ಇತ್ತೀಚೆಗೆ ಎಲ್ಲಾ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ (Adhar card link) ಮಾಡುವುದು ಕಡ್ಡಾಯ ಮಾಡಲಾಗಿದೆ ಈ ವಿಷಯ ಎಲ್ಲರಿಗೂ ತಿಳಿದಿದೆ ಬ್ಯಾಂಕ್ ಖಾತೆ ಮೊಬೈಲ್ ನಂಬರ್ ಪಾನ್ ಕಾರ್ಡ್ ಈ ರೀತಿ ಪ್ರತಿಯೊಂದು ದಾಖಲೆಗೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು ಇಲ್ಲವಾದಲ್ಲಿ ಅದು ರದ್ದಾಗುತ್ತದೆ ಅಥವಾ ಮಾನ್ಯವಾಗುವುದಿಲ್ಲ. ಹಾಗೆ ಈಗ ಸರ್ಕಾರವು ರೇಷನ್ ಕಾರ್ಡಿಗೂ (Ration card) ಕೂಡ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ.
ಈಗಾಗಲೇ ಹಲವು ದಿನಗಳಿಂದ ಇದು ಚಾಲ್ತಿಯಲ್ಲಿ ಇದೆ ಇನ್ನೂ ಸಹ ನೀವು ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಎಂದರೆ ತಕ್ಷಣವೇ ಈ ಕೆಲಸ ಮಾಡಿ. ಇದನ್ನು ಹೇಗೆ ಮಾಡಬೇಕು ಎಲ್ಲಿ ಮಾಡಿಸಬೇಕು ಮತ್ತು ಬೇಕಾದ ದಾಖಲತೆಗಳೇನು ಹಾಗೂ ಈ ರೀತಿ ಮಾಡುವುದರಿಂದ ಆಗುವ ಪ್ರಯೋಜನಗಳೇನು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಬೇಕಾಗಿರುವ ದಾಖಲಾತಿಗಳು ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್, ಫೋಟೋ ಕಾಪಿ ಮತ್ತು ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಫೋಟೋ ಕಾಪಿ ಹಾಗೂ ಕುಟುಂಬದ ಮುಖ್ಯಸ್ಥರ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಮೂಲ ಪಡಿತರ ಚೀಟಿ ಮತ್ತು ಅದರ ನಕಲು ಕಾಪಿ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ ಎಂದರೆ ಬ್ಯಾಂಕ್ ಪಾಸ್ ಬುಕ್ ನಕಲು ಕಾಪಿ ಇತ್ಯಾದಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಪಿಡಿಎಸ್ (PDS) ಕೇಂದ್ರಕ್ಕೆ ಹೋಗಬೇಕು.
ಈ ಎಲ್ಲಾ ದಾಖಲಾತಿಗಳನ್ನು ಪಿಡಿಎಸ್ ಕೇಂದ್ರಕ್ಕೆ ಸಲ್ಲಿಸಿ, ನೀವು ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ಬಯಸುತ್ತೀರಿ ಎಂದು ಹೇಳಬೇಕು. ನಂತರ ಪಿಡಿಎಸ್ ಕೇಂದ್ರದ ಅಧಿಕಾರಿಗಳು ನಿಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುತ್ತಾರೆ. ಅದರ ಕನ್ಫರ್ಮೇಶನ್ ಮೆಸೇಜ್ ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ ಈ ರೀತಿಯಾಗಿ ಆಫ್ ಲೈನ್ ಅಲ್ಲಿ ನೀವು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಬಹುದು ಈ ರೀತಿ ಮಾಡುವುದರಿಂದ ಆಗುವ ಪ್ರಯೋಜನಗಳು ಹಲವು ಇದೆ.
ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗೆ ಇರುವ ಬಿಪಿಎಲ್ ಕುಟುಂಬಗಳಿಗೆ ಪಡಿತರ ಚೀಟಿ ಮೂಲಕ ಕೆಲವು ಸೌಲಭ್ಯಗಳು ಸಿಗುತ್ತದೆ ಈ ರೀತಿ ಆದ ಲಿಂಕ್ ಮಾಡುವುದರಿಂದ ನಕಲಿ ಪಡಿತರ ಚೀಟಿ ಹೊಂದಿರುವವರನ್ನು ಸುಲಭವಾಗಿ ಗುರುತಿಸಬಹುದು. ಬಯೋಮೆಟ್ರಿಕ್ ಮೂಲಕ ಪಡಿತರ ವಿತರಿಸುವ ಅಂಗಡಿಗಳು ನಿಜವಾದ ಫಲಾನುಭವಿಗಳನ್ನು ಗುರುತಿಸಲು ಇದು ಸಾಧ್ಯವಾಗುತ್ತದೆ. ಈ ರೀತಿ ಆಧಾರ್ ಲಿಂಕ್ ಮಾಡುವುದರಿಂದ ಪಡಿತರ ವಂಚನೆಯನ್ನು ತಪ್ಪಿಸಬಹುದು.
ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಮಾಡಿದರೆ, ಯಾವುದೇ ಕುಟುಂಬವು ಒಂದಕ್ಕಿಂತ ಹೆಚ್ಚು ಪಡಿತರ ಕಾರ್ಡ್ ಹೊಂದಲು ಸಾಧ್ಯವಾಗುವುದಿಲ್ಲ. ಆಧಾರ್ ಲಿಂಕ್ ಮಾಡುವುದರಿಂದ ಪಡಿತರ ಕಳ್ಳತನ ತಪ್ಪಿಸಬಹುದು ಜೊತೆಗೆ ಪಿಡಿಎಸ್ ಕೇಂದ್ರದಲ್ಲಿ ದಾಖಲಾತಿ ಇರುವುದರಿಂದ ಭ್ರಷ್ಟಾಚಾರವನ್ನು ಕೂಡ ತಡೆಹಿಡಿಯಬಹುದು. ಈ ರೀತಿ ನಾನಾ ಪ್ರಯೋಜನಗಳು ಇದರಿಂದ ಇದೆ. ಆದ್ದರಿಂದ ಈ ಕೂಡಲೇ ತಕ್ಷಣ ನಿಮ್ಮ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಮಾಡಿಸಿಕೊಳ್ಳಿ ಇಲ್ಲವಾದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗುತ್ತೀರಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಹಾಗೂ ಮಾಹಿತಿ ಇಷ್ಟವಾದರೆ ಲೈಕ್ ಕೊಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.