ಮೇಷ ರಾಶಿಯ ಈ ತಿಂಗಳ ಭವಿಷ್ಯವನ್ನು ನೋಡುವುದಕ್ಕೂ ಮುಂಚೆ ಈ ತಿಂಗಳಲ್ಲಿ ಬರುವಂತಹ ವಿಶೇಷವಾದಂತಹ ದಿನಗಳ ಬಗ್ಗೆ ಮೊದಲು ತಿಳಿದುಕೊಳ್ಳುತ್ತಾ ಹೋಗೋಣ ನಿಮಗೆಲ್ಲರಿಗೂ ತಿಳಿದಿರುವಂತೆ ಫೆಬ್ರವರಿ 20ನೇ ತಾರೀಖು ಮಹಾಶಿವರಾತ್ರಿ ಇರುವಂತದ್ದು. ಪ್ರತಿಯೊಬ್ಬರೂ ಕೂಡ ಮಹಾಶಿವರಾತ್ರಿ ಹಬ್ಬವನ್ನು ಅಷ್ಟೇ ಭಕ್ತಿಯಿಂದ ಆಚರಿಸುತ್ತಾರೆ ಎಂದೇ ಹೇಳಬಹುದು ಹಾಗಾದರೆ ಫೆಬ್ರವರಿ ತಿಂಗಳಿನಲ್ಲಿ ದ್ವಾದಶ ಹನ್ನೆರಡು ರಾಶಿಗಳಲ್ಲಿ ಮೇಷ ರಾಶಿ ಭವಿಷ್ಯ ಯಾವ ರೀತಿ ಇದೆ ಎಂದು ತಿಳಿಯೋಣ.
ಮೊದಲನೆಯದಾಗಿ ಮೇಷ ರಾಶಿಯನ್ನು ಕಾಲಪುರುಷನ ತಲೆಯ ಭಾಗ ಎಂದೇ ಹೇಳಬಹುದು ಈ ಭಾಗದಲ್ಲಿ ವಿಶೇಷವಾಗಿ. ಕುಜನಿಗೆ ಹಾಗೂ ಕುಜನ ಅಧಿಪತ್ಯಕ್ಕೆ ಹೊಂದಿಕೊಂಡಿರುವಂತಹ ರಾಶಿ ಆಗಿರುತ್ತದೆ ಕುಜ ಅಗ್ನಿ ತತ್ವದ ಗ್ರಹವಾಗಿ ರಕ್ತವರ್ಣದ ಗ್ರಹವಾಗಿ ಮತ್ತು ಚರ ರಾಶಿಯಾಗಿರುವಂತಹ ಸ್ಥಾನವಾಗಿರುತ್ತದೆ ಮತ್ತು ಪೂರ್ವಕ್ಕೆ ಅವನು ಮೂಲವಾಗಿ ಅಧಿಪತ್ಯವನ್ನು ಹೊಂದಿರುತ್ತಾನೆ ಹೀಗಿರುವಾಗ ಮೇಷ ರಾಶಿಯವರು ಯಾವ ರೀತಿಯಾದಂತಹ ಫಲಗಳನ್ನು ಪಡೆದು ಕೊಳ್ಳುತ್ತಾರೆ.
ರಾಹುವಿನ ದೃಷ್ಟಿ ಮೇಷ ರಾಶಿಯವರ ಮೇಲೆ ಬೀಳುವುದ ರಿಂದ ಕೆಲವೊಂದಷ್ಟು ತೊಂದರೆಗಳು ಉಂಟಾಗಬಹುದು ಆದ್ದರಿಂದ ನೀವು ಸ್ವಲ್ಪ ನಿಮ್ಮ ಕಲ್ಪನೆಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗಿರುತ್ತದೆ ಯಾವುದೇ ವಿಷಯವಾಗಿ ನೀವು ಹೀಗೆ ನಡೆಯುತ್ತದೆ ಹೀಗೆ ನಡೆಯುವುದಿಲ್ಲ ಎನ್ನುವುದನ್ನು ಮೊದಲೇ ಆಲೋಚನೆ ಮಾಡುವುದನ್ನು ಬಿಡಬೇಕಾಗುತ್ತದೆ.
ನೀವು ಯಾವುದೇ ಒಂದು ವಿಷಯದ ಬಗ್ಗೆ ಕಲ್ಪನೆಯನ್ನು ಮಾಡಿ ಕೊಳ್ಳುತ್ತಿದ್ದೀರಾ ಎಂದರೆ ಅದು ಕೆಟ್ಟ ಕಲ್ಪನೆಯು ಆಗಿರುತ್ತದೆ ಹಾಗೂ ಒಳ್ಳೆಯ ಕಲ್ಪನೆ ಕೂಡ ಆಗಿರುತ್ತದೆ ಆದ್ದರಿಂದ ಇವೆರಡೂ ವಿಷಯಗಳ ಬಗ್ಗೆ ಆದಷ್ಟು ತಾಳ್ಮೆಯನ್ನು ತೆಗೆದುಕೊಳ್ಳುವುದು ಉತ್ತಮ ಅದರಲ್ಲೂ ರಾಹುವಿನ ದೃಷ್ಟಿ ಮೇಷ ರಾಶಿಯವರ ಮೇಲೆ ಇರುವುದ ರಿಂದ ಈ ತಿಂಗಳಿನಲ್ಲಿ ನಿಮಗೆ ಅಷ್ಟಾಗಿ ಯಾವುದೇ ರೀತಿಯಾದಂತಹ ಫಲಗಳು ದೊರೆಯುವುದಿಲ್ಲ.
ಅದರಲ್ಲೂ ಮಧ್ಯಮಾಸದವರೆಗೆ ಅಂದರೆ 15ನೇ ತಾರೀಖಿನವರೆಗೆ ಶನಿ ಮತ್ತು ಶುಕ್ರನ ಅನುಗ್ರಹ ಮೇಷ ರಾಶಿಯವರ ಮೇಲೆ ಇರುವುದರಿಂದ ನೀವು ವಿವಾಹಕ್ಕೆ ಪ್ರಯತ್ನಿಸುತ್ತಿದ್ದರೆ ಈ ವಿಷಯವಾಗಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಜೊತೆಗೆ ಭೂಮಿಗೆ ಸಂಬಂಧಿಸಿದಂತಹ ಕೆಲವೊಂದು ವಿಚಾರವಾಗಿ ಹೊಸ ಭೂಮಿಯನ್ನು ಖರೀದಿಸುವ ಯೋಗ ಫಲ ನಿಮ್ಮದಾಗಿರುತ್ತದೆ ಹಾಗೂ ಹೊಸ ವಾಹನಗಳ ಕರಿ ಹೀಗೆ ಈ ಒಂದು ಸಮಯ ಬಹಳ ಉತ್ತಮವಾಗಿರುವಂತದ್ದು ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಕೂಡ ಖರೀದಿಸುತ್ತೀರಿ.
ಇದರ ಜೊತೆ ಬಹಳ ಮುಖ್ಯವಾಗಿ ಬೆಲೆಬಾಳುವಂತಹ ಆಭರಣಗಳನ್ನು ತೆಗೆದುಕೊಳ್ಳುವಂತಹ ಶುಭ ಸಮಯ ಕೂಡಿಬರುತ್ತದೆ ಒಟ್ಟಾರೆಯಾಗಿ ಚರ ಮತ್ತು ಸ್ಥಿರ ಆಸ್ತಿಗಳ ಖರೀದಿಯಲ್ಲಿ ಈ ಒಂದು ತಿಂಗಳು ಬಹಳ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ಅದರಲ್ಲೂ 15ನೇ ತಾರೀಖಿನ ನಂತರ ಶುಕ್ರ ಮೀನ ರಾಶಿಗೆ ಉಚ್ಚನಾಗಿ ಪ್ರವೇಶವನ್ನು ಮಾಡುತ್ತಿದ್ದು ಇದರಿಂದ ನಿಮ್ಮ ಬದುಕಿನಲ್ಲಿ ಬಹಳ ಮುಖ್ಯವಾದಂತಹ ಬದಲಾವಣೆ ಎನ್ನುವುದು ಆಗುತ್ತದೆ ಅದೇನೆಂದರೆ ಧರ್ಮಕಾರ್ಯ ದೇವತಾ ಕಾರ್ಯಗಳಿಗೆ ನೀವು ಸಹಾಯ ಮಾಡುತ್ತೀರ.
ಇದರಿಂದ ನಿಮ್ಮ ಮನಸ್ಸಿಗೂ ಕೂಡ ನಿಮ್ಮದೇ ಎನ್ನುವುದು ಸಿಗುತ್ತದೆ ಇದಕ್ಕೆ ಹಣ ಖರ್ಚಾಗಬಹುದು ಆದರೆ ಇದರಿಂದ ನಿಮಗೆ ಒಳ್ಳೆಯ ಅನುಭವ ನಿಮಗೆ ಸಂತೋಷ ಎನ್ನುವುದು ಸಿಗುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಕೆಲವೊಬ್ಬರು ಹಣ ಇಲ್ಲದಿದ್ದರೂ ಕೂಡ ಬೇರೆಯವರ ಬಳಿ ಹಣವನ್ನು ತಂದು ಈ ರೀತಿಯಾದಂತಹ ಧರ್ಮ ಕಾರ್ಯಗಳನ್ನು ಮಾಡುತ್ತಿರುತ್ತಾರೆ ಆದರೆ ಈ ರೀತಿಯಾಗಿ ಯಾರು ಕೂಡ ಮಾಡಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.