ಅಪ್ಪು ಎನ್ನುವಂತಹ ದೈತ್ಯ ವ್ಯಕ್ತಿತ್ವವನ್ನು ಬಹುಶಃ ನಮ್ಮ ಜೀವಮಾನದಲ್ಲಿ ನಾವು ನೋಡಿರಲಕಿಲ್ಲ ಅಷ್ಟೊಂದು ಮುಗ್ಧ ಮನಸ್ಸಿನ ವ್ಯಕ್ತಿ ಈಗ ನಮ್ಮ ಜೊತೆಯಲ್ಲಿ ಇಲ್ಲ ಎಂದು ನೆನೆಪು ಮಾಡಿಕೊಳ್ಳುವುದಕ್ಕೂ ಸಹ ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಯಾವುದೇ ಶುಭ ಸಮಾರಂಭಗಳು ಆದರೂ ಅಪ್ಪು ಅವರನ್ನು ನೆನೆಯುದೇ ಆ ಕಾರ್ಯಕ್ರಮವನ್ನು ಚಾಲನೆ ನೀಡುವುದೇ ಇಲ್ಲ, ಅಪ್ಪು ಅವರನ್ನು ನೆನೆದು ಕಾರ್ಯಕ್ರಮವನ್ನು ನೆರವೇರಿಸಿದರೆ ಎಲ್ಲರಿಗೂ ಸಂತೋಷವನ್ನು ಉಂಟು ಮಾಡುತ್ತದೆ ಅಷ್ಟೇ ಅಲ್ಲದೆ ಕಾರ್ಯಕ್ರಮಕ್ಕೆ ಒಂದು ಕಳೆ ಎನ್ನುವಂತಹದ್ದು ಸಿಗುತ್ತದೆ ಆದ್ದರಿಂದ ಯಾವುದೇ ಒಂದು ಕಾರ್ಯಕ್ರಮಗಳು ಆದರೂ ಸಹಿತ ಅಪ್ಪು ಅವರನ್ನು ನೆನೆದು ನಂತರದಲ್ಲಿ ಕಾರ್ಯಕ್ರಮವನ್ನು ಪ್ರಾರಂಭ ಮಾಡುತ್ತಾರೆ.
ಇದೀಗ ನಮ್ಮ ಕರುನಾಡಿನಲ್ಲಿ ದಸರಾ ಹಬ್ಬದ ಉತ್ಸವ ಪ್ರಾರಂಭವಾಗಿದೆ ಎಲ್ಲೆಲ್ಲಿಯೂ ಕೂಡ ಈ ಒಂದು ದಸರ ಸಂಭ್ರಮ ಮನೆ ಮಾಡಿದೆ ಎಂದು ಹೇಳಬಹುದು ಇದೀಗ ಯುವ ದಸರಾ ಪ್ರಾರಂಭವಾಗಿದ್ದು ಈ ಒಂದು ಯುವ ದಸರಾಗೆ ಸಾಕಷ್ಟು ಜನ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಯುವ ದಸರಾದ ಸಂಭ್ರಮವನ್ನು ನಟ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಈ ಒಂದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಅಂತಹ ಸಂದರ್ಭದಲ್ಲಿ ಅಪ್ಪು ಅವರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಅವರು ನೆರವೇರಿಸಿ ಕೊಡುತ್ತಿದ್ದು ಇವರ ನಿರೂಪಣೆಯನ್ನು ಎಲ್ಲರೂ ಸಹ ತುಂಬಾ ಇಷ್ಟಪಡುತ್ತಾರೆ ಅಷ್ಟೇ ಅಲ್ಲದೆ ಆಂಕರ್ ಅನುಶ್ರೀ ಅವರು ನಟ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ.
ಈ ವಿಷಯವನ್ನು ಸಾಕಷ್ಟು ವೇದಿಕೆಗಳಲ್ಲಿ ಅನುಶ್ರೀ ಅವರು ಹೇಳಿಕೊಂಡಿದ್ದಾರೆ. ಯುವದ ಸರ ವೇದಿಕೆಯಲ್ಲಿ ಸಾಕಷ್ಟು ನಟರುಗಳು ಭಾಗಿಯಾಗಿದ್ದು ಅದರಲ್ಲಿ ಸಾಧು ಕೋಕಿಲ ಅವರು ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಸ್ಟೇಜ್ ಮೇಲೆ ಮಾತನಾಡುವಾಗ ಸಾಧುಕೋಕಿಲ ಅವರು ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದಾರೆ ಅಪ್ಪು ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ಅವರು ನಮ್ಮ ಜೊತೆಯಲ್ಲಿ ಯಾವಾಗಲೂ ಇದ್ದೇ ಇರುತ್ತಾರೆ ಅವರು ಅಜರಾಮರ ಎಂದು ಹೇಳುವ ಮುಖಾಂತರ ಅಪ್ಪು ಅವರನ್ನು ನೆನೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರಿಗಾಗಿ ಒಂದು ಭಾವನಾತ್ಮಕ ಹಾಡನ್ನು ಸಹ ಹಾಡಿದ್ದಾರೆ ಈ ಹಾಡನ್ನು ಕೇಳಿದಂತಹ ಎಲ್ಲರಿಗೂ ಸಹ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತದೆ ಅದರಂತೆ ಅನುಶ್ರೀ ವೇದಿಕೆಯ ಮೇಲೆ ಇದ್ದಂತಹ ಅನುಶ್ರೀ ಅವರು ಸಹ ಇವರ ಹಾಡನ್ನು ಕೇಳಿ ಕಣ್ಣೀರನ್ನು ಹಾಕಿದ್ದಾರೆ.
ಬದುಕಿದ್ದಾಗ ಸಾಧನೆ ಮಾಡಿ ಜನರಿಂದ ಹೊಗಳಿಸಿಕೊಳ್ಳುವುದು ದೊಡ್ಡದಲ್ಲ ಆದರೆ ನಾವು ಎಲ್ಲರನ್ನೂ ಅಗಲಿದ ನಂತರವೂ ಜನರು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಆರಾಧ್ಯ ದೈವದಂತೆ ಪೂಜೆ ಮಾಡುವುದು ದೊಡ್ಡ ಸಾಧನೆ ಎಂದು ಹೇಳಬಹುದು ಆ ಒಂದು ಸಾಲಿನಲ್ಲಿ ನಮ್ಮ ನಿಮ್ಮೆಲ್ಲರ ನಟ ಪುನೀತ್ ರಾಜ್‌ಕುಮಾರ್ ಅವರು ಸೇರಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ಅಭಿಮಾನಿಗಳ ಮನಸ್ಸಿನಲ್ಲಿ ದೇವರ ಹಾಗೆ ಕುಳಿತುಕೊಂಡಿದ್ದಾರೆ ಎಷ್ಟೋ ಜನರು ತಮ್ಮ ದೇವರ ಮನೆಯಲ್ಲಿ ಅಪ್ಪು ಅವರ ಫೋಟೋವನ್ನು ಇಟ್ಟುಕೊಂಡು ದೇವರು ಎಂದು ಪೂಜೆಯನ್ನು ಸಹ ಮಾಡುತ್ತಿದ್ದಾರೆ. ನಿಮಗೂ ಸಹ ಪುನೀತ್ ರಾಜ್‌ಕುಮಾರ್ ಅವರು ದೇವರು ಎನಿಸಿದರೆ ತಪ್ಪದೆ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ.