ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತದಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ ಕೆಜಿಎಫ್ ಸಿನಿಮಾಗಳ ಮೂಲಕರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಹೆಸರು ಗಳಿಸಿದ್ದಾರೆ ಕನ್ನಡಿಗರಿಗೆ ಸೀಮಿತವಾಗಿದ್ದ ಅಭಿಮಾನಿ ಬಳಗ ಈಗ ಬಲು ದೊಡ್ಡದಾಗಿದೆ. ಯಶ್ ಅವರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಾಕಷ್ಟು ಕುತೂಹಲವನ್ನು ವ್ಯಕ್ತಪಡಿಸುತ್ತಾರೆ ಯಶ್ ಅವರು ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಅಷ್ಟಾಗಿ ಆಕ್ಟಿವ್ ಇರಲಿಲ್ಲ ಆದರೆ ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆದರು.
ಫ್ಯಾನ್ಸ್ ಗೋಸ್ಕರ ಹೊಸ ಹೊಸ ಪೋಸ್ಟರ್ಗಳನ್ನು ಸಹ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ ಇನ್ಸ್ಟಾಗ್ರಾಮ್ ನಲ್ಲಿ ಯಶ್ ಅವರನ್ನು 1.12 ಕೋಟಿ ಫಾಲೋವರ್ಸ್ ಗಳು ಇದ್ದು ಕನ್ನಡದ ಯಾವ ಹೀರೋಗೂ ಇನ್ಸ್ಟಾಗ್ರಾಮ್ ನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಫಾಲೋವರ್ಸ್ ಇಲ್ಲ. ಚಿತ್ರರಂಗದಲ್ಲಿ ಪೀಕ್ ನಲ್ಲಿ ಇರುವಂತಹ ಯಶ್ ಏನೇ ಮಾಡಿದರೂ ಸಹ ಅದು ಸುದ್ದಿಯಾಗುತ್ತದೆ ಅದೇ ರೀತಿಯಲ್ಲಿ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹೌದು ಯಶ್ ಅವರ ಕೆಜಿಎಫ್ ಸಿನಿಮಾ 2 ಹಿಟ್ ಆದ ನಂತರ ತಮ್ಮ ಕುಟುಂಬದ ಜೊತೆ ಅದ್ಭುತವಾದಂತಹ ಸಮಯವನ್ನು ಕಳೆಯುತ್ತಿದ್ದಾರೆ ತಮ್ಮ ಮಕ್ಕಳ ಜೊತೆಯಲ್ಲಿ ಹಾಗೆ ಪತ್ನಿಯ ಜೊತೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ ಯಶ್ ಅವರು ಮುಂಬೈಗೆ ಹೋಗಿದ್ದಂತಹ ಸಂದರ್ಭದಲ್ಲಿ ಅಲ್ಲಿ ಸಾಕಷ್ಟು ಜನ ಫ್ಯಾನ್ಸ್ ಗಳು ಅವರನ್ನು ಭೇಟಿ ಮಾಡಲು ನಿರೀಕ್ಷಿಸುತ್ತಾ ಇದ್ದರು.
ಯಶ್ ಎಲ್ಲೇ ಹೋದರು ಸಹ ಅಭಿಮಾನಿಗಳು ಹೆಚ್ಚು ಸುತ್ತುವರೆಯುತ್ತಾರೆ ಯಶ್ ಅವರು ಹೆಚ್ಚಾಗಿ ಮುಂಬೈ ಹಾಗೂ ಹೈದರಾಬಾದ್ ಎರಡು ಕಡೆ ಓಡಾಡುತ್ತಾ ಇರುತ್ತಾರೆ ಮುಂಬೈನಲ್ಲಿ ರಾಖಿ ಬಾಯ್ ಕಂಡಂತಹ ಫ್ಯಾನ್ಸ್ ಗಳು ಸೆಲ್ಫಿಯನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದರು ಇನ್ನು ವೈರಲ್ ಆದ ಈ ವಿಡಿಯೋದಲ್ಲಿ ರಾಖಿಬಾಯ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು ಅಭಿಮಾನಿಗಳು ಯಶ್ ಅವರ ಲುಕ್ ತುಂಬಾ ಇಷ್ಟಪಟ್ಟಿದ್ದಾರೆ. ಮುಂಬೈನಲ್ಲಿ ಒಂದು ಚಿಕ್ಕ ಮಗು ರಾಖಿಬಾಯ್ ಅವರ ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳಲು ಮುಂದೆ ಬರುತ್ತಾರೆ ಆಗ ಅಲ್ಲಿದ್ದ ಮಕ್ಕಳನ್ನು ಯಶ್ ಅವರು ಮುಂದೆ ನಿಲ್ಲಿಸಿಕೊಂಡು ಅವರ ಜೊತೆಯಲ್ಲಿ ಫೋಟೋವನ್ನು ತೆಗೆದು ತೆಗೆಸಿಕೊಳ್ಳುತ್ತಾರೆ.
ಕೆಜಿಎಫ್ ನಂತಹ ದೊಡ್ಡ ಹಿಟ್ ಸಿನಿಮಾವನ್ನು ನೀಡಿದ್ದರು ಯಾರೇ ಅಭಿಮಾನಿಗಳು ಬಂದರೂ ಸಹ ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ ಹಾಗೆಯೇ ಫೋಟೋವನ್ನು ತೆಗೆಸಿಕೊಳ್ಳುತ್ತಾರೆ. ಕೆಜಿಎಫ್ 2 ಸಿನಿಮಾದ ಯಶಸ್ಸಿನಲ್ಲಿ ಇರುವಂತಹ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ ಇವರ ಸಿನಿಮಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ ಅಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕು ಎನ್ನುವಂತಹ ಆಸೆ ಎಲ್ಲರಲ್ಲಿಯೂ ಇದೆ, ಎಲ್ಲಾ ಸಿನಿಮಾಗಳು ದೊಡ್ಡ ದೊಡ್ಡ ಹಿಟ್ಟನ್ನು ಕಾಣಬೇಕು ಯಶ್ ಅವರ ಸಿನಿಮಾಗಳು ನಮ್ಮ ಕನ್ನಡ ಚಲನಚಿತ್ರ ರಂಗದ ಮಹತ್ವವನ್ನು ತಿಳಿಸಬೇಕು ಎಂದು ಎಲ್ಲರ ಆಶಯ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.