ಗಗನಕ್ಕೇರಿದೆ ಗ್ಯಾಸ್ ಸಿಲಿಂಡರ್ ಬೆಲೆ, ಆದ್ರೆ ಗ್ಯಾಸ್ ಬುಕ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿದ್ರೆ ಸಿಗಲಿದೆ ಭರ್ಜರಿ ಡಿಸ್ಕೌಂಟ್.

 

WhatsApp Group Join Now
Telegram Group Join Now

ಏರಿಕೆಯಾದ ಸಿಲಿಂಡರ್ ಬೆಲೆ, ಗ್ಯಾಸ್ ಬುಕ್ ಮಾಡುವಾಗ ಈ ವಿಧಾನ ಅನುಸರಿಸಿ ಭರ್ಜರಿ ಡಿಸ್ಕೌಂಟ್ ಪಡೆಯಿರಿ ಇತ್ತೀಚೆಗೆ ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆ ಆಗುತ್ತಿದೆ. ಇದರಿಂದ ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಸಂಸಾರ ತೂಗಿಸುವುದೇ ಬಹಳ ಕಷ್ಟ ಆಗುತ್ತಿದೆ. ಜೊತೆಗೆ ಹೆಣ್ಣು ಮಕ್ಕಳಿಗೂ ಕೂಡ ಮನೆ ನಿಭಾಯಿಸುವುದಕ್ಕೆ ಬಹಳ ಕಷ್ಟ ಆಗುತ್ತಿದ್ದು ಪದೇಪದೇ ಹೆಚ್ಚಾಗುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಪ್ರತಿ ದಿನ ಕೂಡ ಅಡುಗೆ ಮಾಡುವಾಗ ಅದೇ ಯೋಚನೆಯಲ್ಲಿ ಲೆಕ್ಕಾಚಾರ ಹಾಕಿ ಅಳೆದು ತೂಗಿ ಗ್ಯಾಸ್ ಬಳಸಿ ಆಫ್ ಮಾಡಬೇಕಾಗಿದೆ. ಸಿಲಿಂಡರ್ ಗೆ ಬೆಲೆ ನಿಗದಿ ಕೂಡ ಆಗಿತ್ತು. 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 1105ರು ಇತ್ತು, ಜೊತೆಗೆ ಡೆಲಿವರಿ ಚಾರ್ಜ್ ಆಗಿ ಬರುವ ಕೆಲಸಗಾರರು 50 ತೆಗೆದುಕೊಳ್ಳುತ್ತಿದ್ದ ಕಾರಣ 1155 ಆಗಿ ಹೋಗಿತ್ತು. ಈಗ ಅದರ ಮೇಲೆ ಇನ್ನಷ್ಟು ಹೊರೆ ಬಿದ್ದಿದೆ. ಆದರೆ ಸುಲಭವಾಗಿ ಇದರಿಂದ ಹೊರಬರಲು ಹೊಸ ವಿಧಾನ ಒಂದಿದೆ.

ಅದೇನೆಂದರೆ ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆ ವಿರೋಧಿಸಿ ಎಷ್ಟೇ ಬಂದ್ ಹಾಗೂ ಸ್ಟ್ರೈಕ್ ಮಾಡಿದರು ಉಪಯೋಗವಾಗುತ್ತಿಲ್ಲ. ಅದರ ಬದಲು ನೀವು ಉಪಾಯವಾಗಿ ನಿಮ್ಮ ಮನೆಯಲ್ಲೇ ಕುಳಿತು ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ರಿಸೀವ್ ಮಾಡಿಕೊಳ್ಳಬಹುದು ಅದು ಹೇಗೆಂದರೆ ನೀವು ಫ್ಲಿಪ್ಕಾರ್ಟ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು. ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಎಲ್ಲರಿಗೂ ಆಶ್ಚರ್ಯವಾಗಬಹುದು.

ಹೌದು ಗ್ಯಾಸ್ ಸಿಲಿಂಡರ್ ಮತ್ತು ಈ ಕಾಮರ್ಸ್ ನಡುವೆ ನಂಟು ಇದ್ದೇ ಇದೆ. ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ ಫ್ಲಿಪ್ಕಾರ್ಟ್ ಆಪ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಬಳಿ ಸೂಪರ್ ಇದ್ದರೆ ಸೂಪರ್ ಕಾಯ್ನ್ಸ್ ವಿಭಾಗಕ್ಕೆ ಹೋಗಿ ಅಲ್ಲಿ ನೀವು ಮೊಬೈಲ್ ರಿಚಾರ್ಜ್ ಡಿಟಿಎಚ್ ರಿಚಾರ್ಜ್ ಈ ರೀತಿ ಇನ್ನಷ್ಟು ಸೇವೆಗಳ ವಿವರವನ್ನು ಪಡೆಯುತ್ತಿದೆ. ಅದನ್ನೆಲ್ಲ ಬದಿಗಿಟ್ಟು ಗ್ಯಾಸ್ ಸಿಲೆಂಡರ್ ಬುಕ್ ಮಾಡುವ ಕಡೆ ಗಮನ ಕೊಡಿ.

ನಂತರ ಅಲ್ಲಿರುವ ಆಯ್ಕೆಗಳ ಪ್ರಕಾರ ಯಾವ ಗ್ಯಾಸ್ ಮತ್ತು ಎಷ್ಟು ಕೆಜಿಯದು ಎಲ್ಲವನ್ನು ಆಯ್ಕೆ ಮಾಡಿ ಕೊನೆಗೆ ಅದರ ಬೆಲೆ ನಿಮಗೆ ತೋರಿಸುತ್ತದೆ. ಅದು ನಿಮಗೆ ಈಗ ನೀವು ಏಈ ಹಿಂದೆ ಏಜೆನ್ಸಿ ಕಡೆಯಿಂದ ಪಡೆಯುತ್ತಿದ್ದ ಬೆಲೆಗಿಂತ ಖಂಡಿತವಾಗಿಯೂ ಕಡಿಮೆ ಇರುತ್ತದೆ. ಮತ್ತೊಂದು ವಿಶೇಷತೆ ಏನೆಂದರೆ, ನಿಮ್ಮ ಬಳಿ ಸೂಪರ್ ಕಾಯಿನ್ಸ್ ಹೆಚ್ಚಿಗೆ ಇದ್ದಷ್ಟು ನಿಮಗೆ ಹೆಚ್ಚಿನ ಮೊತ್ತದ ಹಣ ರಿಯಾಯಿತಿಯಾಗಿ ಸಿಗಲಿದೆ. ಉದಾಹರಣೆಗೆ 750 ಸೂಪರ್ ಕಾಯಿಸ್ ನಿಮ್ಮ ಬಳಿ ಇದ್ದರೆ 200 ವರೆಗೆ ನಿಮಗೆ ರಿಯಾಯಿತಿ ಸಿಗಲಿದೆ ಅಂದರೆ 950ಗೆ ನೀವು ಸಿಲಿಂಡರ್ ಪಡೆದುಕೊಂಡ ರೀತಿ ಆಯಿತು.

ಹಾಗಾಗಿ ಇಂತಹ ಒಂದು ಅದ್ಭುತ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಸೂಪರ್ ಕಾಯಿನ್ಸ್ ಹೆಚ್ಚಿಗೆ ಇದ್ದರೆ ಅದನ್ನು ವ್ಯರ್ಥ ಮಾಡದೆ ಈ ರೀತಿ ಹೆಚ್ಚು ಬೆಲೆ ಇರುವ ವಸ್ತುಗಳನ್ನು ಖರೀದಿಸಲು ಉಪಯೋಗ ಪಡಿಸಿಕೊಳ್ಳಿ. ಈ ಉಪಯುಕ್ತ ಮಾಹಿತಿಯನ್ನು ಇನ್ನಷ್ಟು ಜನರ ಜೊತೆ ಹಂಚಿಕೊಂಡು ಅವರಿಗೂ ಸಹ ಮಾಹಿತಿ ತಲುಪುವ ರೀತಿ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now