ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವು ಸಾರ್ವಜನಿಕರಿಗೆ ಉಚಿತವಾಗಿ ಮತ್ತು ಗುಣಮಟ್ಟದಲ್ಲಿ ಸಿಕ್ಕಿದ್ದಾದರೆ ಆ ದೇಶದ ಆರ್ಥಿಕತೆಯಲ್ಲಿ ಒಂದು ಹೊಸ ಕ್ರಾಂತಿ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಇಂದು ಈ ಸ್ಪರ್ಧಾತ್ಮಕ ಬದುಕಿನಲ್ಲಿ ಪ್ರತಿಯೊಬ್ಬರೂ ಕೂಡ ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕಾಲ ಕಷ್ಟಪಟ್ಟು ದುಡಿದರು ಬರುವ ಹಣದಲ್ಲಿ ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ರೀತಿ ಆಗಿ ಬಿಟ್ಟಿದೆ.
ಮತ್ತು ಇವುಗಳು ಶುಲ್ಕ ರಹಿತವಾಗಿ ಅಥವಾ ಕಡಿಮೆ ಹಣಕ್ಕೆ ಸಿಗದೇ ಇದ್ದಾಗ ಸೌಲಭ್ಯದಿಂದ ವಂಚಿತರಾಗಿ ಬದುಕು ವ್ಯರ್ಥವಾಗುತ್ತದೆ ಹಾಗಾಗಿ ನಿಧಾನವಾಗಿ ಈ ನಿಟ್ಟಿನಲ್ಲಿ ದೇಶದ ಚಿತ್ರಣ ಬದಲಾಗುತ್ತಿದ್ದು ಇದಕ್ಕೆ ಕರ್ನಾಟಕ ಕೂಡ ಸಾಕ್ಷಿ ಆಗುತ್ತಿದೆ. 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಳು ಸೃಷ್ಟಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಸುದ್ದಿ ಓದಿ:- ಅಗ್ನಿಶಾಮಕ ಇಲಾಖೆ ನೇಮಕಾತಿ, 975ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!
ಕಳೆದ ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಕೂಡ LKG-UKG ತರಗತಿಗಳನ್ನು ಆರಂಭಿಸುವಂತೆ ಪೋಷಕರು ಮನವಿ ಸಲ್ಲಿಸುತ್ತಿದ್ದರು. ಈಗ ಅಂತಿಮವಾಗಿ ಸರ್ಕಾರದಿಂದ ಈ ಕುರಿತು ಅಧಿಕೃತ ಅಪ್ಡೇಟ್ ಹೊರಬರುತ್ತದೆ. ಈಗಿರುವ ಮಾಹಿತಿಯ ಪ್ರಕಾರವಾಗಿ ಅಕ್ಷರ ಆವಿಷ್ಕಾರ (Akshara Avishkara) ಎನ್ನುವ ಹೊಸ ಯೋಜನೆಯಡಿ ಯಾವುದೇ ಪ್ರವೇಶ ಶುಲ್ಕ ಇಲ್ಲದೆ.
ಬಡತನ ರೇಖೆಗಿಂತ ಕೆಳಗಿರುವ ಮಕ್ಕಳುಗಳಿಗೆ ಸರ್ಕಾರಿ ಶಾಲೆಗಳಲ್ಲಿ LKG, UKG, ECCE, Bilingual ತರಗತಿಗಳನ್ನು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಮೇ 29 ನೇ ತಾರೀಖಿನ ಒಳಗಾಗಿ ಈ ಕುರಿತು ಶಿಕ್ಷಣ ಇಲಾಖೆ ಕಡೆಯಿಂದ ಸ್ಪಷ್ಟ ಚಿತ್ರಣ ಸಿಗಲಿದೆ. ಎರಡುವರೆ ವರ್ಷಗಳಿಂದ ಆರು ವರ್ಷಗಳ ಒಳಗಿನ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗಿರುತ್ತದೆ ಮತ್ತು ಆ ಸಮಯದಲ್ಲಿ ಅವರಲ್ಲಿ ಮೆದುಳಿನ ಬೆಳವಣಿಗೆಯು ಪರಿಣಾಮಾತ್ಮಕವಾಗಿ ಬದಲಾಗುತ್ತಿರುತ್ತದೆ.
ಈ ಸಮಯದಲ್ಲಿ ಮಕ್ಕಳ ಭವಿಷ್ಯಕ್ಕೆ ಬೇಕಾದ ಸಂಗತಿಗಳನ್ನು ಕಲಿಸುವುದರಿಂದ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ ಎನ್ನುವ ತಜ್ಞರ ಸಲಹೆಗಳ ಸುದೀರ್ಘ ಚರ್ಚೆ ನಂತಹ ಇಂತಹ ನಿರ್ಧಾರಕ್ಕೆ ಒಪ್ಪಿಗೆ ದೊರಕಿದ್ದು. ಖಾಸಗಿ ಶಾಲೆಗಳಲ್ಲಿ ಇದಕ್ಕಾಗಿ ವಿಭಿನ್ನ ಮಾದರಿಯ ತರಗತಿಗಳನ್ನು ನಡೆಸಿ ಮಕ್ಕಳನ್ನು ಆಕರ್ಷಿಸಲಾಗುತ್ತದೆ.
ಈ ಸುದ್ದಿ ಓದಿ:- ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ ಪ್ರತಿ ತಿಂಗಳು ಸರ್ಕಾರದಿಂದ ಸಿಗಲಿದೆ 8,500/-
ಆದರೆ, ಇದಕ್ಕೆ ತುಂಬಾ ದೊಡ್ಡ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಎಲ್ಲಾ ಪೋಷಕರಿಗೂ ಇದು ಸಾಧ್ಯವಾಗದ ಕಾರಣ ಆರ್ಥಿಕ ಹೊರೆಯ ಕಾರಣದಿಂದಾಗಿ ಮಕ್ಕಳಿಗೆ ವಂಚನೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರದ ಮಟ್ಟದಲ್ಲಿಯೇ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಈ ತರಗತಿಗಳಲ್ಲಿ ಮಕ್ಕಳಿಗೆ ಸುಸ್ಸಜಿತ ಶಾಲಾ ಕೊಠಡಿ, ಕಾರ್ಟೂನ್ ಪಾತ್ರಗಳ ಚಿತ್ರಗಳ ಮೂಲಕ ಪಾಠ, ಹಲವಾರು ರೀತಿಯ ಬಣ್ಣಗಳು, ತರಕಾರಿಗಳು, ಪ್ರಾಣಿಗಳು, ವಸ್ತುಗಳ ಪ್ಲಾಸ್ಟಿಕ್ ಆಟದ ಸಾಮಾಗ್ರಿಗಳಿಂದ ಸಂಖ್ಯೆ ಹಾಗೂ ಅಕ್ಷರಗಳಿಗೆ ಸಂಬಂಧಪಟ್ಟ ಹಾಗೆ ಬೋಧನೆ, ಬಿಲ್ಡಿಂಗ್ ಬಾಕ್ಸ್ , ಪಜಲ್ ಮತ್ತು ಹೊರಾಂಗಣ ಆಟದ ವ್ಯವಸ್ಥೆ ಇತ್ಯಾದಿಗಳನ್ನು ಕೂಡ ನೀಡಲಾಗುತ್ತದೆ.
ಪ್ರಾಯೋಕ ಹಂತವಾಗಿ ಕುಷ್ಟಗಿ ತಾಲೂಕಿನ 36 ಸರ್ಕಾರಿ ಶಾಲೆಗಳಲ್ಲಿ ECCE, LKG ಮತ್ತು UKG ಮತ್ತು 31 ಶಾಲೆಗಳಲ್ಲಿ ದ್ವಿಭಾಶ Bilingual ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಆಯ್ಕೆಯಾಗಿರುವ ಶಾಲೆಗಳ ಪಟ್ಟಿ ಹೀಗಿದೆ ನೋಡಿ:-
ಈ ಸುದ್ದಿ ಓದಿ:- ಹೈನುಗಾರಿಕೆಯಿಂದ ತಿಂಗಳಿಗೆ 1.8 ಲಕ್ಷ ಆದಾಯ ಪಡೆಯುತ್ತಿರುವ ರೈತ, ದಿನಕ್ಕೆ 45 ಲೀ. ಹಾಲು ಕೊಡುವ ಹಸುಗಳು ಕೂಡ ಇವರ ಬಳಿ ಇವೆ.!
* ಚಳಗೇರಾ
* ದೋಟಿಹಾಳ
* ಗರ್ಜನಾಳ
* ಗೋತಗಿ
* ಹನುಮ ಸಾಗರ
* ಹಿರೇಗೊಣ್ಣಾಗರ
* ಹಿರೇಮನ್ನಾಪುರ
* ಹಿರೇನಂದಿಹಾಳ
* ಹುಲಿಯಾಪುರ
* ಜಾಗೀರಗುಡುರೂ
* ಕಬ್ಬರಗಿ
* ಕಲಾಬಂಡಿ
* ಕೊರಡಕೇರ
* ಕುಂಬಳಾವತಿ
* ಬಾಲಕಿಯರ ಶಾಲೆ ಕುಷ್ಟಗಿ
* ಲಿಂಗದಳ್ಳಿ
* ಮಾಲಗಿತ್ತಿ
* ಮನ್ನೇರಾಳ
* ನಿಡಶೇಸಿ
* ನಿಲೋಗಲ್
* ಶಾಖಾಪುರ
* ತುಗ್ಗಲದೋಣಿ
* ವಣಗೇರಿ
* ಯಲಬುಣಚಿ
* RMAS ಶಾಲೆ, ಮೂಗನೂರು
* ಯರಗೇರಾ