ನಮ್ಮ ಕರ್ನಾಟಕದಲ್ಲಿ ಬಹಳಷ್ಟು ರೈತರು ತಮ್ಮ ಜಮೀನುಗಳ ಹೆಸರುಗಳಲ್ಲಿ ಬಹಳಷ್ಟು ತಿದ್ದುಪಡಿ ಹಾಗೂ ತಪ್ಪು ಹೆಸರು ಮತ್ತು ತಂದೆ ತಾತ ಮತ್ತು ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದರೆ ಹಾಗೂ ಪೂರ್ವಜರ ಆಸ್ತಿ ಇರುವ ಕಾರಣಕ್ಕೆ ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಗದೇ ಇರುವವರಿಗೆ. ಎಲ್ಲರಿಗೂ ಸುವರ್ಣ ಅವಕಾಶವನ್ನು ನೀಡಿದೆ. ಹಾಗೂ ಇದರಲ್ಲಿ ವಿಶೇಷವಾಗಿ ಮತ್ತೆ ಪೌತಿ ಖಾತೆ ಏಕೆ ಮಾಡಿಸಬೇಕು ಮತ್ತು ಜಮೀನು ಯಾವ ರೀತಿಯಲ್ಲಿ ವರ್ಗಾವಣೆಯಾಗುತ್ತದೆ ಹಾಗೂ ಜಮೀನಿನ ಆಸ್ತಿಯ ಹಕ್ಕಿನಲ್ಲಿ ಗಂಡು ಮಕ್ಕಳಿಗೆ ಎಷ್ಟು ಪಾಲು ಹಾಗೂ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆ.
ಮತ್ತು ಪೌತಿ ಖಾತೆಯನ್ನು ಹೇಗೆ ಮಾಡಿಸಬೇಕು, ಹಾಗೂ ಇದಕ್ಕೆ ಅಗತ್ಯವಾಗಿರುವ ದಾಖಲೆಗಳು ಏನು? ಮತ್ತು ಹಿಂದಿನ ಕಾಲದಲ್ಲಿ ತಾತ ತಂದೆ ಅಥವಾ ಮುತ್ತಾತನ ಜಮೀನು ಖರೀದಿಸಿದ್ದು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳದೆ ಹಾಗೆಯೇ ಬಿಟ್ಟಿದ್ದರೆ ಅದನ್ನು ಹೇಗೆ ಪಡೆಯಬೇಕು. ಹಾಗಾದರೆ ಈ ಎಲ್ಲಾ ಪ್ರಶ್ನೆಗಳಿಗೂ ಕೂಡ ಈ ಕೆಳಗಿ ನಂತೆ ಉತ್ತರವನ್ನು ತಿಳಿಯುತ್ತಾ ಹೋಗೋಣ.
ಪೌತಿ ಖಾತೆಯ ಅಡಿ ಜಮೀನನ್ನು ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಎಂದರೆ ಆಸ್ತಿ ಮಾಲೀಕರು ಅಕಾಲಿಕ ನಿ.ಧ.ನ ಹೊಂದಿದ ನಂತರ ಅವರ ವಾರಸುದಾರರು ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ ಬಹುತೇಕ ವಾರಸುದಾರರು ಯಾವಾಗಲಾದರೂ ಮಾಡಿಸಿ ಕೊಂಡರಾಯಿತು ಎಂದು ನಿರ್ಲಕ್ಷ ತೋರುತ್ತಾರೆ. ನೆನಪಿಡಿ ಪೌತಿ ಖಾತೆಯ ಅಡಿ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಸ್ತಿ ಮಾಲೀಕರು ನಿ.ಧ.ನ ಹೊಂದಿದ ಬಳಿಕ ಪೌತಿ ಖಾತೆಯ ಅಡಿ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಜಮೀನಿನ ಸ್ವಾಧೀನ ಹೊಂದಿದ್ದರು ಉಪಯೋಗ ವಿಲ್ಲದಂತೆ ಆಗುತ್ತದೆ. ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟ ಉಂಟಾದರೆ ಬೆಳೆ ವಿಮೆಯಾಗಲಿ ಅಥವಾ ಬೆಳೆ ನಷ್ಟಕ್ಕೆ ಪರಿಹಾರವನ್ನು ಪಡೆಯಲು ಆಗುವುದಿಲ್ಲ. ಇನ್ನು ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಕೂಡ ಸಾಧ್ಯವಾಗುವುದಿಲ್ಲ. ಇದರ ಜೊತೆ ಮುಂದೆ ಹೊಸ ಹೊಸ ಕಾನೂನು ಗಳು ಬಂದು ಕಚೇರಿಗಳಿಗೆ ಹಲವು ಬಾರಿ ಅಲೆದಾಡುವ ಸಂದರ್ಭಗಳು ಕೂಡ ಬರಬಹುದು.
ಹಾಗಾಗಿ ಆಸ್ತಿಯನ್ನು ಪೌತಿ ಖಾತೆಯ ಅಡಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಇನ್ನು ವಾರಸುದಾರರು ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ಬಹಳಷ್ಟು ಜನ ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಂಡಿಲ್ಲ. ಆಸ್ತಿ ಮಾಲೀಕರ ಮರಣ ಪ್ರಮಾಣ ಪತ್ರ ಇಲ್ಲದೆ ಜಮೀನಿನ ಖಾತೆ ವರ್ಗಾವಣೆ ಸಾಧ್ಯವಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರವನ್ನು ಕಾನೂನಾತ್ಮಕವಾಗಿ ಪಡೆಯಲು ಮಾಹಿತಿ ಕೊರತೆ ಇರುವ ಕಾರಣ, ಕೆಲವು ರೈತರು ತಮ್ಮ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಂಡಿಲ್ಲ.
ನಜಯಮದ ಪ್ರಕಾರ ಹೇಳುವುದಾದರೆ. ಗ್ರಾಮಗಳಲ್ಲಿ ವ್ಯಕ್ತಿ ನಿಧನರಾದ 28 ದಿನಗಳ ಒಳಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ ಪತ್ರ ನೀಡಬೇಕು. ಒಂದು ವರ್ಷದೊಳಗಿದ್ದರೆ ತಹಶೀಲ್ದಾರರು ನೀಡಬಹುದು. ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳು ಇದ್ದರೆ JMF ನ್ಯಾಯಾಲಯದ ಮೂಲಕವೇ ಧಾವೆಯನ್ನು ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿಮ್ಮ ಜಮೀನು ನಿಮ್ಮ ಹೆಸರಿಗೆ ಆಗಿಲ್ಲವೆಂದರೆ ಚಿಂತಿಸುವ ಅಗತ್ಯವಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.