ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಜಾರಿ ಆಗುತ್ತಲೇ ಇರುತ್ತವೆ. ಅದರಲ್ಲಿ ರೈತರಿಗೆ, ಕಟ್ಟಡ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನೇಕ ಸಹಾಯ ಧನಗಳು ಪ್ರೋತ್ಸಾಹ ದಿನಗಳು ಸ್ಕಾಲರ್ಶಿಪ್ ಗಳು ಬರುತ್ತಲೇ ಇರುತ್ತವೆ. ನೀವು ಅರ್ಹರಾಗಿ ಅರ್ಜಿ ಸಲ್ಲಿಸಿದ್ದರು ಕೂಡ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಒದಗಿಸಿದ್ದರು ಕೂಡ ನಿಮ್ಮ ಖಾತೆಗೆ ಮಾತ್ರ ಹಣ ಜಮೆ ಆಗುತ್ತಿರುವುದಿಲ್ಲ.
ಈ ರೀತಿ ಅನೇಕ ಜನರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಆಗುವ ಅದೃಷ್ಟ ತಪ್ಪಿಸಿಕೊಂಡಿದ್ದಾರೆ ಹಾಗೂ ವಿದ್ಯಾರ್ಥಿಗಳು ಕೂಡ SSP ಪೋರ್ಟಲ್ ಅಲ್ಲಿ ಅರ್ಜಿ ಸಲ್ಲಿಸಿದರು ಅವರಿಗೆ ಸಲಬೇಕಾದ ವಿದ್ಯಾರ್ಥಿ ವೇತನ ಖಾತೆಗೆ ಜಮೆ ಆಗಿರುವುದಿಲ್ಲ ಇದಕ್ಕೆಲ್ಲ ಕಾರಣ ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ನೀವು ಎಲ್ಲಾ ಪೂರಕ ಮಾಹಿತಿಗಳನ್ನು ಒದಗಿಸಿದ್ದರು ತಪ್ಪಿಲ್ಲದೆ ಅರ್ಜಿಗಳನ್ನು ಭರ್ತಿ ಮಾಡಿ ಕಳುಹಿಸಿದರು ಕೂಡ ನಿಮ್ಮ ಖಾತೆಗಳಿಗೆ ಹಣ ಜಮೆ ಆಗುತ್ತಿಲ್ಲ ಎಂದರೆ ನೀವು ನಿಮ್ಮ ಆಧಾರ್ ಸೀಡಿಂಗ್ ಆಗಿದೆಯಾ, NPCI ಮ್ಯಾಪಿಂಗ್ ಆಗಿದ್ದೀಯಾ ಎನ್ನುವುದನ್ನು ಚೆಕ್ ಮಾಡಬೇಕು. ಹೊಸ ನಿಯಮಗಳ ಪ್ರಕಾರ ಸರ್ಕಾರದ ಯಾವುದೇ ಯೋಜನೆಯ ಸಹಾಯಧನ ಅಥವಾ ವಿದ್ಯಾರ್ಥಿ ವೇತನ ಮುಂತಾದ ಹಣಗಳು ಜಮೆ ಆಗಬೇಕು ಎಂದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿರಲೇಬೇಕು.
ಇಲ್ಲವಾದರೆ ಈ ರೀತಿ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ನೀವು ಫಲಾನುಭವಿಗಳಾಗಲು ಆಯ್ಕೆ ಆಗಿದ್ದರೂ ಕೂಡ ಹಣ ಮಾತ್ರ ಖಾತೆಗೆ ಬರುವುದಿಲ್ಲ ಅದು ಹೋಲ್ಡ್ ಆಗಿರುತ್ತದೆ. ಆನ್ಲೈನ್ ಮೂಲಕ ನೀವು ನಿಮ್ಮ ಆಧಾರ್ ಸೀಡಿಂಗ್ ಆಗಿದೆಯಾ, NPCI ಮ್ಯಾಪಿಂಗ್ ಆಗಿದೆಯಾ ಎಂದು ತಿಳಿದುಕೊಳ್ಳಬಹುದು ಮತ್ತು ಮತ್ತು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿ ಅದನ್ನು ಪೂರ್ತಿಗೊಳಿಸಬಹುದು. ಅದಕ್ಕಾಗಿ ಈ ವಿಧಾನಗಳನ್ನು ಅನುಸರಿಸಿ.
ಮೊದಲಿಗೆ ಗೂಗಲ್ ಮೂಲಕ UIDAI ಎಂದು ಸರ್ಚ್ ಮಾಡಿ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಆ ಸರ್ವೀಸ್ ಅಲ್ಲಿ ಚೆಕ್ ಆಧಾರ್ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಎನ್ನುವ ಆಯ್ಕೆ ಇರುತ್ತದೆ ಅಥವಾ ಆಧಾರ್ ಸೀಡಿಂಗ್ ಸ್ಟೇಟಸ್ ಇಸ್ ಫೆಚ್ಡ್ ಫ್ರಂಮ್ NPCI ಸರ್ವರ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ ಬರುವ ಓಟಿಪಿ ಹಾಕಿ ನಿಮ್ಮ ಆಧಾರ್ ಸೀಡಿಂಗ್ ಯಾವ ಬ್ಯಾಂಕ್ ಅಕೌಂಟ್ ಜೊತೆ ಆಗಿದೆ ಅದು ಆಕ್ಟಿವ್ ಆಗಿ ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಬಹುದು.
ಮತ್ತೊಂದು ವಿಧಾನ ಕೂಡ ಇದೆ. ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ DPT ಕರ್ನಾಟಕ ಆಪ್ ಡೌನ್ ಲೋಡ್ ಮಾಡಿಕೊಂಡು ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ಸ್ ಈ ಆಪ್ಶನ್ ಮೂಲಕ ಕೂಡ ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಆದ ಸೀಡಿಂಗ್ ಆಗಿಲ್ಲ ಎಂದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದನ್ನು ಪೂರ್ತಿಗೊಳಿಸಬಹುದು.
ಅಥವಾ ನಿಮ್ಮ ಬ್ಯಾಂಕ್ ಗೆ ಭೇಟಿಕೊಟ್ಟು ಅರ್ಜಿ ಫಾರಂ ತುಂಬಿಸಿ ಅಗತ್ಯ ದಾಖಲೆಗಳನ್ನು ಕೂಡ ಲಗತ್ತಿಸಿ, ಈ ಕ್ರಿಯೆಯನ್ನು ಪೂರ್ತಿಗೊಳಿಸಬಹುದು. ಈ ಕೂಡಲೇ ನೀವು ಕೂಡ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಮತ್ತು ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿಕೊಳ್ಳಿ.