ನಿಮ್ಮ ಜಮೀನಿನ ಪಹಣಿ ಅಲ್ಲಿ ಯಾವುದೇ ಲೋಪದೋಷ ಇದ್ದರೂ ಸರಿಪಡಿಸಿಕೊಳ್ಳಲು ಇದು ಸಕಾಲ ಕರ್ನಾಟಕ ಸರ್ಕಾರ ರೈತರಿಗೆ ಅನುಕೂಲವಾಗುವ ಹಾಗೆ ನಾನಾ ರೀತಿಯ ಯೋಚನೆಗಳನ್ನು ತಂದು ಅವರಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದರೆ, ರೆವೆನ್ಯೂ ಡಿಪಾರ್ಟ್ಮೆಂಟ್ ಕೂಡ ರೈತರಿಗಿರುವ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಮತ್ತು ಮಾಹಿತಿಗಳು ಇನ್ನಿತರ ವಿಷಯಗಳಲ್ಲಿ ಅವರಿಗೆ ಸಹಕಾರಿಯಾಗುವ ರೀತಿ ಮಾರ್ಪಾಡುಗಳನ್ನು ಮಾಡಿಕೊಟ್ಟು ಮತ್ತೊಂದು ರೀತಿಯಲ್ಲಿ ಅವರಿಗೆ ಸಹಾಯ ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ರೈತರಿಗೆ ಸಂತಸ ನೀಡುವ ಒಂದು ವಿಷಯ ಅನೌನ್ಸ್ ಆಗಿದೆ ಅದರ ಬಗ್ಗೆ ತಿಳಿದುಕೊಳ್ಳಲು ಪೂರ್ತಿಯಾಗಿ ಓದಿ. ಸರ್ಕಾರದಿಂದ ರೈತರಿಗೆ ಬರುವ ಯಾವುದೇ ಅನುಕೂಲ ಪಡೆದುಕೊಳ್ಳಬೇಕು ಎಂದರೆ ಅವರ ಹೆಸರಿನಲ್ಲಿ ಜಮೀನಿನ ಪಹಣಿ ಇರಬೇಕು. ಆದರೆ ಇಂತಹ ಪಹಣಿಗಳಲ್ಲಿ ಅನೇಕ ಲೋಪಾದೋಷಗಳು ಇರುತ್ತವೆ. ಅಂತಹ ಲೋಪ ದೋಷಗಳು ಇದ್ದಾಗ ಅವರು ಕೊಟ್ಟ ಇತರೆ ದಾಖಲೆ ಜೊತೆ ಹೋಲಿಕೆ ಆಗದೆ ಹೋದಾಗ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನಗಳು ಇವರಿಗೆ ದೊರಕದೆ ಇವರ ಅರ್ಜಿ ರದ್ದಾಗುತ್ತದೆ.
ಕಳೆದ ಕೆಲವು ವರ್ಷದ ಹಿಂದೆ ಸರ್ಕಾರ ಮಾಡಿದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾದ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದು ಅನೇಕ ರೈತರಿಗೆ ಹಣಕಾಸಿನ ಅನುಕೂಲತೆ ಮಾಡಿಕೊಟ್ಟಿದೆ. ಇಂತಹ ಯೋಜನೆಗಳನ್ನು ಪಡೆಯಲು ಕೂಡ ಪಹಣಿ ಪತ್ರ ಸರಿಯಾಗಿರುವುದು ಮುಖ್ಯವಾಗಿದೆ. ಜೊತೆಗೆ ರೈತರ ಜಮೀನಿಗೆ ಸಂಬಂಧಪಟ್ಟ ಇನ್ನಿತರ ಯೋಜನೆಗಳ ಫಲ ಪಡೆದುಕೊಳ್ಳಲು ಅಥವಾ ಬೆಳೆ ಬೆಳೆಯಲು ಸಾಲ ಪಡೆದುಕೊಳ್ಳಲು, ಬೆಳೆ ಹಾನಿಗೆ ಪರಿಹಾರ ಪಡೆದುಕೊಳ್ಳಲು ಕೂಡ ಪಹಣಿ ಪತ್ರದ ಅವಶ್ಯಕತೆ ಇದೆ.
ಅಂತಹ ಪಹಣಿ ಪತ್ರಗಳಲ್ಲಿ ಲೋಪ ದೋಷ ಇದ್ದಾಗ ಅದು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಅದಕ್ಕಾಗಿ ತಾಲೂಕು ಪಂಚಾಯಿತಿಗಳ ಮತ್ತು ಗ್ರಾಮ ಪಂಚಾಯತಿಗಳ ದಾರಿ ಸವೆಸಿದರು ದಾಖಲಾತಿ ಮಾತ್ರ ಸರಿ ಹೋಗುವುದಿಲ್ಲ . ಇದರಿಂದ ರೈತರು ಬೇಸತ್ತು ಹೋಗುತ್ತಾರೆ ಅಂತಹ ಸಮಸ್ಯೆಗಳಿಗೆಲ್ಲಾ ಸರ್ಕಾರ ಈಗ ಪರಿಹಾರ ತಂದಿದೆ. ಇನ್ನು ಕೂಡ ನಮ್ಮ ದೇಶದಲ್ಲಿ ಅನೇಕ ರೈತರು ಅನಕ್ಷರಸ್ಥರಾಗಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಅವರು ಸಮಯ ಹಾಗೂ ಹಣ ವ್ಯರ್ಥ ಮಾಡಿಕೊಂಡು ಇಂತಹ ದಾಖಲಾತಿ ತಿದ್ದುಪಡಿಗೆ ಅಲೆದಾಡುವಂತೆ ಆಗಿದೆ.
ಆದರೆ ಸರ್ಕಾರ ಈಗ ತಾಲೂಕು ಮಟ್ಟದ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಹೆಚ್ಚಿನ ಗಮನ ಕೊಡುವಂತೆ ಸೂಚನೆ ನೀಡಿದೆ. ಈ ಕಂದಾಯ ಇಲಾಖೆಯ ಮುಖ್ಯ ಕಾರ್ಯ ಏನೆಂದರೆ ಪಹಣಿ ಪತ್ರದಲ್ಲಿ ದಿನಾಂಕ ಹೆಸರು ಅಥವಾ ಇನ್ಯಾವುದೇ ರೀತಿಯ ದೋಷ ಇದ್ದರೆ ಅದನ್ನು ಸರಿಪಡಿಸುವುದು. ಜಿಲ್ಲಾಧಿಕಾರಿಗಳು ಈಗ ಪ್ರತಿ ಘಟಕದ ತಹಸೀಲ್ದಾರಗಳಿಗೆ ಅತಿ ಹೆಚ್ಚಿನ ಪಹಣಿ ಪತ್ರಗಳನ್ನು ತಿದ್ದುಪಡಿ ಮಾಡಲು ಆದೇಶ ನೀಡಿದೆ. ಹೀಗೆ ಸರ್ಕಾರವು ಸಾರ್ವಜನಿಕ ಅದರಲ್ಲೂ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ಕಾರ್ಯವನ್ನು ಮೊದಲಿಗಿಂತ ಚುರುಕಾಗಿಸಿದೆ ಹಾಗೂ ಸುಲಭಗೊಳಿಸಿದೆ.
ಅಂತೆಯೇ ಈ ಸಮಯದಲ್ಲಿ ಜಮೀನಿನ ಪಹಣಿ ಪತ್ರ ಏನಾದರೂ ನಿಮ್ಮ ತಂದೆ ತಾಯಿ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಅದನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಇದು ಸಕಾಲವಾಗಿದೆ. ಸರ್ಕಾರ ಹೇಳುವ ಕ್ರಮವನ್ನು ಅನುಸರಿಸಿ ಅದರ ನೀತಿ ನಿಯಮದಂತೆ ನಡೆದುಕೊಂಡು ಅತಿ ಶೀಘ್ರವಾಗಿ ಸುಲಭವಾಗಿ ಈಗ ನೀವು ನಿಮ್ಮ ಹೆಸರಿನಲ್ಲಿ ಪಹಣಿ ಪತ್ರವನ್ನು ಪಡೆಯಬಹುದಾಗಿದೆ. ಸರ್ಕಾರ ತೆಗೆದುಕೊಂಡಿರುವ ಇಂತಹ ಪರಿಣಾತ್ಮಕ ಕಾರ್ಯ ತಿದ್ದುಪಡಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.