ಮನೆ ಕಟ್ಟುವಾಗ ಮರಳು, ಸಿಮೆಂಟ್, ಮಣ್ಣಿನ ಜೊತೆ ಇಟ್ಟಿಗೆ ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುವ ಒಂದು ವಸ್ತುವಾಗಿದೆ. ಮನೆ ಕಟ್ಟುತ್ತಿದ್ದೇವೆ ಎಂದರೆ ಇಟ್ಟಿಗೆ ಖರೀದಿಸುವುದಕ್ಕಾಗಿ ಒಂದು ದೊಡ್ಡ ಮೊತ್ತದ ಹಣವನ್ನು ಎತ್ತಿಡಬೇಕು ಬಹಳ ವರ್ಷಗಳ ಹಿಂದೆ ಕೇವಲ ಮಣ್ಣಿನಿಂದಲೇ ಮನೆಗಳನ್ನು ಕಟ್ಟುತ್ತಿದ್ದರು ಈಗ ಅಂತಹ ಮನೆಗಳು ಕಾಣ ಸಿಗುವುದು ಬಹಳ ವಿರಳ.
ಆಮೇಲೆ ಮಣ್ಣಿಂದ ಮಾಡಿದ ಇಟ್ಟಿಗೆಗಳನ್ನು ತಯಾರಿಸುವ ಅಭ್ಯಾಸ ಶುರುವಾಯಿತು, ಈಗ ಮುಂದುವರೆದು ನಾನಾ ವಿಧಾನದ ಇಟ್ಟಿಗೆಗಳು ಬಂದಿವೆ. ಇಂದು ಮಾರ್ಕೆಟ್ ನಲ್ಲಿ ಈ ಕೆಂಪಿಟ್ಟಿಗೆ ಮಾತ್ರವಲ್ಲ ಸಿಮೆಂಟ್ ಬ್ರಿಕ್ಸ್ ಗಳು, ಇಂಟರ್ಲಾಕ್ ಇಟ್ಟಿಗೆಗಳು, ಹಾಲೋ ಬ್ಲಾಕ್ ಇನ್ನು ಹತ್ತಾರು ಬಗೆಯ ಇಟ್ಟಿಗೆಗಳು ಬಂದಿವೆ. ಇವುಗಳಲ್ಲಿ ಯಾವುದನ್ನು ಬಳಸುವುದು ಸೂಕ್ತ ಹಾಗೂ ಮನೆಯ ಯಾವ ಭಾಗಕ್ಕೆ ಯಾವ ಅಳತೆಯ ಇಟ್ಟಿಗೆಗಳನ್ನು ಬಳಸಬೇಕು ಎನ್ನುವುದ ಡೀಟೇಲ್ಸ್ ಹೀಗಿದೆ.
ಈ ಸುದ್ದಿ ಓದಿ:- PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಹುದ್ದೆ ಒಟ್ಟು 11,250 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ
500sq.ft ಮನೆ ಕಟ್ಟುವುದಾದರೆ ಯಾವ ಇಟ್ಟಿಗೆ ಎಷ್ಟು ಬೇಕಾಗುತ್ತದೆ ಪಟ್ಟಿ ಹೀಗಿದೆ.
* ASE ಬ್ಲಾಕ್ ಇದನ್ನು ವೇಟ್ ಲೆಸ್ ಬ್ಲಾಕ್ ಎಂದು ಕೂಡ ಕರೆಯುತ್ತಾರೆ. ಇದು 2 ಅಡಿ ಉದ್ದ, 8 ಇಂಚು ಎತ್ತರ ಮತ್ತು ಅಗಲ 4 ಇಂಚು, 6 ಇಂಚು, 8 ಇಂಚು, 9 ಇಂಚು ಹೀಗೆ ಬೇಕಾದ ಅಳತೆಯಲ್ಲಿ ಸಿಗುತ್ತದೆ.
* 6 ಇಂಚಿನ ಬ್ಲಾಕ್ ಗಳನ್ನು ಖರೀದಿಸಿದರೆ 500sq.ft ಮನೆಗೆ ಸುಮಾರು 750 ಕ್ಕಿಂತ ಹೆಚ್ಚು ಬ್ರಿಕ್ ಗಳು ಬೇಕಾಗುತ್ತದೆ. ಒಂದು ಬ್ಲಾಕ್ ಬೆಲೆ ರೂ.90 ಆದರೂ ರೂ.68,000 ಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ, ಇದೇ 8 ಇಂಚಿನ ಬ್ಲಾಕ್ ಬಳಸಿದರೆ ಒಂದು ಇಟ್ಟಿಗೆ ರೂ.120 ಆದರೂ ರೂ.90,700 ಹೆಚ್ಚು ಹಣ ಬೇಕಾಗುತ್ತದೆ.
* ಈ ASE ಬ್ಲಾಕ್ ಗಳನ್ನು ಕಾಲಂ ಪೋಸ್ಟ್ ಸ್ಟ್ರಕ್ಚರ್ ನಿಲ್ಲಿಸದೆ ಮೋಲ್ಡ್ ಹಾಕುವ ಮನೆಗಳಿಗೆ ಮಾತ್ರ ಬಳಸಬಹುದು. ಕಾಲಂ ಪೋಸ್ಟ್ ಸ್ಟ್ರಕ್ಚರ್ ನಿಲ್ಲಿಸದೇ ಬೋಲ್ಡ್ ಹಾಕುವ ಮನೆಗಳಿಗೆ ಬಳಸದೇ ಇರುವುದು ಉತ್ತಮ.
ಈ ಸುದ್ದಿ ಓದಿ:- ಈ ರೈತರಿಗೆ 3ನೇ ಕಂತಿನ ಬೆಳೆ ಹಾನಿ ಪರಿಹಾರ ಬಿಡುಗಡೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ತಿಳಿಯಲು ಈ ರೀತಿ ಚೆಕ್ ಮಾಡಿ.!
* ಹ್ಯಾಲೋ ಬ್ಲಾಕ್ 16 ಇಂಚು ಉದ್ದ, 8 ಇಂಚು ಎತ್ತರ ಮತ್ತು 4 ಇಂಚು, 6 ಇಂಚು, 8 ಇಂಚು ಹೀಗೆ ಹಲವಾರು ರೀತಿಯಲ್ಲಿ ಸಿಗುತ್ತದೆ. ಇದರಲ್ಲಿ 6 ಇಂಚಿನ ಬ್ಲಾಕ್ ಖರೀದಿಸಿದರೆ 500 sq.ft ಅಳತೆಗೆ 1250 ಬ್ಲಾಕ್ ಬೇಕಾಗುತ್ತದೆ. ಒಂದು ಬ್ಲಾಕ್ ನ ಬೆಲೆ ರೂ.28 ಎಂದರೂ 500 sq.ft ಮನೆಗೆ ರೂ.32,200 ಹಣ ಖರ್ಚಾಗುತ್ತದೆ. 8 ಇಂಚಿನ ಬ್ಲಾಕ್ ಬಳಸಿದರೆ ಒಂದು ಬ್ಲಾಕ್ ಬೆಲೆ ರೂ.32 ಆದರೆ 1150 ಬ್ಲಾಕ್ ಗೆ ರೂ.38,600 ಖರ್ಚು ತಗಲುತ್ತದೆ.
* ಈ ಹಾಲೋ ಬ್ಲಾಕ್ ಗಳನ್ನು ಫ್ರೇಮ್ಡ್ ಸ್ಟ್ರಕ್ಚರ್, ಕಾಂಪೌಂಡ್ ನಿರ್ಮಾಣ, ಹೆಂಚಿನ ಮನೆ, ಶೀಟಿನ ಮನೆ ಕಟ್ಟಲು ಬಳಸುತ್ತಾರೆ.
* ಈ ಹಾಲೋ ಬ್ರಾಕ್ ಗಳನ್ನು ಲೋ ಬೇರಿಂಗ್ ಸ್ಟ್ರಕ್ಚರ್, ಕಾಲಂ ಮತ್ತು ಭೀಮ್ ಇಲ್ಲದೆ ನಿರ್ಮಿಸಲಾಗುವ ಮನೆ ಕಟ್ಟಲು ಬಳಸಬಾರದು
* ಇನ್ನು ಕೆಂಪಿಟ್ಟಿಗೆ ಬಳಕೆ ಬಗ್ಗೆ ಹೇಳುವುದಾದರೆ, 500Sq.ft ಗೆ 10,000 ಇಟ್ಟಿಗೆ ಬೇಕಾಗುತ್ತದೆ. ಒಂದು ಇಟ್ಟಿಗೆಗೆ ರೂ.10 ಆದರೂ ರೂ.1,00,000 ದ ಮೇಲೆ ಇಟ್ಟಿಗೆಗಾಗಿ ಖರ್ಚು ಮಾಡಬೇಕಾಗುತ್ತದೆ. ಈ ಕೆಂಪು ಇಟ್ಟಿಗೆಗಳನ್ನು ಎಲ್ಲಾ ವಿಧವಾದ ಮನೆ ಕಟ್ಟಲು ಬಳಸಬಹುದು.