ಕೂದಲು ಉದುರುವಿಕೆ, ತಲೆಯಲ್ಲಿ ಹೊಟ್ಟು, ನಿವಾರಣೆಯಾಗಲು ಹೀಗೆ ಮಾಡು ಸಾಕು.

ಮೊದಲನೆಯದಾಗಿ ಒಬ್ಬ ವ್ಯಕ್ತಿಯು ಸಾಮಾನ್ಯನಾಗಿರುವಾಗ 300 ರಿಂದ 400 ಕೂದಲನ್ನು ದಿನಕ್ಕೆ ಕಳೆದುಕೊಳ್ಳುತ್ತಾನೆ ಅದು ಸ್ನಾನವನ್ನು ಮಾಡಿದ ನಂತರ ಅಥವಾ ಮಾಡುವಾಗ ಇರಬಹುದು ಮತ್ತು ಮಲಗಿದ್ದ ನಂತರ ಹಾಸಿಗೆ ಮೇಲೆ ಆದರೂ ಇರಬಹುದು. ಸಾಮಾನ್ಯವಾಗಿ ಕೂದಲು ಉದುರಿದ ನಂತರ ಹೊಸ ಕೂದಲು ಹುಟ್ಟುತ್ತದೆ ಸಮಸ್ಯೆ ಏನು ಎಂದರೆ ಹಳೆಯ ಕೂದಲು ಉದುರಿದ ನಂತರವೂ ಹೊಸ ಕೂದಲು ಹುಟ್ಟುವುದಿಲ್ಲ ಅದಕ್ಕೆ ಕಾರಣವೇನು ಇದನ್ನು ಕೂದಲು ಉದುರುವಿಕೆ ಎಂದು ಕೂಡ ಕರೆಯುತ್ತಾರೆ.

WhatsApp Group Join Now
Telegram Group Join Now

ಇದಕ್ಕೆ ಕಾರಣ ಏನೆಂದು ನಾವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ ಸಾಕಷ್ಟು ಹಲವು ತರದ ಕಾರಣಗಳು ಕೂದಲು ಉದುರುವಿಕೆಗೆ ಇದೆ ಇದನ್ನು ಕುರಿತು ನೋಡೋಣ. ಮೊದಲನೆಯದಾಗಿ ಚಿಕ್ಕ ವಯಸ್ಸಿನಲ್ಲೇ ಯುವಕರು ಕೂದಲು ಉದುರುವಿಕೆಯನ್ನು ನೋಡುತ್ತಿರುವುದು, ಅದೇ ರೀತಿ ಹಿಂದಿನ ಕಾಲದವರೆಗೆ ಕೂದಲು ಅಷ್ಟಾಗಿ ಉದುರಿಲ್ಲ ಇದಕ್ಕೆ ಮೂಲ ಕಾರಣ ಎಂದರೆ ಅದು ಪೋಷ್ಟಿಕಾಂಶ ಉಳ್ಳ ಆಹಾರದ ಸೇವನೆಯಿಂದ.

ಹೌದು ಆಹಾರದಲ್ಲಿ ಕಲಬೆರಕೆ ಆಗಿರುವುದರಿಂದ ಪೋಷ್ಠಿಕಾಂಶ ಕೂದಲಿಗೆ ದೊರೆಯುವುದಿಲ್ಲ, ದೇಹದ ಉಷ್ಣತೆ ಹೆಚ್ಚಾಗಿರುವುದರಿಂದ ಕೂಡ ಕೂದಲು ಉದುರುತ್ತದೆ. ಇನ್ನು ಹೆಲ್ಮೆಟ್ ಧರಿಸುವುದರಿಂದ ಬೆವರು ಹೆಚ್ಚಾಗಿ ಕೂದಲು ಉದುರುತ್ತದೆ, ಇದರ ಜೊತೆ ಕಬ್ಬಿಣ, ಜಿಂಕ್ ಕ್ಯಾಲ್ಸಿಯಂ ನೀರು ಕಡಿಮೆಯಾದರೂ ಕೂಡ ಕೂದಲಿನ ಉತ್ಪತ್ತಿಯು ಆಗುವುದಿಲ್ಲ ಹಾಗಾಗಿ ಗಂಡಸರಲ್ಲಿ ತಲೆಯ ಮೇಲ್ಭಾಗದಲ್ಲಿ ಕೂದಲಿನ ಉದುರುವಿಕೆ ಹೆಚ್ಚಾಗಿ ಕಾಣಬಹುದು.

ಇದರ ಜೊತೆ ನಾವು ಕೃತಕವಾಗಿ ಕೂದಲಿಗೆ ಬಣ್ಣ ಹಚ್ಚುವುದು ಹೇರ್ ಕಟ್ಟಿಂಗ್ ಮಾಡಿಸುವುದು ಹೇಗೆ ಹೆಚ್ಚು ಕಾಮಿಕಲ್ಸ್ ಉಳ್ಳ ಶಾಂಪು ಅಥವಾ ಕಲರಿಂಗ್ ಅನ್ನು ಬಳಸುವುದರಿಂದ ಕೂಡ ಕೂದಲು ಹಾನಿಯಾಗುತ್ತದೆ ಇಂದು ಕೆಲವು ಕಾಯಿಲೆಗಳಿಂದಲೂ ಕೂಡ ಕೂದಲು ಉದುರುತ್ತದೆ ಉದಾಹರಣೆ ಥೈರಾಯಿಡ್ ಸಮಸ್ಯೆ ಇತರೆ ಹೈಪರ್ ಥೈರಾಯ್ಡ್, ಹೈಪೋ ಥೈರಾಯಿಡಿಸಂ ಇದ್ದರೆ ಕೂದಲು ಸಾಮಾನ್ಯವಾಗಿ ಉದುರುತ್ತದೆ, ಇನ್ನು ಡಯಾಬಿಟಿಕ್ ಇದ್ದರೂ ಕೂಡ ಉದುರುತ್ತದೆ.

ಏಕೆಂದರೆ ಸಕ್ಕರೆ ಕಾಯಿಲೆ ಇರುವ ಕಾರಣದಿಂದ ಕೆಲವೊಂದು ಆಹಾರವನ್ನು ಮಿತಿ ಮಾಡಬೇಕಾಗುತ್ತದೆ ಈ ಕಾರಣದಿಂದ ಸರಿಯಾದ ಪೋಸ್ಟಕಾಂಶವು ಕೂದಲಿಗೆ ದೊರೆಯುವುದಿಲ್ಲ. ಇದರ ಜೊತೆ ಪಿಸಿಓಡಿ ಅಥವಾ ಪಿಸಿಓಎಸ್ ಕಾಯಿಲೆಗಳಿದ್ದರೂ ಕೂಡ ಕೂದಲು ಉದುರುತ್ತದೆ ಅಲ್ಲದೆ ಅನೆಮಿಯ ಅಥವಾ ರಕ್ತಹೀನತೆಯು ಇದ್ದರೆ ಕೂಡ ಕೂದಲು ಉದುರುತ್ತದೆ ಹಾಗಾಗಿ ಜನರು ಕೂದಲು ಉದುರುತ್ತಿರುವುದನ್ನು ಹಿಂದೆ ಹೆಚ್ಚು ಕಾಳಜಿ ವಹಿಸಿ ಆಸ್ಪತ್ರೆಗೆ ತೋರಿಸಿಕೊಳ್ಳಬೇಕು.

ಇನ್ನು ಇದಕ್ಕೆಲ್ಲ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಎಂದರೆ ಮೊದಲನೇದಾಗಿ ಈ ಎಲ್ಲ ಕಾಯಿಲೆಗಳಿಗೂ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಕೂಡ ಉದುರುವುದು ಕಡಿಮೆಯಾಗುತ್ತದೆ ಜೊತೆಗೆ ಅರಳೆಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಎರಡನೇದಾಗಿ ಮೆಂತ್ಯ ರಾತ್ರಿ ನೆನಹಾಕಿ ಬೆಳಗೆದ್ದು ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು ಅದನ್ನು ಎರಡು ಗಂಟೆಗಳ ಕಾಲ ಬಿಟ್ಟು ನಂತರ ತೊಳೆಯಬೇಕು ಇನ್ನು ಈರುಳ್ಳಿಯನ್ನು ಕೂಡ ಬಳಸಬಹುದು ಇದರ ಜೊತೆ ದಾಸವಾಳ ಹೂವವನ್ನು ಬಳಸಬಹುದು ಇನ್ನು ಇವೆಲ್ಲ ದೇಹದ ಮೇಲೆ ಆದರೆ ದೇಹದ ಒಳಗೆ ಏನನ್ನು ಸೇವಿಸಬೇಕು ಎಂದರೆ ಪಾಲಕ್ ಬೀಟ್ರೂಟ್ ಕ್ಯಾರೆಟ್ ಈ ಮೂರರ ಜ್ಯೂಸನ್ನು ಕುಡಿಯಬೇಕು ಏಕೆಂದರೆ ಪಾಲಕ್ ಸೊಪ್ಪಿನಲ್ಲಿ ಜಿಂಕ್ ಅಂಶವು ಹೆಚ್ಚಾಗಿದೆ.

ಹಾಲು ಹಾಗೂ ಮೊಟ್ಟೆಯನ್ನು ಸೇವಿಸುವುದರಿಂದ ಕೂದಲಿಗೆ ಹೆಚ್ಚು ಪ್ರೊಟೀನ್ ದೊರೆಯುತ್ತದೆ ಹಾಗೂ ಬೃಂಗರಾಜ ಅರಳೆಣ್ಣೆ ಅಂತ ಹರ್ಬಲ್ ಎಣ್ಣೆಯನ್ನು ಬಳಸುವುದು ಕೂದಲಿಗೆ ಒಳ್ಳೆಯದು. ಇದರ ಜೊತೆಗೆ ಹೆಚ್ಚು ಬಿಸಿ ನೀರನ್ನು ಬಳಸುವುದರಿಂದ ಕೂದಲಿಗೆ ಹಾನಿಯಾಗುತ್ತದೆ ಹಾಗೂ ಹೆಚ್ಚು ಕೆಮಿಕಲ್ ಉಳ್ಳ ಶಾಂಪೂಗಳನ್ನು ಬಳಸಬಾರದು. ಬೆಟ್ಟದಾನಲ್ಲಿಕಾಯಿ ಹಾಗೂ ಆಲೋವೇರ ಜ್ಯೂಸ್ ಅನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದಲೂ ಕೂದಲಿನ ಸಮಸ್ಯೆ ಬರುವುದಿಲ್ಲ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now