಎಷ್ಟಿದೆ ಎಷ್ಟು ಚಿನ್ನಕ್ಕೆ ಸಮನಾದ ಹಣವನ್ನು ಪಡೆಯಬಹುದು.
(ಉದಾಹರಣೆಗೆ ಈಗ ಚಿನ್ನಕ್ಕೆ ರೂ.7000 ಇದ್ದು ನೀವು 1 grm ಖರೀದಿಸಿದ್ದೀರಿ ಎಂದು ಇಟ್ಟುಕೊಳ್ಳೋಣ ಎಂಟು ವರ್ಷ ಆದಮೇಲೆ ಒಂದು ಗ್ರಾಂ ರೂ.10,000 ಆಗಿದ್ದರೆ ನಿಮಗೆ ರೂ.10,000 ಹಣ ಬರುತ್ತದೆ ಆದರೆ ನಿಮ್ಮ ದುರಾದೃಷ್ಟವಶಾತ್ ಚಿನ್ನದ ಬೆಲೆ ರೂ.5,000ಕ್ಕೆ ಇಳಿದಿದ್ದರೆ ರೂ.5,000 ಸಿಗುತ್ತದೆ ಆದರೆ ಕಳೆದೆರಡು ದಶಕಗಳಿಂದ ಸತತವಾಗಿ ಚಿನ್ನದ ಬೆಲೆ ಏರುತ್ತಿದೆ ಹೊರತು ಕಡಿಮೆ ಆಗಿಲ್ಲ ಹಾಗಾಗಿ ಧೈರ್ಯವಾಗಿ ಹೂಡಿಕೆ ಮಾಡಬಹುದು.
* ನೀವು ಯಾವುದೇ ಅನಿವಾರ್ಯ ಸಂದರ್ಭದಲ್ಲಿ ಮುರಿಯ ಬಯಸಿದರೆ ಐದನೇ ವರ್ಷ ಆದಮೇಲೆ ನಿಮ್ಮ ಶೇರ್ ಹಿಂಪಡೆಯಬಹುದು ಆದರೆ ಆಗ ಉಳಿತಾಯ ಖಾತೆಯಲ್ಲಿ ಇಡುವ ಹಣಕ್ಕೆ ನೀಡಲಾಗುವ ಬಡ್ಡಿದರದ ಅನ್ವಯ ಮಾತ್ರ ನಿಮ್ಮ ಹಣಕ್ಕೆ ಲಾಭ ಸಿಗುತ್ತದೆ ಇದರ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿ.