ಹಿರಿಯ ನಾಗರಿಕರ ಸಲುವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತವೆ. ಈಗಾಗಲೇ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಅನುಕೂಲತೆಯನ್ನು ಹಿರಿಯ ನಾಗರಿಕರ ಸಲುವಾಗಿ ಮಾಡಿಕೊಡುತ್ತದೆ. ಈ ಬಾರಿಯೂ ಕೂಡ 2023-24ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇನ್ನೊಂದು ಹೊಸ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿ ತಂದು ತಿಂಗಳಿಗೆ 70,500 ರೂ. ಪಡೆಯುವ ಭರವಸೆಯನ್ನು ನೀಡಿದ್ದಾರೆ.
ಯಾಕೆಂದರೆ ಜೀವನದ ಇಳಿ ವಯಸಿನಲ್ಲಿ ವೃದ್ಧರಿಗೆ ಆರ್ಥಿಕ ಭದ್ರತೆಯ ನೆಮ್ಮದಿ ನೀಡುವುದು ಜೊತೆಗೆ ಅವರಿಗೆ ನಿಶ್ಚಿಂತೆಯ ಸಂಧ್ಯಾಕಾಲ ಅನುಭವಿಸಲು ಸಾಧ್ಯವಾಗಲಿ ಎನ್ನುವ ಕಾರಣಕ್ಕಾಗಿ ಈ ರೀತಿ ಯೋಜನೆಗಳಿಂದ ಅನುಕೂಲ ಮಾಡಿಕೊಟ್ಟಿದೆ. ಈ ಹಿಂದಿನಿಂದಲೂ ಕೂಡ ಮಾನ್ಯ ಕೇಂದ್ರ ಸರ್ಕಾರವು ಈ ರೀತಿಯ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ಎಲ್ಲರಿಗೂ ಗೊತ್ತೇ ಇದೆ.
ಕಳೆದ ವರ್ಷಗಳಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನಾನಾ ಯೋಜನೆಗಳು ದೇಶದ ಎಲ್ಲಾ ನಾಗರಿಕ ವರ್ಗದವರಿಗೂ ಕೂಡ ಸಿಕ್ಕಿವೆ. ಈಗಾಗಲೇ ಭೇಟಿ ಪಡಾವೋ ಭೇಟಿ ಬಚಾವೋ ಅನ್ನುವ ಘೋಷಣೆಯೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ, ರೈತರ ಸಲುವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಹಿರಿಯರಿಗಾಗಿ ಪಿಎಂ ವಯಾವಂದನ (PMVVY) ಯೋಜನೆ ಪಿಎಂ ಪೋಸ್ಟ್ ಆಫೀಸ್ ಮಾಸಿಕ ಆದಾಯ (POMIS) ಯೋಜನೆ ಇನ್ನು ಅನೇಕ ಅದಕ್ಕೆ ಯೋಜನೆಗಳು ಜಾರಿಗೆ ಬಂದು ಈಗಾಗಲೇ ದೇಶದಾದ್ಯಂತ ಕೋಟ್ಯಂತರ ಜನರು ಇದರ ಅನುಕೂಲತೆಯನ್ನು ಸಹ ಪಡೆಯುತ್ತಿದ್ದಾರೆ.
ಈ ಬಾರಿ ಬಜೆಟ್ ಅಲ್ಲಿ ಇನ್ನು ಸಹ ಕೆಲವು ಹೊಸ ಯೋಜನೆಗಳನ್ನು ಇನ್ನಷ್ಟು ಜನರಿಗೆ ಹತ್ತಿರವಾಗುವಂತಹ ಅನುಕೂಲವಾಗುವಂತಹ ಯೋಜನೆಗಳನ್ನು ಇದಕ್ಕೆ ಸೇರಿಸಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ವತಿಯಿಂದ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ (MSSC) ಸೇರ್ಪಡೆ ಆಗಿದೆ. ಈ ಮಹಿಳಾ ಸಮ್ಮನ್ ಉಳಿತಾಯ ಯೋಜನೆಯಲ್ಲಿ ಮಹಿಳೆಯರು ಗರಿಷ್ಠ 2 ಲಕ್ಷದವರೆಗೆ ಹಣ ಠೇವಣಿ ಇಟ್ಟು ಶೇಕಡ 7.5%ರಷ್ಟು ಬಡ್ಡಿ ಪಡೆಯಬಹುದಾಗಿದೆ.
ಹಾಗೆಯೇ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಠೇವಣಿ ಇಡುವ ಹಿರಿಯ ನಾಗರಿಕರಿಗೆ ಗರಿಷ್ಠ 30 ಲಕ್ಷದವರೆಗೆ ಠೇವಣಿ ಇಟ್ಟು 8% ಬಡ್ಡಿದರವನ್ನು ಪಡೆಯಬಹುದಾಗಿದೆ. ಜಂಟಿಯಾಗಿ ಇಡುವುದಾದರೆ 60 ಲಕ್ಷದವರೆಗೂ ಕೂಡ ನೀವು ಠೇವಣಿ ಇಡಬಹುದಾಗಿದೆ. ಒಂದು ವೇಳೆ ನೀವೇನಾದರೂ ಈ ಯೋಜನೆಯಲ್ಲಿ ಒಂದು 1.1 ಕೋಟಿ ಠೇವಣಿ ಇಟ್ಟರೆ ಮಾಸಿಕವಾಗಿ ನಿಮಗೆ 70,500 ಗಳು ಅದಕ್ಕೆ ಬಡ್ಡಿಯ ರೂಪದ ನಗದಾಗಿ ನಿಮ್ಮ ಕೈ ಸೇರಲಿದೆ.
ನೀವು ಸಹ ನಿಮ್ಮ ಹಣವನ್ನು ಠೇವಣಿಯಲ್ಲಿ ಇಡುವ ಯೋಜನೆಗಳಿಗಾಗಿ ಹುಡುಕುತ್ತಿದ್ದರೆ ಈ ಅತ್ಯುತ್ತಮ ಯೋಜನೆಯಲ್ಲಿ ನಿಮ್ಮ ಹಣವನ್ನು ಠೇವಣಿ ಇಡಿ. ಇದು ಭಧ್ರತಾ ದೃಷ್ಟಿಯಿಂದ ಹಾಗೂ ಅತಿ ಹೆಚ್ಚು ಲಾಭ ಕೊಡುವ ಠೇವಣಿಯು ಆಗಿ ನಿಮಗೆ ನಿಶ್ಚಿಂತೆಯ ಜೀವನ ನಡೆಸಲು ಅನುಕೂಲ ಮಾಡಿಕೊಡಲಿದೆ. ಈ ಉಪಯುಕ್ತ ಮಾಹಿತಿಯನ್ನು ಇನ್ನು ಹೆಚ್ಚಿನ ಜನರ ಜೊತೆ ಹಂಚಿಕೊಂಡು ಕೇಂದ್ರ ಸರ್ಕಾರದ ಈ ಯೋಜನೆಯ ಫಲಗಳನ್ನು ಮತ್ತಷ್ಟು ಮಂದಿ ಅನುಭವಿಸಲು ಸಹಾಯಕರಾಗಿ.