ಗೂಗಲ್ ಪೇ ಬಳಕೆ ಮಾಡುವವರಿಗೆ ಗುಡ್ ನ್ಯೂಸ್ ಇನ್ನು ಮುಂದೆ ಗೂಗಲ್ ಪೇ ನಲ್ಲೆ 1 ಲಕ್ಷದವರೆಗೆ ಸಾಲ ಪಡೆಯಬಹುದು.

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಹಣದ ಮೂಲಕ ವ್ಯವಹಾರ ನಡೆಸುವುದು ಕಡಿಮೆ. ವೈಯಕ್ತಿಕ ವಿನಿಮಯಕ್ಕೆ ಆಗಲಿ ಅಥವಾ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೇ ಆಗಲಿ ಫೋನ್ ಪೇ, ಗೂಗಲ್ ಪೇ ಮುಂತಾದ ಯುಪಿಐ ಆಧಾರಿತ ಪೇಮೆಂಟ್ ಆಪ್ ಗಳ ಮೂಲಕ ಮನಿ ಟ್ರಾನ್ಸ್ಫರ್ ನಡೆಯುತ್ತಿರುತ್ತದೆ. ಗೂಗಲ್ ಪೇ ಆಪ್ ಅನ್ನು ಭಾರತದ ಕೋಟ್ಯಾಂತರ ಬಳಕೆದಾರರು ಬಳಸುತ್ತಿದ್ದಾರೆ.

ಗೂಗಲ್ ಪೇ ಮೂಲಕ ಮತ್ತೊಬ್ಬರಿಗೆ ಹಣ ಕಳುಹಿಸುವುದು. ಗೂಗಲ್ ಪೇ ಕೊಡುವ ಆಫರ್ಗಳನ್ನು ಬಳಸಿಕೊಂಡು ಹಣ ಉಳಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕಿಗೆ ಹೋಗದೆ ಹಣದ ಕ್ರೆಡಿಟ್, ಡೆಬಿಟ್ ಅಥವಾ ಆರ್ ಡಿ ಇತ್ಯಾದಿ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಸಂಪೂರ್ಣ ಕೆಲಸವನ್ನು ಮಾಡಿಕೊಳ್ಳುವುದು ಇವುಗಳಿಂದ ಸಾಧ್ಯವಾಗುತ್ತದೆ

ಈಗ ಮುಂದುವರೆದು ಲೋನ್ ತೆಗೆದು ಕೊಳ್ಳುವುದಕ್ಕೂ ಕೂಡ ಇದು ಸಹಾಯ ಮಾಡುತ್ತಿದೆ. ಗೂಗಲ್ ಪೇ ಲೋನ್ ಎನ್ನುವ ಹೆಸರಿನಲ್ಲಿ ಗೂಗಲ್ ಪೇ ಬಳಕೆದಾರರಿಗೆ ಸಾಲ ಸೌಲಭ್ಯ ಸಿಗುತ್ತಿದೆ. ಇದರಲ್ಲಿ ಒಂದು ಲಕ್ಷದವರೆಗೆ ಕೂಡ ಸಾಲ ಪಡೆದುಕೊಳ್ಳಬಹುದು. ನೀವು ಮಾಹಿತಿ ಕೊಟ್ಟ 30 ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ. ಇಂತಹ ಸರಳವಾದ ಸುಲಭವಾದ ವಿಧಾನ ಹಣದ ಅವಶ್ಯಕತೆ ಇದ್ದ ಸಮಯದಲ್ಲಿ ಕೋಟ್ಯಂತರ ಜನರಿಗೆ ಅನುಕೂಲವಾಗುತ್ತದೆ.

ಹಾಗಾಗಿ ಗೂಗಲ್ ಪೇ ಲೋನ್ ಬಗ್ಗೆ ಗೂಗಲ್ ಪೇ ಆಪ್ ಮೂಲಕ ಹಣದ ಚಟುವಟಿಕೆ ನಡೆಸುವ ಎಲ್ಲಾ ಗ್ರಾಹಕರು ಕೂಡ ತಿಳಿದುಕೊಂಡಿರಲೇಬೇಕು. ಈ ಗೂಗಲ್ ಪೇ ಲೋನ್ ತೆಗೆದುಕೊಳ್ಳುವುದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡಿದ್ದೇವೆ ನೋಡಿ.

ಗೂಗಲ್ ಪೇ ಲೋನ್ ಅನ್ನು ಗೂಗಲ್ ಪೇ ಬಳಸುವ ಎಲ್ಲಾ ಬಳಕೆದಾರರು ಪಡೆದುಕೊಳ್ಳಬಹುದು. ಆದರೆ ಅವರ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು. ಗೂಗಲ್ ಪೇ ಲೋನ್ ಪಡೆದುಕೊಳ್ಳಬೇಕು ಎಂದರೆ ಮೊದಲು ನಿನ್ನ ಫೋನಲ್ಲಿ ಗೂಗಲ್ ಪೇ ಆಪ್ ಇರಬೇಕು. ಇಲ್ಲವಾದಲ್ಲಿ ಪ್ಲೇಸ್ಟೋರ್ ಗೆ ಹೋಗಿ ಗೂಗಲ್ ಪೇ ಆಪ್ ಡೌನ್ಲೋಡ್ ಮಾಡಿಕೊಳ್ಳಿ.

ಆರ್ಥಿಕ ಚಟುವಟಿಕೆ ಮಾಡಲು ಅನುಕೂಲವಾಗುವಂತಹ ಹಂತದವರೆಗೆ ಎಲ್ಲ ಅಪ್ಡೇಟ್ ಮಾಡಿ ಸಿದ್ಧಪಡಿಸಿಕೊಳ್ಳಿ. ಇದೆಲ್ಲ ಆದಮೇಲೆ ಬಿಸಿನೆಸ್ ಎನ್ನುವ ಒಂದು ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಗೂಗಲ್ ಪೇ ಲೋನ್ ಅಲ್ಲಿ ಯಾವ ಯಾವ ಬ್ಯಾಂಕ್ ಗಳು ಲೋನ್ ನೀಡುತ್ತವೆ ಎನ್ನುವುದರ ಪಟ್ಟಿ ಕಾಣಿಸುತ್ತದೆ ಅದರಲ್ಲಿ ನಿಮಗೆ ಯಾವ ಬ್ಯಾಂಕ್ ಇಂದ ಸಾಲ ಸೌಲಭ್ಯ ಬೇಕು ಅದನ್ನು ಸೆಲೆಕ್ಟ್ ಮಾಡಿ.

ನಿಮಗೆ ಒಂದು ಅರ್ಜಿ ಕಾಣಿಸುತ್ತದೆ, ಆ ಅರ್ಜಿಯನ್ನು ಸರಿಯಾದ ಮಾಹಿತಿಗಳೊಂದಿಗೆ ತುಂಬಿಸಿ ಮತ್ತು ಕೇಳಲಾದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಬಳಿಕ ನಿಮಗೆ ಎಷ್ಟು ರೂಪಾಯಿವರೆಗೆ ಲೋನ್ ಬೇಕು ಎನ್ನುವ ಆಪ್ಷನ್ ತೋರಿಸುತ್ತದೆ ಅದರಲ್ಲಿ ಎಷ್ಟು ಮೊತ್ತ ಬೇಕು ಅದನ್ನು ತುಂಬಿಸಿ ನಿಮ್ಮ ಸಹಿಯೊಂದಿಗೆ ಅರ್ಜಿ ಸಬ್ಮಿಟ್ ಮಾಡಿ. ಆನಂತರ ಬ್ಯಾಂಕ್ ಕಡೆಯಿಂದ ನಿಮ್ಮ ಅರ್ಜಿ ಅರ್ಹ ಆಗಿದೆಯೋ, ನೀವು ಲೋನ್ ಪಡೆಯಲು ಅನರ್ಹ ಆಗಿದ್ದೀರೋ ಎನ್ನುವುದರ ಬಗ್ಗೆ ಖಚಿತಪಡಿಸಲು ಮೆಸೇಜ್ ಒಂದು ಬರುತ್ತದೆ.

ನೀವು ಅರ್ಹರಾಗಿದ್ದ ಪಕ್ಷದಲ್ಲಿ 30 ನಿಮಿಷಗಳಲ್ಲಿ ನೀವು ಅರ್ಜಿ ಸಲ್ಲಿಸಿದ ಲೋನ್ ಮೊತ್ತದ ಹಣ ನಿಮ್ಮ ಖಾತೆಗೆ ಜಮೆಯಾಗಿರುತ್ತದೆ. ಒಂದು ವಿಶೇಷ ಸೂಚನೆ ಏನೆಂದರೆ ಈ ರೀತಿ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳುವ ಮುನ್ನ ಅಲ್ಲಿರುವ ಎಲ್ಲಾ ಟರ್ಮ್ಸ್ ಮತ್ತು ಕಂಡಿಶನನ್ನು ತಪ್ಪದೆ ಓದಿ ಅರ್ಥೈಸಿಕೊಂಡು ನಂತರ ಅರ್ಜಿ ಸಲ್ಲಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now