ಸರಳತೆಯ ಸಾಹುಕಾರ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಹಗಲಿ ಆರು ತಿಂಗಳುಗಳು ಆಗಿದ್ದರಯ ಸಹ ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಷ್ಟರ ಮಟ್ಟಿಗೆ ನಮ್ಮ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅಭಿಮಾನಿಗಳಾಗಿ ನಮಗೆ ಇಷ್ಟೊಂದು ನೋವು ಉಂಟಾಗುವಾಗ ಅವರ ಪತ್ನಿಯ ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರ ಮಕ್ಕಳು ಎಷ್ಟು ನೋವು ಅನುಭವಿಸುತ್ತಿದ್ದಾರೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಒಬ್ಬ ಹೆಮ್ಮೆಯ ಮೇರು ನಟನನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ನಷ್ಟ ಎಂದು ಹೇಳಬಹುದು. ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವಂತಹ ಪುನೀತ್ ರಾಜ್ ಕುಮಾರ್ ಅವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ತಮ್ಮ ಅಮೂಲ್ಯವಾದಂತ ಸೇವೆಯನ್ನು ಸಾಕಷ್ಟು ಜನರಿಗೆ ನೀಡಿದ್ದಾರೆ.
ಅದೆಷ್ಟೋ ಅನಾಥರು ಇವರಿಂದ ಸಹಾಯ ಪಡೆದುಕೊಂಡಿದ್ದಾರೆ ಹಾಗೆ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಇವರು ವಿದ್ಯಾಭ್ಯಾಸವನ್ನು ನೀಡಿದ್ದಾರೆ ಅಷ್ಟು ಉದಾರ ಮನೋಭಾವವನ್ನು ಹೊಂದಿದ್ದರು. ಪುನೀತ್ ರಾಜ್ ಕುಮಾರ್ ಅವರು ತಮ್ಮ ಜೀವಮಾನದಲ್ಲಿ ಮಾಡಬೇಕಾಗಿದ್ದಂತಹ ಕೆಲಸಗಳನ್ನೆಲ್ಲ ಕೆಲವೇ ಸಮಯದಲ್ಲಿ ಮಾಡಿ ಮುಗಿಸಿ ಇಹ ಲೋಕವನ್ನು ತ್ಯಜಿಸಿದ್ದಾರೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪತ್ನಿ ಅಶ್ವಿನಿ ಅವರನ್ನು ಪ್ರೀತಿಸಿ ಅವರ ಕೈ ಹಿಡಿದಿದ್ದರು. ಮಂಗಳೂರಿನ ಮೂಲದವರಾದ ಅಶ್ವಿನಿ ಅವರು ಅವರು ತಮ್ಮ ಸ್ನೇಹಿತರ ಮುಖಾಂತರ ಪರಿಚಯವಾಗಿದ್ದರು. ನಂತರದಲ್ಲಿ ಸ್ನೇಹ ಪ್ರೀತಿಗೆ ತಿರುಗಿ ನಟ ಪುನೀತ್ ಅಶ್ವಿನಿ ಅವರಿಗೆ ಪ್ರೀತಿಸುವ ವಿಷಯವನ್ನು ತಿಳಿಸುತ್ತಾರೆ.
ಇದಕ್ಕೆ ಒಪ್ಪಿಗೆಯನ್ನು ಸೂಚಿಸಿದಂತಹ ಅಶ್ವಿನಿ ಅವರು ಕೆಲವು ವರ್ಷಗಳ ಕಾಲ ಇಬ್ಬರು ಸಹ ಪ್ರೀತಿಯಲ್ಲಿ ಇರುತ್ತಾರೆ ನಂತರದಲ್ಲಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂದೆಗೆ ಪ್ರೀತಿಯ ವಿಷಯವನ್ನು ಹೇಳಲು ಭಯಪಡುವಂತಹ ಸಂದರ್ಭದಲ್ಲಿ ತಮ್ಮ ಅಣ್ಣನಾದಂತಹ ಶಿವರಾಜ್ ಕುಮಾರ್ ಅವರ ಬಳಿ ವಿಷಯವನ್ನು ಹೇಳಿಕೊಳ್ಳುತ್ತಾರೆ ನಂತರದಲ್ಲಿ ಶಿವರಾಜ್ ಕುಮಾರ್ ಅವರು ಪುನೀತ್ ಮತ್ತು ಅಶ್ವಿನಿ ಅವರ ಪ್ರೀತಿಯ ವಿಷಯವನ್ನು ಡಾಕ್ಟರ್ ರಾಜ್ ಕುಮಾರ್ ಅವರ ಹತ್ತಿರ ಹೇಳಿದಾಗ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪಿಗೆಯನ್ನು ಸೂಚಿಸುತ್ತಾರೆ. ಎಲ್ಲಾ ಗುರು ಹಿರಿಯರ ಒಪ್ಪಿಗೆ ಮೇರೆಗೆ ಡಿಸೆಂಬರ್ 1 1999ರಲ್ಲಿ ಅಶ್ವಿನಿ ಮತ್ತು ಅಪ್ಪು ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಈ ಇಬ್ಬರು ಸಹ ಅನ್ಯೋನ್ಯವಾದಂತಹ ದಾಂಪತ್ಯ ಜೀವನವನ್ನು ನಡೆಸುತ್ತಾ ಇರುತ್ತಾರೆ ಇವರಿಗೆ ಧೃತಿ ಮತ್ತು ವಂದಿತ ಎನ್ನುವಂತಹ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದಾರೆ.
ಇನ್ನು ಈ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ ಹಾಗೆಯೇ ತಮ್ಮ ತಂದೆಯ ಹಾದಿಯಲ್ಲಿ ನಡೆಯಬೇಕು ಅವರಂತೆಯೇ ಜನ ಸೇವೆಯನ್ನು ಮಾಡಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿದ್ದಾರೆ. ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡು ತಮ್ಮ ಪ್ರೀತಿಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಇದ್ದರು. ಈ ಫೋಟೋಗಳನ್ನು ಅಶ್ವಿನಿ ಅವರು ನೆನೆದು ಭಾವುಕರಾಗಿದ್ದಾರೆ. ವಿಧಿಯು ಅಪ್ಪು ಅಂತಹ ಒಳ್ಳೆಯ ವ್ಯಕ್ತಿಯ ಜೊತೆ ಎಷ್ಟು ಕ್ರೂರವಾಗಿ ಆಟವಾಡಿದೆ ಎಂದು ನೆನಪು ಮಾಡಿಕೊಂಡರೆ ತುಂಬಾ ಬೇಸರವಾಗುತ್ತದೆ. ಅಪ್ಪು ಮತ್ತು ಅಶ್ವಿನಿ ಅವರ ಮದುವೆಯ ಸುಂದರ ಫೋಟೋವನ್ನು ನೋಡಲು ಮೇಲಿನ ವಿಡಿಯೋ ನೋಡಿ.