ರೈತರಿಗಾಗಿ ಕೇಂದ್ರ ಸರ್ಕಾರಗಳು ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕಿಸಾನ್ ಸಮ್ಮಾನ್ ಯೋಜನೆಯಂತಹ ಸಹಾಯಧನ ನೀಡುವ ಯೋಜನೆ, ಫಸಲ್ ಭೀಮಾ ಯೋಜನೆ ಅಂತ ಬೆಳೆ ವಿಮೆ ಯೋಜನೆ ಸೇರಿದಂತೆ ಸಹಕಾರಿ ವಲಯದಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಬಡ್ಡಿ ರಹಿತ ಸಾಲ ಅಥವಾ ಕಡಿಮೆ ಬಡ್ಡಿಯಲ್ಲಿ ಸಾಲ, ಸಬ್ಸಿಡಿ ರೂಪದ ಸಹಾಯಧನ ಮತ್ತು ಕೃಷಿ ಪರಿಕರಣೆಗಳ ಖರೀದಿಗೆ ಸಬ್ಸಿಡಿ ರೂಪದಲ್ಲಿ ಸಹಾಯ ಹಸ್ತ ಇನ್ನೂ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿವೆ.
ಸದ್ಯಕ್ಕೆ ರಾಜ್ಯ ಸರ್ಕಾರದಲ್ಲಿ ಮತ್ತೊಂದು ಹೊಸ ಯೋಜನೆಯ ಅನುದಾನ ನಡೆಯುತ್ತಿದ್ದು ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರ ಪ್ರಕಾರ ಕೃಷಿ ಉತ್ಪನ್ನ ಸಂಸ್ಕರಣೆ ಯೋಜನೆ ಅಡಿ ರಿಯಾಯಿತಿ ದರದಲ್ಲಿ ಟಾರ್ಪಲಿನ್ ನೀಡಲಾಗುತ್ತಿದೆ. ಇದಕ್ಕಾಗಿ ರೈತರು ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ನೀಡಿ ನಂತರ ಯೋಜನೆ ಮೂಲಕ ಟಾರ್ಪಲಿನ್ ಪಡೆದುಕೊಳ್ಳಬೇಕಾಗುತ್ತದೆ.
ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರೈತರಿಂದ ಅರ್ಜಿ ಆಹ್ವಾನಿಸಿ ಟಾರ್ಪಲಿನ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ, ಇದಕ್ಕಾಗಿ ಏಪ್ರಿಲ್ 10 ರಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ. ಶೀಘ್ರದಲ್ಲಿಯೇ ಎಲ್ಲ ಜಿಲ್ಲೆಗಳಲ್ಲೂ ಈ ಅನುದಾನ ಜಾರಿಗೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಉಪಯುಕ್ತ ಮಾಹಿತಿಯನ್ನು ಎಲ್ಲಾ ರೈತ ವರ್ಗದವರು ತಿಳಿದುಕೊಳ್ಳಬೇಕಾದದ್ದು ಅನಿವಾರ್ಯ. ಆದ್ದರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅದಕ್ಕೆ ಬೇಕಾದ ದಾಖಲೆಗಳನ್ನು ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ಉಪಯುಕ್ತ ಮಾಹಿತಿಯನ್ನು ತಿಳಿದುಕೊಂಡು ಮತ್ತಷ್ಟು ಜನರಿಗೆ ಹಂಚಿ ಎಲ್ಲಾ ರೈತ ಬಾಂಧವರಿಗೂ ಈ ಮಾಹಿತಿ ತಲುಪುವಂತೆ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ :-
● ಮೊದಲು ಎಲ್ಲ ಜಮೀನು ಹೊಂದಿರುವ ರೈತರು ಕೂಡ ತಮ್ಮ ತಾಲೂಕು ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ತಮ್ಮ ಜಮೀನಿನ ನೋಂದಣಿ ಮಾಡಿಸಬೇಕಾಗುತ್ತದೆ. ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ಆಹ್ವಾನಿಸಿ ರೈತರ ಜಮೀನಿಗೆ ಒಂದು ನೋಂದಣಿ ಸಂಖ್ಯೆಯನ್ನು ಸಿಬ್ಬಂದಿ ನೀಡುತ್ತಾರೆ.
● ನೋಂದಣಿ ಸಂಖ್ಯೆಯಿಂದ ಈ ಯೋಜನೆಗೆ ಅರ್ಜಿ ಹಾಕಬೇಕು. ಇದಲ್ಲದೆ ಕೃಷಿ ಇಲಾಖೆಯಿಂದ ರೈತರಿಗಾಗಿ ಬರುವ ಎಲ್ಲಾ ಯೋಜನೆಗಳ ಫಲಾನುಭವಿಗಳಾಗಲು ಈ ನೋಂದಣಿ ಸಂಖ್ಯೆ ಬಹಳ ಮುಖ್ಯವಾಗಿರುತ್ತದೆ.
● ನಂತರ ಸಂಪರ್ಕ ಕೇಂದ್ರಕ್ಕೆ ಹೋಗಿ ಕೇಳುವ ಅಗತ್ಯ ದಾಖಲೆಗಳನ್ನು ಕೊಟ್ಟು ಈ ಯೋಜನೆಗೆ ಅರ್ಜಿ ಪಡೆದು ಅರ್ಜಿ ಫಾರಂ ಭರ್ತಿ ಮಾಡಿ ಸಲ್ಲಿಸಬೇಕು.
● ಇಲಾಖೆಗೆ ಅರ್ಜಿ ಸಲ್ಲಿಸಿದ ರೈತರ ಹಿರಿತನದ ಆಧಾರದ ಮೇಲೆ ಕೃಷಿ ಜಮೀನು ಹೊಂದಿದ ಅರ್ಹ ರೈತರಿಗೆ ಟಾರ್ಪಲಿನ್ ವಿತರಣೆ ಮಾಡಲಾಗುತ್ತದೆ.
● ಹಿಂದೆ ಈ ಯೋಚನೆಯಲ್ಲಿ ಟಾಪರ್ನ್ ಪಡೆದಿದ್ದ ರೈತರಿಗೆ ಪ್ರತಿ ಬಾರಿ ಫಲಾನುಭವಿಗಳಾಗಲು ಅವಕಾಶ ಇರುವುದಿಲ್ಲ.
ರೈತ ಸಂಪರ್ಕ ಕೇಂದ್ರದಲ್ಲಿ ಜಮೀನು ನೋಂದಣಿ ಬೇಕಾಗುವ ಅರ್ಹ ದಾಖಲೆಗಳು :-
● ಜಮೀನಿನ ಪಹಣಿ ಪತ್ರ
● ಆಧಾರ್ ಕಾರ್ಡ್ ಪ್ರತಿ
● ಬ್ಯಾಂಕ್ ಪಾಸ್ ಬುಕ್ ಪ್ರತಿ
● ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವ ಸಮಯದಲ್ಲಿ ಬೇಕಾಗುವ ದಾಖಲೆಗಳು:-
● ಜಮೀನು ಪಹಣಿ ಪತ್ರ
● ಆಧಾರ್ ಕಾರ್ಡ್ ಪ್ರತಿ
● ಬ್ಯಾಂಕ್ ಪಾಸ್ ಬುಕ್ ಪ್ರತಿ
● ಜಮೀನು ನೋಂದಣಿ ಸಂಖ್ಯೆ
● ಇತ್ತೀಚಿನ ಭಾವಚಿತ್ರ