ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಇದೇ ಅಕ್ಟೋಬರ್ 3 ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಜನ್ಮದಿನವನ್ನು ಅಭಿಮಾನಿಗಳು ಇನ್ನು ವಿಶೇಷವನ್ನಾಗಿ ಮಾಡಿದ್ದಾರೆ ತಮ್ಮ ಸಿನಿಮಾ ಪಯಣವನ್ನು ಈಗಷ್ಟೇ ಶುರು ಮಾಡಿದ ಅಭಿಷೇಕ್ ಅವರು ಸಿನಿಮಾ ಗೆ ಬರುವ ಮುಂಚೆಯೇ ಅಂಬರೀಶ್ ಅವರ ಅಭಿಮಾನಿಗಳು ಇವರ ಹುಟ್ಟು ಹಬ್ಬವನ್ನು ಬಂದು ಮನೆಯ ಹತ್ತಿರ ಆಚರಿಸುತ್ತಿದ್ದರು ಈಗ ಹೀರೋ ಆಗಿದ್ದು ಇವರ ಹುಟ್ಟುಹಬ್ಬವನ್ನು ಅಭಿಮಾನಿಗಳು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಹೌದು, ಅಕ್ಟೋಬರ್ 3 ರಂದು ಅಭಿಷೇಕ್ ಅಂಬರೀಶ್ ಅವರ ಜನ್ಮದಿನ ಇದ್ದು ಈ ಜನ್ಮದಿನದ ವಿಶೇಷವಾಗಿ ಅಭಿಮಾನಿಗಳು ಹಾಗೆಯೇ ಸುಮಲತಾ ಅಂಬರೀಶ್ ಅವರು ಅಭಿಷೇಕ್ ಅವರಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಅಮರ್ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಅಭಿಷೇಕ್ ಒಂದು ವಿಶೇಷವಾದಂತಹ ಕಥೆಯುಳ್ಳ ಚಿತ್ರವಾಗಿತ್ತು ರೆಬಲ್ ಸ್ಟಾರ್ ಅಂಬರೀಶ್ ಅವರು ನಿರ್ವಹಿಸಿದ್ದ ಚಿತ್ರಗಳ ಕ್ಯಾರೆಕ್ಟರ್ ನಲ್ಲೂ ಸಹ ಅಮರ್ ಎಂಬ ಹೆಸರು ಇರುತ್ತಿತ್ತು ಅದೇ ಹೆಸರಿನ ಸಿನಿಮಾದ ಮೂಲಕ ಅಭಿಷೇಕ ಅಂಬರೀಶ್ ಅವರು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು. ಅಮರ್ ಸಿನಿಮಾದ ನಂತರ ಇವರು ‘ಬ್ಯಾಡ್ ಮ್ಯಾನರ್ಸ್’ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಅವರ ಹುಟ್ಟು ಹಬ್ಬದ ದಿನವೇ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟೀಸರ್ ಬಿಡುಗಡೆ ಮಾಡುವಂತಹ ವಿಷಯವನ್ನು ಹೊರ ಹಾಕಿದ್ದರು ಈ ಒಂದು ಚಿತ್ರದಲ್ಲಿ ಅಭಿಷೇಕ್ ಅವರು ತುಂಬಾ ಖದರ್ ಆಗಿ ಕಾಣಿಸಿಕೊಂಡಿದ್ದು ವಿಭಿನ್ನವಾದಂತಹ ಕಥೆಯುಳ್ಳ ಚಿತ್ರ ಇದಾಗಿದೆ.
ಇನ್ನು ಈ ಚಿತ್ರದ ಹಾಡುಗಳು ಸಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಲಾಗುತ್ತಿದೆ. ಅಭಿಷೇಕ್ ಅವರ ಹುಟ್ಟು ಹಬ್ಬದಂದು ‘ಬ್ಯಾಡ್ ಮ್ಯಾನರ್ಸ್’ ಪೋಸ್ಟರ್ ರಿಲೀಸ್ ಆಗಿದ್ದು ಉತ್ತಮವಾದಂತಹ ರೆಸ್ಪಾನ್ಸ್ ಸಿಗುತ್ತಿದೆ ಈ ಒಂದು ಸಂದರ್ಭದಲ್ಲಿ ಮಾತನಾಡಿದಂತಹ ಅಭಿಷೇಕ್ ಅವರ ತಾಯಿ ಸುಮಲತಾ ಅಂಬರೀಶ್ ಅವರು ಅಂಬರೀಶ್ ಅವರಂತೆಯೇ ಅಭಿಷೇಕ್ ಸಹ ಚಲನಚಿತ್ರ ರಂಗದಲ್ಲಿ ಅಭಿಮಾನಿಗಳು ಸಹ ಬೆಂಬಲವನ್ನು ನೀಡಬೇಕು ಎಂದು ಹೇಳಿದ್ದಾರೆ. ಈ ಒಂದು ಸಮಯದಲ್ಲಿ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಬಗ್ಗೆ ಕೆಲವೊಂದು ಮಾತುಕತೆಗಳು ನಡೆದು ಹಾಗೆ ಅಭಿಷೇಕ್ ಅವರ ಮದುವೆಯ ಬಗ್ಗೆ ಸಹ ಕೆಲವೊಂದು ಸುದ್ದಿಗಳು ಚರ್ಚೆಯಾಗಿದೆ.
ಸುಮಲತಾ ತಮ್ಮ ಮಗನಿಗೆ ಮದುವೆ ಮಾಡಬೇಕು ಎನ್ನುವಂತಹ ಆಶಯವನ್ನು ಹೊಂದಿದ್ದಾರೆ ಅಭಿಗೆ ಮದುವೆ ಹುಡುಗಿಯನ್ನು ಹುಡುಗಿಯನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದು ಈ ಮಾತಿಗೆ ಅಭಿಷೇಕ್ ಅವರು ಗರಂ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅಭಿಷೇಕ್ ಕನ್ನಡ ಚಿತ್ರರಂಗಕ್ಕೆ ಒಬ್ಬ ಭರವಸೆಯ ನಟ ಎಂದೇ ಹೇಳಬಹುದು ಅಂಬರೀಶ್ ಅಂತಯೇ ಸಾಕಷ್ಟು ಖಡಕ್ ಆಗಿ ಇರುವಂತಹ ಪಾತ್ರಗಳಿಗೆ ಅಭಿಷೇಕ್ ಅವರು ಹೊಂದಿಕೊಳ್ಳುತ್ತಾರೆ. ಸುಮಲತಾ ಅಂಬರೀಶ್ ಅವರು ತಮ್ಮ ಮನೆಗೆ ಸೊಸೆಯನ್ನು ಬರಮಾಡಿಕೊಳ್ಳಲು ಸಿದ್ದರಾಗಿದ್ದಾರೆ ಆದರೆ ಅಭಿಷೇಕ್ ಅವರು ಒಪ್ಪಿಕೊಂಡು ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೆ ಸದ್ಯದಲ್ಲಿಯೇ ಸುಮಲತಾ ಅವರ ಮನೆಯಲ್ಲಿ ಮದುವೆ ಕಾರ್ಯ ನೆರವೇರುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.