ಅಂಚೆ ಕಛೇರಿ ಸೇವೆಗಳು (Post Office Services) ಈಗ ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಪರ್ಕ ಕೊಂಡಿಯಂತಿದ್ದ ಈ ಇಲಾಖೆಯ ಚಿತ್ರಣವೀಗ ಬದಲಾಗಿ ವರ್ಷಗಳಾಗಿವೆ ಮತ್ತು ಇತ್ತೀಚಿನ ದಿನಗಳಲ್ಲಿ ಒಂದು ಯಶಸ್ವಿ ಹಣಕಾಸಿನ ಉದ್ಯಮವಾಗಿ, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮನಾಗಿ ಸೆಡ್ಡು ಹೊಡೆದು ಅಂಚೆ ಕಛೇರಿ ನಿಲ್ಲುತ್ತಿದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಿಡಿದು ಸುರಕ್ಷಿತವಾಗಿ ನಮ್ಮ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡುವವರೆಗೆ ಸಾಕಷ್ಟು ಯೋಜನೆಗಳ ಅನುಕೂಲತೆ ಇದೆ. ಪ್ರತಿ ಗ್ರಾಮದಲ್ಲೂ ಅಂಚೆ ಠಾಣೆಗಳು ಇರುವುದರಿಂದ ನಾಗರಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ಇಂತಹ ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ.
ಈ ಸುದ್ದಿ ಓದಿ:- 2024-25 ನೇ ಸಾಲಿನ ಮುಂಗಾರು ಬೆಳೆಗೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
ಇಂತಹ ಯೋಜನೆಗಳಲ್ಲಿ ಒಂದಾದ ದಿನಕ್ಕೆ ಕೇವಲ ರೂ.95 ಹೂಡಿಕೆ ಮಾಡಿ ರೂ.14ಲಕ್ಷ ರಿಟರ್ನ್ಸ್ ಪಡೆಯ ಬಹುದಾದ ಗ್ರಾಮ ಸುಮಂಗಲ್ ಢಕ್ ಜೀವನ್ ಭೀಮಾ ಯೋಜನೆ (Gram Sumangal Dak Jeevan Bhima Scheme) ಕುರಿತ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಮನೆಯಲ್ಲಿ ಚಿಕ್ಕ ಮಕ್ಕಳಿರುವವರು ಮಕ್ಕಳು ಚಿಕ್ಕವರಿದ್ದಾಗಲೇ ಈ ಯೋಜನೆಯಲ್ಲಿ ಹಣ ಹೂಡುತ್ತಾ ಬರುವುದು ಬಹಳ ಒಳ್ಳೆಯದು. ಯಾಕೆಂದರೆ ಭವಿಷ್ಯದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆ ಅಥವಾ ಉದ್ಯೋಗ ಸ್ಥಾಪನೆಗೆ ಈ ಹಣ ಅನುಕೂಲವಾಗುತ್ತದೆ. ಹೆಚ್ಚಿನ ಭಾರವಿಲ್ಲದೆ ಪ್ರತಿನಿತ್ಯ ಹಣಯ ಉಳಿತಾಯ ಮಾಡಿದ ರೀತಿಯು ಆಗುತ್ತದೆ ಹಾಗಾದ್ರೆ ಈ ಯೋಜನೆ ವೈಶಿಷ್ಟ್ಯಗಳೇನು ತಿಳಿಯೋಣ ಬನ್ನಿ.
ಈ ಸುದ್ದಿ ಓದಿ:- Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!
ಯೋಜನೆಯ ಹೆಸರು:- ಗ್ರಾಮ ಸುಮಂಗಲ್ ಢಕ್ ಜೀವನ್ ಭೀಮಾ ಯೋಜನೆ (Gram Sumangal Dak Jeevan Bhima Scheme)
* 19 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕನು ಈ ಯೋಜನೆಯಡಿ ಖಾತೆ ತೆರೆಯಬಹುದು
* 15 ವರ್ಷಗಳು ಹಾಗೂ 20 ವರ್ಷಗಳು ಎನ್ನುವ ಎರಡು ಅವಧಿಗೆ ಯೋಜನೆಯನ್ನು ಖರೀದಿಸಬಹುದು
* ಯೋಜನೆ ಖರೀದಿಸಲು ಕನಿಷ್ಠ ವಯಸ್ಸು – 45 ವರ್ಷಗಳು (15 ವರ್ಷಗಳ ಅವಧಿಗೆ)
* ಯೋಜನೆ ಖರೀದಿಸಲು ಗರಿಷ್ಠ ವಯಸ್ಸು 40 ವರ್ಷಗಳು (20 ವರ್ಷಗಳ ಅವಧಿಗೆ)
* ಈ ಯೋಜನೆಯಲ್ಲಿ ಒಂದು ನಿಗದಿತ ಮೊತ್ತದ ಪ್ರೀಮಿಯಮ್ ನ್ನು ನೀವು ಆರಿಸಿಕೊಂಡು ಮೆಚುರಿಟಿ ಅವಧಿಯವರೆಗೂ ಕೂಡ ಪ್ರತಿ ತಿಂಗಳು ಅದಕ್ಕೆ ನಿಗದಿಪಡಿಸಿಕೊಂಡಷ್ಟು ಪ್ರೀಮಿಯಂ ಹಣವನ್ನು ಪಾವತಿ ಮಾಡುತ್ತಾ ಇರಬೇಕು. ಉಳಿತಾಯ ಖಾತೆಯ ಮಾಹಿತಿ ನೀಡುವ ಮೂಲಕ ಆಟೋ ಡೆಬಿಟ್ ಆಗುವ ರೀತಿ ಕೂಡ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- LIC ಯಲ್ಲಿ ಖಾಲಿ ಇರುವ 7000 ಹುದ್ದೆಗಳ ನೇಮಕಾತಿ, ವೇತನ 78,230/-
* ಯೋಜನೆ ಮೂರು ವರ್ಷಗಳನ್ನು ಪೂರೈಸಿದ ಬಳಿಕ ಉಳಿತಾಯದ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಲಭ್ಯವಿದೆ
* ಅಂಚೆ ಕಚೇರಿಯಲ್ಲಿ ಮಾತ್ರವಲ್ಲದೇ ಯಾವುದೇ ಹಣಕಾಸಿನ ಸಂಸ್ಥೆಯಲ್ಲಿ ಕೂಡ ಈ ಯೋಜನೆ ಆಧಾರದ ಮೇಲೆ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆಯಬಹುದು.
* ಈ ಯೋಜನೆ ಕನಿಷ್ಠ ವಿಮಾ ಮೊತ್ತ ರೂ.10,000.
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ.
* ಉದಾಹರಣೆಯೊಂದಿಗೆ ವಿವರಿಸುವುದಾದರೆ ದಿನಕ್ಕೆ ರೂ.95 ಹೂಡಿಕೆ ಮಾಡಿದರೆ ಸಾಕು 15 ವರ್ಷದ ಅವಧಿಗೆ ನಿಮಗೆ ರೂ.14 ಲಕ್ಷ ರಿಟರ್ನ್ಸ್ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಗೆ ಭೇಟಿ ಕೊಡಿ.