ರಾಜ್ಯದ ರೈತರಿಗೆ (Farmers) ಕಳೆದ ವರ್ಷದ ಆರಂಭದಿಂದಲೂ ಕೂಡ ಮಳೆಯ ವ್ಯತ್ಯಾಸವಾಗಿರುವುದು ಬಹಳಷ್ಟು ನ’ಷ್ಟವನ್ನುಂಟು ಮಾಡಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 270ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿದ ತಾಲೂಕುಗಳು ಎಂದು ಕೇಂದ್ರ ಸರ್ಕಾರದ NDRF ಕೈಪಿಡಿ ಅನ್ವಯ ಘೋಷಣೆಯಾಗಿದೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಎರಡು ಕಂತುಗಳಲ್ಲಿ ರಾಜ್ಯದ ರೈತರ ಪಾಲಿಗೆ ಸಲ್ಲಬೇಕಾಗಿದ್ದ ಬರ ಪರಿಹಾರದ ಹಣವನ್ನು (drought Releaf Fund) ವರ್ಗಾವಣೆಯಾಗಿದೆ.
ಜನವರಿಯಲ್ಲಿ ಮೊದಲನೇ ಕಂತಿನ ಹಣ ಎಂದು ರಾಜ್ಯ ಸರ್ಕಾರ ಪ್ರತಿ ರೈತನಿಗೆ ರೂ.2000 ಬಿಡುಗಡೆಗೊಳಿಸಿತ್ತು ಈಗ ಈ ಹಣವನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರದಿಂದ ಬಂದ ಅನುದಾನದಲ್ಲಿ ಉಳಿದ ಹಣವನ್ನು ಯಶಸ್ವಿಯಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಮಳೆ ಆಶ್ರಿತ ಭೂಮಿ, ನೀರಾವರಿ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆದಿರುವ ಆಧಾರದ ಮೇಲೆ ಕೇಂದ್ರ ಸರ್ಕಾರವೇ ನಿರ್ಧರಿಸಿದಂತೆ ಎಕರೆಗೆ ಎಷ್ಟು ಎಂದು ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಈ ಹಣ ಪಡೆಯಲು ಎಲ್ಲರಿಗೂ ಸಾಧ್ಯವಾಗಿಲ್ಲ, ಕೆಲವರು ರೈತರು ಅರ್ಜಿ ಸಲ್ಲಿಸದೆ ಇರುವುದು ಅರ್ಜಿ ಸಲ್ಲಿಸಿದ್ದರೂ ನೀಡಿರುವ ದಾಖಲೆಗಳಲ್ಲಿ ವ್ಯತ್ಯಾಸ ಆಗಿರುವುದು.
ಈ ಸುದ್ದಿ ಓದಿ:- PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಹುದ್ದೆ ಒಟ್ಟು 11,250 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ
ಕಳೆದ 10 ವರ್ಷಗಳಿಂದ ಒಮ್ಮೆಯೂ ಆಧಾರ್ ಅಪ್ಡೇಟ್ ಮಾಡದೇ ಇರುವುದು, ಈ ಮೊದಲೇ ತಿಳಿಸಿದಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ರೈತರು FID ಪಡೆಯದೆ ಇರುವುದು ಇನ್ನೂ ಇತ್ಯಾದಿ ಕಾರಣಗಳು ಬರ ಪರಿಹಾರ ಹಣವನ್ನು ಬರದೇ ಇರುವುದಕ್ಕೆ ಕಾರಣಗಳಾಗಿವೆ. ಈಗ ಈ ಎರಡು ಕಂತುಗಳಲ್ಲಿ ಹಣವನ್ನು ಪಡೆಯಲಾಗದ ರೈತರಿಗೆ ಸಮಸ್ಯೆ ಪರಿಹರಿಸಿಕೊಂಡ ನಂತರ ಮೂರನೇ ಕಂತಿನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ಸರ್ಕಾರ ತಿಳಿಸಿದೆ.
ನೀವು ಕೂಡ ರೈತರಾಗಿದ್ದು ನಿಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎನ್ನುವ ಗೊಂದಲ ನಿಮಗೆ ಉಂಟಾಗಿದ್ದರೆ ಈ ಕೆಳಗಿನ ವಿಧಾನದ ಮೂಲಕ ಮಾಹಿತಿ ಪಡೆಯಿರಿ.
* https://parihara.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಿ
* ವರ್ಷ (Year), ಋತು (Season), ವಿಪತ್ತಿನ ವಿಧ (Calamity Type), ಜಿಲ್ಲೆ (District), ತಾಲ್ಲೂಕು (Taluk), ಹೋಬಳಿ (Hobli), ಗ್ರಾಮ (Village) ಇವುಗಳಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ.
* ವರ್ಷ – 2023-24, ಋತು-Khariff, ವಿಪತ್ತಿನ ವಿಧ-drought ಮತ್ತೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೋಬಳಿ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ.
* ಪಾವತಿ ವಿಫಲ ಪ್ರಕರಣಗಳು (Payment failed Cases) ಪಾವತಿ ಯಶಸ್ಸಿನ ಪ್ರಕರಣಗಳು (Payment Success Cases) ಎನ್ನುವ ಎರಡು ಆಯ್ಕೆಗಳು ಇರುತ್ತವೆ. ಇದರಲ್ಲಿ ಮೊದಲು ಪಾವತಿ ಯಶಸ್ಸಿನ ಪ್ರಕರಣಗಳನ್ನು ಪರಿಶೀಲಿಸಲು ಇದರ ಮೇಲೆ ಕ್ಲಿಕ್ ಮಾಡಿ ಹಸಿರು ಅಕ್ಷರಗಳಲ್ಲಿ ಬ್ಲಿಂಕ್ ಆಗುತ್ತದೆ ಆಗ ವರದಿ ಪಡೆಯಿರಿ (get report) ಅನ್ನುವುದರ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- 11 ಕೋಟಿ ಪಾನ್ ಕಾರ್ಡ್ ರದ್ದು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ
* ಇದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಬೆಳೆ ಪರಿಹಾರವಾದ ದಿನಾಂಕ, ನಿಮ್ಮ ಹೆಸರು, ನಿಮ್ಮ ಆಧಾರ್ ನ ಕೊನೆಯ 4 ಸಂಖ್ಯೆಗಳು, ಯಾವ ಕಂತಿನಲ್ಲಿ ಎಷ್ಟು ಹಣ ವರ್ಗಾವಣೆ ಆಗಿದೆ, ಎನ್ನುವ ಪೂರ್ತಿ ಡೀಟೇಲ್ಸ್ ಸಿಗುತ್ತದೆ. ಇದಿಷ್ಟೇ ಅಲ್ಲದೆ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲಾ ಬರ ಪರಿಹಾರದ ಹಣ ವರ್ಗಾವಣೆ ಆಗಿದೆ ಈ ಡಿಟೈಲ್ಸ್ ಕೂಡ ಸಿಗುತ್ತದೆ.
* ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದಲ್ಲಿ ಇದೇ ರೀತಿಯಾಗಿ ಪಾವತಿ ವಿಫಲ ಪ್ರಕರಣಗಳು ಎನ್ನುವುದರ ಮೇಲೆ ಕ್ಲಿಕ್ ಮಾಡಿ ಆ ಪಟ್ಟಿಯಲ್ಲಿ ಹೆಸರು ಇರುತ್ತದೆ ಚೆಕ್ ಮಾಡಿ ನೋಡಿ.