ಕಟ್ಟಡ ಕಾರ್ಮಿಕರಿಗೆ ಅಥವಾ ಇನ್ನಾವುದೇ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲಸಗಾರರಿಗೆ ಕರ್ನಾಟಕ ಸರ್ಕಾರವು ದಾಖಲೆ ನೀಡಬೇಕೆಂದು ನಿರ್ಧರಿಸಿ ಕಾರ್ಮಿಕ ಕಾರ್ಡ್ ಅನ್ನು ನೀಡುತ್ತದೆ. ಈ ಕಾರ್ಡ್ ನ ಮುಖಾಂತರವಾಗಿ ಕೆಲಸಗಾರರು ಸರ್ಕಾರದಿಂದ ಅನೇಕ ರೀತಿಯ ಸಹಾಯ ಪಡೆಯಬಹುದು. ಅಂತೆಯೇ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದವರು ತಮ್ಮ ಮಕ್ಕಳ ಮದುವೆಗೆ 60,000 ರೂಪಾಯಿ ಹಣವನ್ನು ಉಚಿತವಾಗಿ ಪಡೆಯಬಹುದು.
ಈಗಿನ ಕಾಲದಲ್ಲಿ ಮಕ್ಕಳ ಮದುವೆ ಮಾಡುವುದು ಬಡಬಗ್ಗರಿಗೆ ಸುಲಭದ ಮಾತಲ್ಲ. ತಾಳಿಯನ್ನಷ್ಟೆ ಬಂಗಾರದಿಂದ ಮಾಡಿಸಿ, ಹತ್ತಿರದ ಬಂಧುಗಳಿಗೆ ಮಾತ್ರ ಆಂಮತ್ರಿಸಿ, ಮಾಲೆಗಷ್ಟೇ ಹೂಗಳನ್ನು ಬಳಸಿ, ಹೊಸ ಉಡುಗೆ ತಂದು ಈ ರೀತಿ ಸರಳವಾಗಿ ಮದುವೆ ಮಾಡಿದರೂ ದುಬಾರಿ ದುನಿಯಾದಲ್ಲಿ ಬಹಳವಾಗಿ ಹಣ ಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಸರ್ಕಾರವು ಕಾರ್ಮಿಕರಿಗೆ ನೆರವಾಗುವಂತೆ, ಮಕ್ಕಳ ಮದುವೆಗಾಗಿ ಧನ ಸಹಾಯ ಮಾಡುತ್ತಿದೆ.
ವ್ಯಕ್ತಿಯು ಕಾರ್ಮಿಕನಾಗಿದ್ದು, ಕಾರ್ಡ್ ಹೊಂದಿದ್ದರೆ ತನ್ನ ಎರಡು ಮಕ್ಕಳುಗಳಿಗಾಗಿ ಹಣ ಪಡೆದುಕೊಳ್ಳಬಹುದು. ಸರ್ಕಾರದ ಅನೇಕ ಯೋಜನೆಗಳಲ್ಲಿ ಹೆಣ್ಣು ಮಕ್ಕಳ ಪ್ರಗತಿಗೆ, ಸಹಾಯಕ್ಕೆ ಒತ್ತು ನೀಡಲಾಗುತ್ತಿದ್ದು, ಈ ಯೋಜನೆಯಲ್ಲಿ ಹೆಣ್ಣು ಗಂಡೆಂಬ ಪ್ರಶ್ನೆಯಿಲ್ಲ. ಹೆಣ್ಣಾಗಲಿ ಅಥವಾ ಗಂಡು ಮಗನಾಗಿರಲಿ ಒಬ್ಬೊಬ್ಬರ ಮದುವೆಗೆ ಪ್ರತ್ಯೇಕವಾಗಿ 60,000 ರೂಗಳನ್ನು ಕಾರ್ಮಿಕರ ಕಲ್ಯಾಣ ಇಲಾಖೆಯ ಯೋಜನೆಯಿಂದ ಪಡೆಯಬಹುದು.
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಈಗಾಗಲೇ ಅನುಕೂಲಗಳಾಗಿದ್ದು, ಆ ಪಟ್ಟಿಯಲ್ಲಿ ಇದು ಕೂಡ ಸೇರಿದೆ. ಮದುವೆಗೆ ಸಹಾಯಧನವನ್ನು ಪಡೆಯಲು ಕಾರ್ಮಿಕರು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ವ್ಯಕ್ತಿಯು ಕೆಲವು ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕಾದ ಅವಶ್ಯಕತೆ ಇದೆ.
ಮಕ್ಕಳ ಮದುವೆಗೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಧನ ಸಹಾಯ ಪಡೆಯಲು ಬೇಕಾಗಿರುವ ಅಗತ್ಯ ದಾಖಲೆಗಳು:-
• ಕಾರ್ಮಿಕ ಕಾರ್ಡನ್ನು ಮಾಡಿಸಿ ಒಂದು ವರ್ಷ ಪೂರ್ಣವಾಗಿರಬೇಕು.
• ಉದ್ಯೋಗ ದೃಢೀಕರಣ ಪತ್ರ ಇರಬೇಕು.
•ಬ್ಯಾಂಕ್ ಪಾಸ್ ಬುಕ್ ಇರಬೇಕು.
• ವಿವಾಹ ನೋಂದಣಿ ಅಧಿಕಾರಿಗಳಿಂದ ಪಡೆದ ವಿವಾಹ ನೋಂದಣಿ ಪತ್ರವಿರಬೇಕು.
• ಮಕ್ಕಳ ಮದುವೆಯ ಇನ್ವಿಟೇಶನ್ ಕಾರ್ಡ್ ಇರಬೇಕು.
• ಕರ್ನಾಟಕವನ್ನು ಹೊರತು ಪಡಿಸಿ ಬೇರೆ ರಾಜ್ಯದವರಾಗಿದ್ದು, ಹಣಕ್ಕಾಗಿ ಅಪ್ಲೈ ಮಾಡುತ್ತಿದ್ದರೆ, ನ್ಯಾಯಾಲಯದಿಂದ ಒಂದು ಅಫಿಡಾವಿಟ್ ಸಲ್ಲಿಸಬೇಕು.
• ರೇಷನ್ ಕಾರ್ಡ್ ಹೊಂದಿರಬೇಕು.
• ಮಕ್ಕಳ ಮದುವೆ ನಿಶ್ಚಯಸಿದ ಅಥವಾ ನೋಂದಣಿ ಆದ ಆರು ತಿಂಗಳ ಒಳಗೆ ಕಾರ್ಮಿಕ ಅರ್ಜಿ ಸಲ್ಲಿಸಬೇಕು.
ಮೇಲಿನ ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕರು ಆನ್ಲೈನ್ ಅಲ್ಲಿ ಅಪ್ಲೈ ಮಾಡಬೇಕು. ಸಿಎಸ್ಸಿ ಕೇಂದ್ರಗಳಿಗೆ ತೆರಳಿ ಅಪ್ಲಿಕೇಶನ್ ಹಾಕಬಹುದಾಗಿದೆ.
ಸೇವಾ ಸಿಂಧು ಪೋರ್ಟಲ್ ಓಪನ್ ಮಾಡಬೇಕು:-
ಪುಟವು ತೆರೆದುಕೊಂಡ ಬಳಿಕ ರಿಜಿಸ್ಟರ್ ಐಡಿಯನ್ನು ಹಾಕಬೇಕು.
ಪುಟದ ಎಡಭಾಗಕ್ಕೆ ವ್ಯೂ ಆಲ್ ಸರ್ವಿಸಸ್ ಎಂಬ ಆಯ್ಕೆಯನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಬೇಕು.
ತೆರೆದುಕೊಂಡ ಪುಟದ ಬಲಭಾಗದಲ್ಲಿ ಸರ್ಚ್ ಚಿಹ್ನೆಯ ಉದ್ದದ ಆಯತ ಕಾಣಿಸುತ್ತದೆ. ಅದರಲ್ಲಿ ಲೇಬರ್ ಎಂದು ಹಾಕಬೇಕು.
ತೆರೆದುಕೊಂಡ ಪಟ್ಟಿಗಳ ಸಾಲಿನಲ್ಲಿ ಅಪ್ಲಿಕೇಶನ್ ಫಾರ್ ಮ್ಯಾರೇಜ್ ಅಸಿಸ್ಟೆಂಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.
ಈ ರೀತಿಯಾಗಿ ಆನ್ಲೈನ್ ಅಲ್ಲಿಯೇ ಅರ್ಜಿ ಸಲ್ಲಿಸಬಹುದು. ಸಲ್ಲಿಸಿದ ಮಾಹಿತಿಗಳು, ದಾಖಲೆಗಳು ಸರಿಯಾಗಿದ್ದಲ್ಲಿ ಸಹಾಯ ಧನವಾಗಿ 60,000 ರೂಪಾಯಿಗಳು ಕಾರ್ಮಿಕರ ಕೈ ಸೇರುತ್ತದೆ. ಸರ್ಕಾರದ ಈ ಯೋಜನೆಯ ಬಗ್ಗೆ ನಾವು ನೀಡಿದ ಉಪಯುಕ್ತ ಮಾಹಿತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.