ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪ ಎಂದು ಸಹ ಕರೆಯುತ್ತಾರೆ ಹಬ್ಬ ಹರಿದಿನಗಳಲ್ಲಿ ನಾವು ಕಾಮಾಕ್ಷಿ ದೀಪವನ್ನು ಹಚ್ಚುತ್ತೇವೆ ನಾವು ಕಾಮಾಕ್ಷಿ ದೀಪವನ್ನು ಹೆಚ್ಚುವುದರಿಂದ ನಮಗೆ ಸಾಕಷ್ಟು ರೀತಿಯ ಲಾಭಗಳು ಇದೆ ಕಾಮಾಕ್ಷಿ ದೀಪ ಹೇಗಿರಬೇಕು ಎಂದರೆ ಶ್ರೀ ಲಕ್ಷ್ಮಿ ಮಧ್ಯಭಾಗದಲ್ಲಿ ಪದ್ಮಾಸನದಲ್ಲಿ ಕುಳಿತಿದ್ದು ಎರಡು ಕಡೆ ಆನೆಗಳು ಇದ್ದರೆ ಅದೇ ಗಜಲಕ್ಷ್ಮಿ ದೀಪ ಅಥವಾ ಕಾಮಾಕ್ಷಿ ದೀಪ ಎಂದು ಕರೆಯುತ್ತಾರೆ. ನಮ್ಮ ಮನೋ ಕಾಮನೆಗಳನ್ನು ಹೀಡೇರಿಸುವಂತಹ ಕಾಮಾಕ್ಷಿ ದೇವಿಗೆ ಮುಕ್ಕೋಟಿ ದೇವತೆಗಳು ಕಾಮಾಕ್ಷಿಗೆ ಶಕ್ತಿಯನ್ನು ನೀಡಿದ್ದಾರೆ ಎಂದು ನಂಬಿಕೆ ಇದೆ ಅದಕ್ಕಾಗಿ ಯಾವುದೇ ಒಂದು ಶುಭ ಕಾರ್ಯಗಳಲ್ಲಿ ಮನೆಗಳಲ್ಲಿ ಯಾವುದೇ ಒಂದು ಕೆಲಸಗಳು ಆಗಬೇಕು ಎಂದರು ಕೂಡ ಕಾಮಾಕ್ಷಿ ದೀಪವನ್ನು ಬೆಳಗಿಸುತ್ತಾರೆ.
ಕಾಮಾಕ್ಷಿಯನ್ನು ಆರಾಧನೆ ಮಾಡುವಂತಹದ್ದು ತುಂಬಾ ವಿಶೇಷ ಕಾಮಾಕ್ಷಿ ಅಮ್ಮನವರು ನಮ್ಮ ಬಾಳಿಗೆ ಬೆಳಕನ್ನು ನೀಡುವಂತಹ ಮಹಾ ತಾಯಿ ಆಗಿರುವುದರಿಂದ ಆಕೆಯನ್ನು ಜ್ಯೋತಿಯ ರೂಪದಲ್ಲಿ ಬೆಳಗಿಸಲಾಗುತ್ತದೆ. ಕಾಮಾಕ್ಷಿ ದೀಪಗಳನ್ನು ಹಚ್ಚುವುದರಿಂದ ಮನೆಯಲ್ಲಿ ಶಾಂತಿ ಸಮೃದ್ಧಿ ಎನ್ನುವಂತಹದ್ದು ನೆಲೆಸುತ್ತದೆ ಎನ್ನುವುದು ನಮ್ಮ ಹಿರಿಯರ ನಂಬಿಕೆ. ಮನೆಗಳಲ್ಲಿ ಬಹಳ ಹಿಂದಿನಿಂದಲೂ ಚಿನ್ನದ ಮತ್ತು ಬೆಳ್ಳಿಯ ಕಾಮಾಕ್ಷಿ ದೀಪಗಳು ಇಟ್ಟುಕೊಂಡಿರುತ್ತಾರೆ ಹಾಗೆ ಇತ್ತೀಚಿನ ದಿನಗಳಲ್ಲಿ ಕಾಮಾಕ್ಷಿ ದೀಪವನ್ನು ಹೇಗೆ ಹಚ್ಚಬೇಕು ಎನ್ನುವಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಇನ್ನು ಕೆಲವರಿಗೆ ಕಾಮಾಕ್ಷಿ ದೀಪದ ಬಗ್ಗೆ ಅರಿವು ಸಹ ಇರುವುದಿಲ್ಲ ಹಾಗಾಗಿ ಒಂದು ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿಯೊಬ್ಬರ ಮನೆಯಲ್ಲಿ ಹಚ್ಚಬೇಕು ಎನ್ನುವಂತಹದ್ದು ಹಿರಿಯರ ಅಭಿಪ್ರಾಯ. ಕಾಮಾಕ್ಷಿ ದೀಪವನ್ನು ಪ್ರತಿದಿನ ಮನೆಗಳಲ್ಲಿ ಆಫೀಸ್ ಗಳಲ್ಲಿ ಹಣಕಾಸು ವ್ಯವಹಾರಗಳನ್ನು ಮಾಡುವಂತಹ ಸ್ಥಳಗಳಲ್ಲಿ ಹಚ್ಚುವುದರಿಂದ ವಿಶೇಷವಾದ ಫಲಗಳು ದೊರೆಯುತ್ತದೆ.
ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ಕೊಂಡು ತಂದಾಗ ಅಥವಾ ಯಾರಾದರೂ ನಮಗೆ ಉಡುಗೊರೆಯಾಗಿ ನೀಡಿದಾಗ ಕೂಡಲೇ ನಾವು ಮನೆಗೆ ತಂದು ಶುದ್ಧವಾದ ನೀರಿನಿಂದ ಹುಣಸೆಹಣ್ಣಿನಿಂದ ಅದನ್ನು ತೊಳೆದು ಶುಭ್ರವಾದಂತ ವಸ್ತ್ರದಿಂದ ಅದನ್ನು ಒರೆಸಿ ಇಡಬೇಕು ಹಾಗೆ ಇದನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ಮಣೆಯ ಮೇಲೆ ಅಥವಾ ಹಲಗೆಯ ಮೇಲೆ ಒಂದು ತಾಮ್ರ ಇತ್ತಾಳೆ ಬೆಳ್ಳಿಯ ತಟ್ಟೆಯನ್ನು ಇದನ್ನು ಇಡಬೇಕು. ಅದಕ್ಕೂ ಮೊದಲು ಆ ತಟ್ಟೆಯಲ್ಲಿ ಅಕ್ಕಿ ಹಿಟ್ಟಿನಿಂದ ಅಷ್ಟದಳ ರಂಗೋಲಿಯನ್ನು ಹಾಕಿ ನಂತರ ಕಾಮಾಕ್ಷಿ ದೀಪವನ್ನು ಇಡಬೇಕು ಇನ್ನು ಕೆಲವರು ವೀಳ್ಯದೆಲೆಯನ್ನು ಇಟ್ಟು ನಂತರ ದೀಪವನ್ನು ಇಡುತ್ತಾರೆ.
ಹಾಗೆಯೇ ನಾವು ಅರಿಶಿಣ ಕುಂಕುಮ ಇಟ್ಟು ಪೂಜೆ ಪೂಜಿಸಬೇಕು ಇದರ ಸುತ್ತಲೂ ಸಹ ಹೂವಿನಿಂದ ಅಲಂಕಾರವನ್ನು ಮಾಡಬೇಕು ಎರಡು ಬತ್ತಿಗಳನ್ನು ಇಟ್ಟು ಹಚ್ಚಬೇಕು ಹಾಗೆ ದೀಪವನ್ನು ಹಚ್ಚುವಂತಹ ಸಂದರ್ಭದಲ್ಲಿ ಬೆಂಕಿ ಕಡ್ಡಿಯಿಂದ ಅಥವಾ ಮೇಣದ ಬತ್ತಿಯಿಂದ ನೇರವಾಗಿ ಕಾಮಾಕ್ಷಿ ದೀಪದಲ್ಲಿ ಇರುವಂತಹ ಬತ್ತಿಗಳನ್ನು ಹಚ್ಚಬಾರದು ಇದು ತುಂಬಾ ಮುಖ್ಯವಾದಂತಹ ವಿಷಯ ಹೀಗೆ ಮಾಡುವುದರಿಂದ ಶ್ರೀ ಲಕ್ಷ್ಮಿ ಅಥವಾ ಐಶ್ವರ್ಯ ಲಕ್ಷ್ಮಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಆದ್ದರಿಂದ ತುಪ್ಪದಲ್ಲಿ ನೆನೆಸಿರುವಂತಹ ಬತ್ತಿಗಳಿಂದ ಅಥವ ಒಣಗಿರುವಂತಹ ತುಳಸಿ ಕಷ್ಟದಿಂದ ಕಾಮಾಕ್ಷಿ ದೀಪವನ್ನು ಹಚ್ಚಬೇಕು ಹೀಗೆ ಮಾಡುವುದು ಶ್ರೇಷ್ಠ. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ ನೀವು ನೇರವಾಗಿ ಬೆಂಕಿ ಕಡ್ಡಿಯಿಂದ ನೇರವಾಗಿ ಕಾಮಾಕ್ಷಿ ದೀಪವನ್ನು ಹತ್ತಿಸಿದರೆ ನಿಮಗೆ ಶನಿದೋಷ ಎನ್ನುವಂತಹದ್ದು ಉಂಟಾಗುತ್ತದೆ.